ಉಳ್ಳಾಲ: ನೇತ್ರಾವತಿ ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ
Team Udayavani, Jun 20, 2020, 9:47 AM IST
ಮಂಗಳೂರು : ಶುಕ್ರವಾರ ಅಪರಾಹ್ನ ಉಳ್ಳಾಲ ಸೇತುವೆಯಿಂದ ಹಾರಿದ ವ್ಯಕ್ತಿಯ ಶವವು ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂದು ಗುರುತಿಸಲಾಗಿದೆ.
ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು, ಅವರಿಗೆ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.
ಘಟನೆ ವಿವರ : ಶುಕ್ರವಾರ ನೇತ್ರಾವತಿ ಸೇತುವೆಯ ಮೇಲೆ ಫೋನ್ ಪತ್ತೆಯಾಗಿತ್ತು, ಇದನ್ನು ಕಂಡ ಸ್ಥಳೀಯರು ನದಿಗೆ ಯಾರೋ ವ್ಯಕ್ತಿ ಹಾರಿರಬೇಕೆಂದು ಶಂಕೆ ವ್ಯಕ್ತಪಡಿಸಿದ್ದರು, ಈ ವಿಚಾರವಾಗಿ ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿತ್ತು, ಸ್ಥಳಕ್ಕೆ ಆಗಮಿಸಿದ ಕಂಕನಾಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೊಬೈಲ್ ವಶಕ್ಕೆ ತೆಗೆದುಕೊಂಡಿದ್ದರು ಆದರೆ ಇಂದು ಬೆಳಿಗ್ಗೆ ನದಿಯಲ್ಲಿ ವ್ಯಕ್ತಿಯ ಶವವೊಂದು ತೇಲುತಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು ಉಳಿಯದ ಕಿಂಗ್ಸ್ ಸ್ಟಾರ್ ಸದಸ್ಯರು ಶವವನ್ನು ಮೇಲಕ್ಕೆತ್ತಿದ್ದಾರೆ, ನಂತರ ಪರಿಶೀಲಿಸಿದಾಗ ಸೇತುವೆಯ ಮೇಲಿದ್ದ ಮೊಬೈಲ್ ಈ ವ್ಯಕ್ತಿಯದ್ದೇ ಎಂದು ಗೊತ್ತಾಗಿದೆ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ
ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಪ್ರವೀಣ್ ಹಂತಕರು : ಆರೋಪಿಗಳ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಕಿನ್ಯ ಗ್ರಾಮದಲ್ಲಿ ಸಮಸ್ಯೆಗಳೇ ಬಹುದೊಡ್ಡದು
ತೊಕ್ಕೊಟ್ಟು: ಬೈಕ್ -ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಚಪ್ಪಲಿಯಲ್ಲಿ ಮರೆ ಮಾಚಿ ಅಕ್ರಮ ಸಾಗಾಟ; 17 ಲಕ್ಷ ರೂ. ಮೌಲ್ಯದ ಚಿನ್ನ ವಶ