IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌


Team Udayavani, May 30, 2023, 1:54 AM IST

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

ಅಹ್ಮದಾಬಾದ್‌: ಭಾರೀ ಮಳೆಯಿಂದಾಗಿ ಸೋಮವಾರಕ್ಕೆ ಮುಂದೂಡಲ್ಪಟ್ಟ ಐಪಿಎಲ್‌ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 5 ವಿಕೆಟ್‌ಗಳಿಂದ ಸೋಲಿಸಿದೆ,

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ 4 ವಿಕೆಟಿಗೆ 214 ರನ್‌ ಪೇರಿಸಿತ್ತು, ಆದರೆ ಚೆನ್ನೈ ಚೇಸಿಂಗ್‌ ವೇಳೆ ಮಳೆಯ ಆಗಮನವಾಗಿದೆ. ಚೆನ್ನೈ ಕೇವಲ 3 ಎಸೆತಗಳನ್ನಷ್ಟೇ ಎದುರಿಸಿದ್ದು, ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದೆ. ಸುಮಾರು ಎರಡು ತಾಸುಗಳ ಬಳಿಕ ಆಟ ಪುನರಾರಂಭಗೊಂಡಾಗ ಚೆನ್ನೈಗೆ 15 ಓವರ್‌ಗಳಲ್ಲಿ 171 ರನ್‌ ಗಳಿಸುವ ಗುರಿಯನ್ನು ನೀಡಲಾಗಿತ್ತು. ಮಳೆ ನಿಂತ ಬಳಿಕ ಆಟ ಮುಂದುವರಿಸಿದ ಆರಂಭಿಕರಾದ ರುತುರಾಜ್‌ ಗಾಯಕ್ವಾಡ್‌ ಮತ್ತು ಡೇವನ್‌ ಕಾನ್ವೇ ಭರ್ಜರಿ ಆರಂಭ ಒದಗಿಸಿದ್ದು ಮೊದಲ ವಿಕೆಟಿಗೆ 6.3 ಓವರ್‌ಗಳಲ್ಲಿ 74 ರನ್‌ ಪೇರಿಸಿದ್ದರು. ಅವರಿಬ್ಬರ ಬಳಿಕ ಉಳಿದ ಆಟಗಾರರೆಲ್ಲರೂ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು,

ನಡೆಯದ ಮೋಹಿತ್‌ ಮ್ಯಾಜಿಕ್‌ ಅಂತಿಮ ಓವರಿನಲ್ಲಿ ಚೆನ್ನೈ ಗೆಲ್ಲಲು 13 ರನ್‌ ಗಳಿಸಬೇಕಿತ್ತು. ಮೋಹಿತ್‌ ಶರ್ಮ ಎಸೆದ ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ತಂಡ ಕೇವಲ ಮೂರು ರನ್‌ ಗಳಿಸಿತ್ತು, ಇದರಿಂದಾಗಿ ಗುಜರಾತ್‌ ಗೆಲ್ಲುವ ಆಸೆ ಬಲವಾಯಿತು. ಆದರೆ ಗುಜರಾತ್‌ನ ಈ ಕನಸನ್ನು ರವೀಂದ್ರ ಜಡೇಜಾ ನುಚ್ಚುನೂರು ಮಾಡಿದರು. ಅಂತಿಮ ಎರಡು ಎಸೆತದಲ್ಲಿ 10 ರನ್‌ ಗಳಿಸಬೇಕಿತ್ತು, ಜಡೇಜ ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ಚೆನ್ನೈ ತಂಡದ ಗೆಲುವನ್ನು ಸಾರಿದರು. ಮಾತ್ರವಲ್ಲದೇ ವಿದಾಯದ ಸನಿಹದಲ್ಲಿರುವ ಧೋನಿ ಅವರಿಗೆ ಐಪಿಎಲ್‌ ಪ್ರಶಸ್ತಿಯನ್ನು ಸಮರ್ಪಿಸಲು ಯಶಸ್ವಿಯಾದರು.

ಟಾಪ್ ನ್ಯೂಸ್

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Kapu ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Untitled-1

Missing Case ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ

Mangaluru ವಿದೇಶಿ ಮಹಿಳೆಯ ಹೆಸರಲ್ಲಿ 8.42 ಲ.ರೂ. ವಂಚನೆ

Mangaluru ವಿದೇಶಿ ಮಹಿಳೆಯ ಹೆಸರಲ್ಲಿ 8.42 ಲ.ರೂ. ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ssad

Women’s Hockey : ಸಂಗೀತಾ ಹ್ಯಾಟ್ರಿಕ್‌; ಸಿಂಗಾಪುರ ವಿರುದ್ಧ 13-0 ಗೆಲುವು

1-asds

Asian Games ಬಾಕ್ಸಿಂಗ್‌: ಥಾಪ, ಸಂಜೀತ್‌ಗೆ ಆಘಾತ

1-fdsdsa

ODI: ಭಾರತದ ಎದುರು ವೈಟ್‌ವಾಶ್‌ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ

tdy-4

Asian Games: ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆ; T20ಯಲ್ಲಿ ಅತ್ಯಧಿಕ ರನ್‌ ಬಾರಿಸಿದ ನೇಪಾಳ

Asian Games: ಶೂಟರ್‌ಗಳ ಕಮಾಲ್; 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡ

Asian Games: ಶೂಟರ್‌ಗಳ ಕಮಾಲ್; 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

CONTI

ಇನ್ನು ಏಳಲ್ಲ ,ಎಂಟು ಖಂಡ!- 375 ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡ ವಿಜ್ಞಾನಿಗಳಿಂದ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.