
Stock Market; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ; 63,000 ಅಂಕಗಳ ದಾಖಲೆ ಮಟ್ಟ
ನಿಫ್ಟಿ ಕೂಡಾ 132.40 ಅಂಕಗಳಷ್ಟು ಏರಿಕೆ ಕಂಡಿತ್ತು.
Team Udayavani, May 29, 2023, 11:03 AM IST

ಮುಂಬೈ: ಸಾಲದ ಮಿತಿ ಹೆಚ್ಚಳಕ್ಕೆ ಸಂಸತ್ತಿನ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಅಮೆರಿಕ ನಿರ್ಧಾರಕ್ಕೆ ಬಂದ ಬೆನ್ನಲ್ಲೇ ಸೋಮವಾರ(ಮೇ 29) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಕೂಡಾ ಭರ್ಜರಿ ಜಿಗಿತ ಕಾಣುವ ಮೂಲಕ ದಾಖಲೆಯ 63,000 ಅಂಕಗಳ ಮಟ್ಟ ತಲುಪಿದೆ.
ಇದನ್ನೂ ಓದಿ:ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 500 ಅಂಕಗಳಷ್ಟು ಏರಿಕೆ ಕಂಡಿದ್ದು, ಇದರೊಂದಿಗೆ 63,000ಮಟ್ಟ ತಲುಪಿದೆ. ಅದೇ ರೀತಿ ನಿಫ್ಟಿ 110.55 ಅಂಕಗಳಷ್ಟು ಜಿಗಿತ ಕಂಡಿದ್ದು, 18,609.90ಕ್ಕೆ ತಲುಪಿದೆ.
ಬಾಂಬೆ ಷೇರುಪೇಟೆ ವಹಿವಾಟು ಆರಂಭಗೊಂಡ ಬೆನ್ನಲ್ಲೇ ಸೂಚ್ಯಂಕ 503.23 ಅಂಕಗಳಷ್ಟು ಏರಿಕೆಯಾಗಿತ್ತು. ನಿಫ್ಟಿ ಕೂಡಾ 132.40 ಅಂಕಗಳಷ್ಟು ಏರಿಕೆ ಕಂಡಿತ್ತು.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಮಹೀಂದ್ರ & ಮಹೀಂದ್ರ, ಎಸ್ ಬಿಐ ಲೈಫ್, ಎಚ್ ಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಲೈಫ್ ಷೇರುಗಳು ಲಾಭ ಕಂಡಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

RBI: ಅರ್ಥವ್ಯವಸ್ಥೆ ದರ ಬೆಳವಣಿಗೆ ಯಥಾಸ್ಥಿತಿ

Stock Market: ಷೇರುಪೇಟೆ ಹೂಡಿಕೆದಾರರಿಗೆ 5.50 ಲಕ್ಷ ಕೋಟಿ ರೂ. ನಷ್ಟ

United Kingdom: ಅಕ್ಟೋಬರ್ ನಿಂದ ಸ್ಟೂಡೆಂಟ್ ವೀಸಾ ಶುಲ್ಕ ಏರಿಕೆ: ಬ್ರಿಟನ್

TIMEನಿಂದ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿ ಬಿಡುಗಡೆ…ಭಾರತದ ಒಂದೇ ಕಂಪನಿಗೆ ಸ್ಥಾನ!