ಹೂಡಿಕೆದಾರರ ಮೇಲೆ ಇಯರ್ ಎಂಡ್ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ
ಕೋಲ್ ಇಂಡಿಯಾ, ಟೆಕ್ ಮಹೀಂದ್ರ ಮತ್ತು ಗ್ರಾಸಿಂ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ.
Team Udayavani, Dec 29, 2021, 4:48 PM IST
ಮುಂಬಯಿ: ವರ್ಷಾಂತ್ಯದ ಹಿನ್ನೆಲೆಯಲ್ಲಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ವಹಿವಾಟಿನಲ್ಲಿ ಭಾಗವಹಿಸದ ಪರಿಣಾಮ ಬುಧವಾರ (ಡಿಸೆಂಬರ್ 29) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಅಲ್ಪ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.
ಇದನ್ನೂ ಓದಿ:ಜಾರ್ಖಂಡ್: ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಬೆಲೆ ಲೀ.ಗೆ 25 ರೂ ಕಡಿತ!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 90.99 ಅಂಕಗಳಷ್ಟು ಇಳಿಕೆಯೊಂದಿಗೆ 57,806.49 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 19.70 ಅಂಕ ಇಳಿಕೆಯಾಗಿದ್ದು, 17,213.60 ಅಂಕಗಳ ಮಟ್ಟ ತಲುಪಿದೆ.
ಇಚರ್ ಮೋಟಾರ್ಸ್, ಸನ್ ಫಾರ್ಮಾ, ಬಜಾಜ್ ಆಟೋ, ಇಂಡಸ್ ಇಂಡ್ ಬ್ಯಾಂಕ್, ಡೀವಿಸ್ ಲ್ಯಾಬ್ಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಐಟಿಸಿ, ಎಸ್ ಬಿಐ, ಕೋಲ್ ಇಂಡಿಯಾ, ಟೆಕ್ ಮಹೀಂದ್ರ ಮತ್ತು ಗ್ರಾಸಿಂ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 104.31 ಅಂಕಗಳಷ್ಟು ಏರಿಕೆಯೊಂದಿಗೆ 58,001.79 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 28.45 ಅಂಕ ಏರಿಕೆಯಾಗಿದ್ದು, 17,261.70 ಅಂಕಗಳಲ್ಲಿ ವಹಿವಾಟು ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ, ಪುತ್ರ ಆಕಾಶ್ ನೇಮಕ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ
ಖ್ಯಾತ ಉದ್ಯಮಿ, ಶಾರ್ಪೂಜಿ ಪಲ್ಲೊಂಜಿ ಗ್ರೂಪ್ ಮುಖ್ಯಸ್ಥ ಮಿಸ್ತ್ರಿ ವಿಧಿವಶ; ಪ್ರಧಾನಿ ಸಂತಾಪ
ಉತ್ತಮ ವಹಿವಾಟು: ಬಿಎಸ್ಇ ಸೂಚ್ಯಂಕ ನೆಗೆತ
215 ಉತ್ಪನ್ನಗಳ ತೆರಿಗೆ ಬದಲಿಲ್ಲ? ಚಂಡೀಗಢದಲ್ಲಿ ನಡೆವ ಸಭೆಯಲ್ಲಿ ಚರ್ಚೆ ಸಾಧ್ಯತೆ