Udayavni Special

ಲಸಿಕೆ ಪಡೆಯಲು ಬೇಡ ಹಿಂಜರಿಕೆ!


Team Udayavani, Jan 22, 2021, 7:20 AM IST

ಲಸಿಕೆ ಪಡೆಯಲು ಬೇಡ ಹಿಂಜರಿಕೆ!

ಭಾರತದಲ್ಲಿ ವ್ಯಾಪಕ ಲಸಿಕೆ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆನ್ನಲ್ಲೇ ಲಸಿಕೆಯ ಬಗ್ಗೆ ಅನುಮಾನಗಳೂ ಹುಟ್ಟಿಕೊಂಡಿವೆ. ಅದರಲ್ಲೂ ರಾಜ್ಯದಲ್ಲಿ ಲಸಿಕೆ ಪಡೆದ ಇಬ್ಬರು ಮೃತರಾದ ಘಟನೆ ವರದಿಯಾಗಿರುವುದು ಆತಂಕ ಹೆಚ್ಚಿಸಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಯಾವುದೇ ಲಸಿಕೆಯಾದರೂ ಅದನ್ನು ಪಡೆದಾಗ ಕೆಲವರಲ್ಲಿ ಸಣ್ಣ ಮಟ್ಟದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವುದು ಸಹಜ. ಹೀಗಾಗಿ ಭಯಪಡಬೇಡಿ ಎಂದು ಪರಿಣತರು ಹೇಳುತ್ತಿದ್ದಾರೆ.

ಕೋವಿಡ್‌ 19 ಲಸಿಕೆಗಳು ಎಷ್ಟು ಸುರಕ್ಷಿತ?
ಅಮೆರಿಕವೊಂದರಲ್ಲೇ ಇದುವರೆಗೂ 1.3 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದರೆ ಭಾರತದಲ್ಲಿ ಈ ಸಂಖ್ಯೆ 4 ಲಕ್ಷ ಸಮೀಪಿಸುತ್ತಿದೆ. ಜಾಗತಿಕವಾಗಿ ಇದುವರೆಗೂ 4 ಕೋಟಿ ಜನರು ಲಸಿಕೆಯನ್ನು ಪಡೆದಿದ್ದಾರೆ. ಬಹುತೇಕ ದೇಶಗಳಲ್ಲೂ ಲಸಿಕೆ ಪಡೆದವರಲ್ಲಿ ಕೆಲವರಿಗೆ ತಲೆನೋವು, ಮಂದ ಜ್ವರ, ಇಂಜೆಕ್ಷನ್‌ ನೀಡಿದ ಜಾಗದಲ್ಲಿ ಚರ್ಮ ಕೆಂಪಾದಂಥ ಲಕ್ಷಣಗಳು ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಗಂಭೀರ ಪರಿಣಾಮಗಳೇನೂ ಆಗಿಲ್ಲ. ಭಾರತದ ವಿಚಾರಕ್ಕೇ ಬರುವುದಾದರೆ ಮಂಗಳವಾರದ ವೇಳೆಗೆ ಲಸಿಕೆ ಪಡೆದ 3.8 ಲಕ್ಷ ಮಂದಿಯಲ್ಲಿ ಕೇವಲ 580 ಮಂದಿಯಲ್ಲಿ ಮಾತ್ರ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಕೇಂದ್ರ ಸರಕಾರ‌ ಹೇಳಿದೆ. ಅವೂ ಸಹ, ಜ್ವರ, ತಲೆ ನೋವಿನಂಥ ಸಮಸ್ಯೆಗಳೇ ಹೊರತು, ಗಂಭೀರ ಪರಿಣಾಮಗಳಲ್ಲ.

