ಮತ್ತೆ ಮುಖಭಂಗ: ಸಾಲವೂ ಇಲ್ಲ, ತೈಲ ಸರಬರಾಜು ಇಲ್ಲ; ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ

ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದ್ದರು.

Team Udayavani, Aug 12, 2020, 4:48 PM IST

ಮತ್ತೆ ಮುಖಭಂಗ: ಸಾಲವೂ ಇಲ್ಲ, ತೈಲ ಸರಬರಾಜು ಇಲ್ಲ; ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ

ರಿಯಾದ್: ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಾಲ ಹಾಗೂ ತೈಲ ಸರಬರಾಜನ್ನು ನಿಲ್ಲಿಸುವುದಾಗಿ ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉಭಯ ದೇಶಗಳ ನಡುವಿನ ದಶಕಗಳ ದೀರ್ಘಾವಧಿ ಗೆಳೆತನ ಕೊನೆಗೂ ಅಂತ್ಯಗೊಂಡತಾಗಿದೆ ಎಂದು ಮಿಡ್ಲ್ ಈಸ್ಟ್ ಮೋನಿಟರ್ ವರದಿ ಮಾಡಿದೆ.

ಏನಿದು ಜಟಾಪಟಿ:

ಕಾಶ್ಮೀರ ವಿಚಾರದಲ್ಲಿ ಇಸ್ಲಾಂ ದೇಶಗಳ ಬೆಂಬಲ ಪಡೆಯಲು ಒಐಸಿ (ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೊ ಆಪರೇಶನ್) ಸದಸ್ಯ ರಾಷ್ಟ್ರಗಳ ಸಭೆ ಕರೆದು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ಕೆಲವು ತಿಂಗಳುಗಳಿಂದ ಸೌದಿ ಅರೇಬಿಯಾಕ್ಕೆ ಒತ್ತಾಯಿಸುತ್ತಿತ್ತು. ಆದರೆ ಪಾಕ್ ಒತ್ತಡಕ್ಕೆ ಸೌದಿ ಅರೇಬಿಯಾ ಮಣಿದಿರಲಿಲ್ಲವಾಗಿತ್ತು.

ಏತನ್ಮಧ್ಯೆ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ “ಕಾಶ್ಮೀರದ ವಿಚಾರದಲ್ಲಿ ಸೌದಿ ಸರ್ಕಾರ ನಮಗೆ ಬೆಂಬಲ ನೀಡದಿದ್ದರೆ ಪಾಕಿಸ್ತಾನಕ್ಕೇನೂ ನಷ್ಟವಿಲ್ಲ, ಪಾಕಿಸ್ತಾನವೇ ಒಐಸಿ ರಾಷ್ಟ್ರಗಳ ಬೃಹತ್ ಸಮ್ಮೇಳನವನ್ನು ಆಯೋಜಿಸಿ, ಅವುಗಳ ಬೆಂಬಲ ಕೇಳಲಿದೆ ಎಂದಿದ್ದರು.”

ಕಾಶ್ಮೀರ ವಿಚಾರದಲ್ಲಿ ಸೌದಿ ಅರೇಬಿಯಾವನ್ನು ಪಾಕಿಸ್ತಾನ ಟೀಕಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು. ಸೌದಿಗೆ ನೀಡಲಿರುವ ಸಾಲ ಮತ್ತು ತೈಲ ಸರಬರಾಜನ್ನು ನಿಲ್ಲಿಸುವುದಾಗಿ ತಿಳಿಸಿದೆ.

