ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ
ಎನ್ ಎಸ್ ಇ ನಿಫ್ಟಿ 138.50 ಅಂಕಗಳ ಜಿಗಿತದೊಂದಿಗೆ 18,477 ಅಂಕಗಳ ದಾಖಲೆಯ ವಹಿವಾಟಿನ ಗಡಿ ತಲುಪಿದೆ.
Team Udayavani, Oct 18, 2021, 4:35 PM IST
ಮುಂಬಯಿ: ಜಾಗತಿಕ ಷೇರುಪೇಟೆಯ ಏರಿಳಿಕೆಯ ವಹಿವಾಟಿನ ನಡುವೆಯೇ ಬಾಂಬೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ನಾಗಾಲೋಟ ಮುಂದುವರಿದಿದ್ದು, ಸೋಮವಾರ (ಅಕ್ಟೋಬರ್ 18) ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 62 ಸಾವಿರಕ್ಕೆ ಸಮೀಪಿಸಿದ್ದು, ಸಾರ್ವಕಾಲಿಕ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 459.64 ಅಂಕ ಏರಿಕೆಯಾಗಿದ್ದು, 61,765 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ 138.50 ಅಂಕಗಳ ಜಿಗಿತದೊಂದಿಗೆ 18,477 ಅಂಕಗಳ ದಾಖಲೆಯ ವಹಿವಾಟಿನ ಗಡಿ ತಲುಪಿದೆ.
ಹಿಂಡಲ್ಕೋ ಇಂಡಸ್ಟ್ರೀಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ. ಎಚ್ ಸಿಎಲ್ ಟೆಕ್ನೋಲಜೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಏಷ್ಯನ್ ಪೇಂಟ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಷೇರುಗಳು ನಷ್ಟ ಕಂಡಿದೆ.
ಮೆಟಲ್, ಪವರ್, ಪಿಎಸ್ ಯು ಬ್ಯಾಂಕ್ ಷೇರುಗಳು ಶೇ.2ರಿಂದ 4ರಷ್ಟು ನಷ್ಟ ಕಂಡಿದ್ದು, ಜಾಗತಿಕ ಷೇರುಮಾರುಕಟ್ಟೆಯಲ್ಲಿಯೂ ಋಣಾತ್ಮಕ ವಹಿವಾಟಿಗೆ ಸಾಕ್ಷಿಯಾಗಿದೆ, ಹಾಂಗ್ ಕಾಂಗ್, ಚೀನಾ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಭಾರೀ ಕುಸಿತ ಕಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ
Stock Exchange: ಬಾಂಬೆ ಷೇರುಪೇಟೆ ಸೂಚ್ಯಂಕ 1,000 ಅಂಕ ಕುಸಿತ: 12 ಲಕ್ಷ ಕೋಟಿ ರೂ. ನಷ್ಟ
YouTube ಠಕ್ಕರ್ನೀಡಲು ಮಸ್ಕ್ ಹೊಸ ಟಿವಿ ಆ್ಯಪ್
Facebook, Instagram ಸರ್ವರ್ ಡೌನ್, ಸೇವೆಯಲ್ಲಿ ವ್ಯತ್ಯಾಸ; 829 ಕೋಟಿ ರೂಪಾಯಿ ನಷ್ಟ
Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಪರವಾನಿಗೆ ರದ್ದು?