RTO ಅಧಿಕಾರಿ ಮನೆ ಮೇಲೆ ದಾಳಿ: ಆದಾಯಕ್ಕಿಂತ 650 ಪಟ್ಟು ಹೆಚ್ಚು ಮೌಲ್ಯದ ಆಸ್ತಿ ಪತ್ತೆ!

ಮನೆಯಲ್ಲಿ ಮಿನಿ ಥಿಯೇಟರ್ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Team Udayavani, Aug 18, 2022, 4:07 PM IST

RTO ಅಧಿಕಾರಿ ಮನೆ ಮೇಲೆ ದಾಳಿ: ಆದಾಯಕ್ಕಿಂತ 650 ಪಟ್ಟು ಹೆಚ್ಚು ಮೌಲ್ಯದ ಆಸ್ತಿ ಪತ್ತೆ!

ಭೋಪಾಲ್: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಮಧ್ಯಪ್ರದೇಶದ ಜಬಲ್ ಪುರ್ ನ  ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ ಟಿಒ)ಯ ಮನೆ ಮೇಲೆ ಬುಧವಾರ(ಆಗಸ್ಟ್ 17) ರಾತ್ರಿ ಆರ್ಥಿಕ ಅಪರಾಧ ದಳ ದಾಳಿ ನಡೆಸಿದ್ದು, ಬೃಹತ್ ಪ್ರಮಾಣದ ಆಸ್ತಿ, ಪಾಸ್ತಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಲಿಂಗಾಯತ ಮತ ಬೇಟೆ ನಾಚಿಗೆಗೇಡಿನ ಸಂಗತಿ: ಕೈ ನಾಯಕರಿಗೆ ಬಿಜೆಪಿ ಟಾಂಗ್

ವರದಿಯ ಪ್ರಕಾರ, ಜಬಲ್ ಪುರದ ಶತಾಬ್ದಿ ಪುರಂ ಕಾಲೋನಿಯಲ್ಲಿರುವ ಆರ್ ಟಿಒ ಸಂತೋಷ್ ಪಾಲ್ ನಿವಾಸದಲ್ಲಿ ಆತನ ಆದಾಯಕ್ಕಿಂತ 650ಪಟ್ಟು ಹೆಚ್ಚು ಮೌಲ್ಯದ ಆಸ್ತಿಯನ್ನು ಆರ್ಥಿಕ ಅಪರಾಧ ದಳ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದು, ಪಾಲ್ ಪತ್ನಿ ಕೂಡಾ ಆರ್ ಟಿಒ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ವಿವರಿಸಿದೆ.

ಆರ್ಥಿಕ ಅಪರಾಧ ದಳ ದಾಳಿ ನಡೆಸಿದ್ದ ಸಂದರ್ಭದಲ್ಲಿ ಪಾಲ್ ಮನೆಯಲ್ಲಿ 16 ಲಕ್ಷ ರೂಪಾಯಿ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು, ಐಶಾರಾಮಿ ಕಾರುಗಳು, ಹಲವು ಇನ್ನಿತರ ದಾಖಲೆಗಳು ಪತ್ತೆಯಾಗಿದ್ದು, ಮನೆಯಲ್ಲಿ ಮಿನಿ ಥಿಯೇಟರ್ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಲ್ ಹೆಸರಿನಲ್ಲಿ ಡಜನ್ ಗಟ್ಟಲೇ ಮನೆಗಳು, ಫಾರಂ ಹೌಸ್ ಗಳು ಇದ್ದಿರುವ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ತಮ್ಮ ಆದಾಯಕ್ಕಿಂತ ನೂರಾರು ಪಟ್ಟು ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದಾಗಿ ಆರ್ ಟಿಒ ಸಂತೋಷ್ ಪಾಲ್ ಮತ್ತು ಆತನ ಪತ್ನಿ, ಕ್ಲರ್ಕ್ ರೇಖಾ ಪಾಲ್ ವಿರುದ್ಧ ದೂರು ಬಂದಿರುವುದಾಗಿ ಆರ್ಥಿಕ ಅಪರಾಧ ದಳದ ಎಸ್ಪಿ ದೇವೇಂದ್ರ ಪ್ರತಾಪ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಟಾಪ್ ನ್ಯೂಸ್

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ನ್ಯಾಶನಲ್‌ ಗೇಮ್ಸ್‌ ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಸೋಲು

ನ್ಯಾಶನಲ್‌ ಗೇಮ್ಸ್‌ ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಸೋಲು

ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ

ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

1-sada

ಕಾನ್ಪುರ ಭೀಕರ ರಸ್ತೆ ಅಪಘಾತ: 22 ಕ್ಕೂ ಹೆಚ್ಚು ಭಕ್ತರ ಸಾವು

1,476 ಕೋಟಿ ರೂ. ಮೊತ್ತದ ಮಾದಕ ವಸ್ತು ವಶ; ಸ್ಪೇನ್‌ನಿಂದ ಬಂದಿದ್ದೇ ಬೃಹತ್‌ ಕಂಟೈನರ್‌?

1,476 ಕೋಟಿ ರೂ. ಮೊತ್ತದ ಮಾದಕ ವಸ್ತು ವಶ; ಸ್ಪೇನ್‌ನಿಂದ ಬಂದಿದ್ದೇ ಬೃಹತ್‌ ಕಂಟೈನರ್‌?

ಕೇರಳದ ಸಿಪಿಐ(ಎಂ) ನಾಯಕ, ಮಾಜಿ ಗೃಹ ಸಚಿವ ಕೊಡಿಯೇರಿ ನಿಧನ

ಕೇರಳದ ಸಿಪಿಐ(ಎಂ) ನಾಯಕ, ಮಾಜಿ ಗೃಹ ಸಚಿವ ಕೊಡಿಯೇರಿ ನಿಧನ

MUST WATCH

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

ಹೊಸ ಸೇರ್ಪಡೆ

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.