ಯಾರೋ ಒಂದಿರಿಬ್ಬರು ಬಿಟ್ಟರೆ, ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ: ರೇಣುಕಾಚಾರ್ಯ
Team Udayavani, Jun 17, 2021, 2:01 PM IST
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ. ಯಾರು ಬಿಎಸ್ ವೈ ವಿರುದ್ಧ ಮಾತಾಡಿದ್ದಾರೆ, ಅವರು ಶಿಸ್ತುಕ್ರಮಕ್ಕೆ ಆಗ್ರಹ ಮಾಡುತ್ತೇವೆ. ಯಾರೋ ಒಂದಿರಿಬ್ಬರು ಬೆರಳೆಣಿಕೆಯಷ್ಟು ಮಂದಿ ಬಿಟ್ಟರೆ ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡುತ್ತಿಲ್ಲ, ಸಚಿವ ಸ್ಥಾನ ಸಿಗಲಿಲ್ಲ ಎಂಬ ಹತಾಶೆಯಿಂದ ಅವರು ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ಯಡಿಯೂರಪ್ಪ ನವರಿಗೆ ವಯಸ್ಸಾದರೂ ಹಗಲಿರುಳು ಕೆಲಸ ಮಾಡ್ತಿದ್ದಾರೆ. ವಿಶ್ವನಾಥ್ ಅವರೇ ನಿಮಗೆ ವಯಸ್ಸು ಎಷ್ಟು.? ಹಿಂದೆ ಸಿದ್ದರಾಮಯ್ಯ, ಎಸ್ ಎಂ ಕೃಷ್ಣ ವಿರುದ್ದ ಏನೆಲ್ಲಾ ಮಾತಾಡಿದಿರಿ, ಆಮೇಲೆ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟ, ದೇವೇಗೌಡ, ಕುಮಾರಸ್ವಾಮಿ ಗೆ ಮೋಸ ಮಾಡಿದಿರಿ, ನಮ್ಮ ಪಕ್ಷಕ್ಕೆ ನೀವು ಬಂದಾಗ ಕೋರ್ಟ್ ನಲ್ಲಿ ನಿಮ್ಮ ವಿರುದ್ದ ಆದೇಶ ಇದ್ದರೂ ನಿಮ್ಮನ್ನು ಎಂಎಲ್ಸಿ ಮಾಡಿದರು ಎಂದರು.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಬೇಡ ಆದರೆ ಸಂಪುಟ ಪುನಾರಚನೆ ಮಾಡಿ: ಅರುಣ್ ಸಿಂಗ್ ಗೆ ಕೆಲ ಶಾಸಕರ ಬೇಡಿಕೆ
ಶಾಸಕ ಯತ್ನಾಳ್ ತಿರುಕನ ಕನಸು ಕಾಣುತ್ತಿದ್ದಾರೆ. ನೀನು ಮೌನವಾಗಿರು, ನಿನ್ನನ್ನು ಹೋಮ್ ಮಿನಿಸ್ಟರ್ ಮಾಡುತ್ತೇನೆ ಎಂದು ಯತ್ನಾಳ್ ನನಗೆ ಆಫರ್ ಮಾಡಿದ್ದರು. ಇದು ಸತ್ಯ. ಯತ್ನಾಳ್ ಅವರ ತಿರುಕನ ಕನಸು ಯಾವುದೇ ಕಾರಣಕ್ಕೂ ನನಸಾಗದು ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲು
ಗುಲಾಮಿ ಮನಸ್ಥಿತಿ ತೊಡೆದು ಹಾಕಲು ಎನ್ಇಪಿ ಸಹಾಯಕ: ಹೊಸಬಾಳೆ
ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಪರಿಶೀಲನ ಸಮಿತಿ
MUST WATCH
ಹೊಸ ಸೇರ್ಪಡೆ
ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್ ವಿದ್ಯಾಸಂಸ್ಥೆ”
ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು