
ರಿಷಭ್ ಪಂತ್ ಗೈರಲ್ಲೂ ಕಾಣಿಸಲಿದೆ ನಂ.17
Team Udayavani, Mar 25, 2023, 7:45 AM IST

ನವದೆಹಲಿ: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ರಿಷಭ್ ಪಂತ್ ಕಾರು ಅಪಘಾತಕ್ಕೆ ಸಿಲುಕಿದ ಕಾರಣ ಈ ಋತುವಿನಿಂದ ಪೂರ್ತಿಯಾಗಿ ಹೊರಗುಳಿಯಲಿದ್ದಾರೆ. ಪಂತ್ ಗೈರಲ್ಲಿ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ನಾಯಕನನ್ನಾಗಿ ನೇಮಿಸಲಾಗಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಉಪನಾಯಕರಾಗಿರಲಿದ್ದಾರೆ. ರಿಷಭ್ ಪಂತ್ ಈ ಸಲದ ಐಪಿಎಲ್‌ನಲ್ಲಿ ಆಡದೇ ಇರಬಹುದು, ಆದರೆ ಅವರ ಜೆರ್ಸಿ ಸಂಖ್ಯೆ 17ನ್ನು ಉಳಿಸಿಕೊಳ್ಳುವುದು ಡಿಸಿ ಫ್ರಾಂಚೈಸಿಯ ಯೋಜನೆ ಎಂಬುದೊಂದು ಕುತೂಹಲದ ಸಂಗತಿ.
ಇದು ಎಲ್ಲಿ, ಹೇಗೆ ಕಾಣಬಹುದೆಂಬುದು ಕ್ರಿಕೆಟ್ ಪ್ರೇಮಿಗಳ ಕುತೂಹಲ ತಾನೆ? ಮೂಲವೊಂದರ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗರ ಜೆರ್ಸಿಯ ಒಂದು ಭಾಗದಲ್ಲಿ ಅಥವಾ ಕ್ಯಾಪ್ ಮೇಲೆ ಈ ನಂಬರ್ ಕಾಣಿಸಿಕೊಳ್ಳಲಿದೆ. ಇದರಿಂದ ಡೆಲ್ಲಿ ತಂಡದ ಎಲ್ಲ ಆಟಗಾರರೂ ಐಪಿಎಲ್ ವೇಳೆ ರಿಷಭ್ ಪಂತ್ ಅವರ ಜೆರ್ಸಿ ನಂಬರ್‌ನೊಂದಿಗೆ ಆಡಲಿಳಿದಂತಾಗುತ್ತದೆ. ಇದರಿಂದ ಪಂತ್ ಮಾನಸಿಕವಾಗಿ ತಮ್ಮ ತಂಡದ ಜತೆಯೇ ಇದ್ದಾರೆ, ಅವರ ಗೈರು ಕಾಡದು ಎಂಬ ನಂಬಿಕೆ ಡೆಲ್ಲಿ ಫ್ರಾಂಚೈಸಿಯದ್ದು. ಡೆಲ್ಲಿ ಕ್ಯಾಪಿಟಲ್ಸ್ ಏ.1ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. 2022ರ ಸಾಲಿನಲ್ಲಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದ ಡೆಲ್ಲಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