ಎಲ್ಲಾ ಲಸಿಕೆಗಳಲ್ಲೂ ಸಹಜ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ವಿವಿಧ ರೋಗಗಳಿಗೆ ಬಳಕೆಯಾಗುತ್ತಿರುವ ಲಸಿಕೆಗಳೆಲ್ಲವೂ ಚಿಕ್ಕಪುಟ್ಟ ಪ್ರಮಾಣದ ಅಡ್ಡಪರಿಣಾಮ ಉಂಟುಮಾಡುತ್ತವೆ. ದಡಾರ, ಮಂಪ್ಸ್‌ (ಗದ್ದಬಾವು), ರುಬೆಲ್ಲ (ಮೈಮೇಲೆ ಕೆಂಪು ದದ್ದುಗಳೇಳುವ ಸೋಂಕು ರೋಗ)ಗಾಗಿ ನೀಡುವ ಎಂಎಂಆರ್‌ ಲಸಿಕೆ ಪ್ರಕ್ರಿಯೆಯ ವೇಳೆಯಲ್ಲೂ 10 ಪ್ರತಿಶತ ಜನರಿಗೆ ನೋವು, ಇಂಜೆಕ್ಷನ್‌ ಕೊಟ್ಟ ಜಾಗದಲ್ಲಿ ಊತ ಕಾಣಿಸಿಕೊಳ್ಳಬಹುದು, ಇನ್ನು 5-15 ಪ್ರತಿ ಶತ ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಪೊಲೀಯೋ ಲಸಿಕೆಯ ವಿಚಾರಕ್ಕೆ ಬಂದರೆ, ಕೇವಲ 1 ಪ್ರತಿಶತ ಮಕ್ಕಳಿಗೆ ಮಾತ್ರ ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೋವಿಡ್‌-19 ಲಸಿಕೆ ಪಡೆದಾಗಲೂ ಇಂಥ ಲಕ್ಷಣಗಳು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯವಿಲ್ಲ ಎಂದೇ ಪರಿಣತರು ಹೇಳುತ್ತಾರೆ. ಜಗತ್ತಿನಾದ್ಯಂತ ಸಾಮಾನ್ಯವಾಗಿ ನೀಡಲಾಗುವ ಲಸಿಕೆಗಳಲ್ಲಿ, ಕೆಲವರಲ್ಲಿ ಗಂಭೀರ ಪರಿಣಾಮಗಳು ಕಾಣಿಸಿಕೊಳ್ಳುತ್ತವಾದರೂ ಅವು ಅಪರೂಪದಲ್ಲಿ ಅಪರೂಪ.

ಟಾಪ್ ನ್ಯೂಸ್

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

ದಾಖಲೆ ಪ್ರಮಾಣಕ್ಕೇರಿದ ಬಿಟ್‌ ಕಾಯಿನ್‌ ಮೌಲ್ಯ

ದಾಖಲೆ ಪ್ರಮಾಣಕ್ಕೇರಿದ ಬಿಟ್‌ ಕಾಯಿನ್‌ ಮೌಲ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೈಲ ಬೆಲೆ, ಹಣದುಬ್ಬರ ಮತ್ತು ಆರ್ಥಿಕತೆ

ತೈಲ ಬೆಲೆ, ಹಣದುಬ್ಬರ ಮತ್ತು ಆರ್ಥಿಕತೆ

Indian Americans are divided about India’s future, but still broadly support Modi, finds survey

ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ

ಕೋವಿಡ್‌ ಲಸಿಕೆ ಹಾಕಿಸಿಕೊಂಡ ವಿಶ್ವ ನಾಯಕರು

ಕೋವಿಡ್‌ ಲಸಿಕೆ ಹಾಕಿಸಿಕೊಂಡ ವಿಶ್ವ ನಾಯಕರು

ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ

ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ

ವರದಕ್ಷಿಣೆಗೆ ಇಲ್ಲ  ಮನುಸ್ಮೃತಿಯ ಸಮರ್ಥನೆ

ವರದಕ್ಷಿಣೆಗೆ ಇಲ್ಲ  ಮನುಸ್ಮೃತಿಯ ಸಮರ್ಥನೆ

MUST WATCH

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

ಹೊಸ ಸೇರ್ಪಡೆ

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.