ಕಾಶ್ಮೀರ ವಿಚಾರದಲ್ಲಿ ಒಐಸಿ ರಾಷ್ಟ್ರಗಳ ಸಮ್ಮೇಳನ ನಡೆಸುವುದಾಗಿ ಪಾಕಿಸ್ತಾನ ಹಠಕ್ಕೆ ಬಿದ್ದ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾಕ್ಕೆ ಕೊಡಬೇಕಾಗಿದ್ದ 1 ಬಿಲಿಯನ್ ಡಾಲರ್ ಹಣವನ್ನು ವಾಪಸ್ ಕೊಡುವಂತೆ ಪಾಕಿಸ್ತಾನಕ್ಕೆ ಸೂಚಿಸಿರುವುದಾಗಿ ವರದಿ ವಿವರಿಸಿದೆ. 2018ರ ನವೆಂಬರ್ ತಿಂಗಳಿನಲ್ಲಿ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದ್ದರು. ಇದರಲ್ಲಿ ತೈಲ ಸರಬರಾಜಿನ ಸಾಲ 3 ಬಿಲಿಯನ್ ಡಾಲರ್ ಮೊತ್ತ ಕೂಡಾ ಸೇರಿತ್ತು.

ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ನೀಡಿದ್ದ ವೇಳೆಯಲ್ಲಿ ಪಾಕಿಸ್ತಾನದ ಜತೆ  ಈ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ. ಭಾರತದ ಜತೆ ಗೆಳೆತನ ಮುಂದುವರಿಸಲು ಇಚ್ಛಿಸಿರುವ ಸೌದಿ ಅರೇಬಿಯಾ, ಕಾಶ್ಮೀರದ ವಿಚಾರದಲ್ಲಿ ಸೌದಿ ಯಾವುದೇ ಆಸಕ್ತಿ ತೋರಿಸದ ನಿಟ್ಟಿನಲ್ಲಿ ಪಾಕಿಸ್ತಾನ ವಿಶ್ವಸಮುದಾಯದ ಎದುರು ಏಕಾಂಗಿಯಾಗಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ಆಗಿದ್ದೇನು?

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ

1-assads-2

ಪ್ರಧಾನಿ ಮೋದಿ ಹೆಸರಲ್ಲಿ ಸಂಕಲ್ಪ: ಎರಡು ವರ್ಷಗಳಿಂದ ನಿತ್ಯ ಯಾಗ!

ಉಡುಪಿ; OLXನಲ್ಲಿ ಕಿವಿಯೋಲೆ ಮಾರಲು ಹೋಗಿ 93 ಸಾವಿರ ರೂ. ಕಳೆದುಕೊಂಡ ಯುವತಿ

ಉಡುಪಿ; OLXನಲ್ಲಿ ಕಿವಿಯೋಲೆ ಮಾರಲು ಹೋಗಿ 93 ಸಾವಿರ ರೂ. ಕಳೆದುಕೊಂಡ ಯುವತಿ

8CM1

ಸಿದ್ಧಗಂಗಾ ಮಠದಲ್ಲಿ ದಾಸೋಹ ದಿನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಎನ್‌ಡಿಎಗೆ 296 ಸ್ಥಾನ ಖಚಿತ; ಇಂಡಿಯಾ ಟುಡೇ ಮೂಡ್‌ ಆಫ್ ದ ನೇಷನ್‌ ವರದಿ

ಎನ್‌ಡಿಎಗೆ 296 ಸ್ಥಾನ ಖಚಿತ; ಇಂಡಿಯಾ ಟುಡೇ ಮೂಡ್‌ ಆಫ್ ದ ನೇಷನ್‌ ವರದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 5

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

MUST WATCH

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೊಸ ಸೇರ್ಪಡೆ

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ಆಗಿದ್ದೇನು?

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ

12street

ಬೀದಿ ವ್ಯಾಪಾರಿಗಳು ಸಂಘಟಿತರಾಗಲಿ: ಜಗನ್ನಾಥ

11govt

ಸರ್ಕಾರಿ ಯೋಜನೆ ಸದುಪಯೋಗ ಮಾಡಿಕೊಳ್ಳಿ: ಪಾಟೀಲ

1-fwrrre

ಮಂಗಳೂರು: ಹಣಕ್ಕಾಗಿ ಜ್ಯೋತಿಷಿಯೊಬ್ಬರ ಹನಿ ಟ್ರ್ಯಾಪ್ ಮಾಡಿದ್ದ ದಂಪತಿಗಳ ಬಂಧನ 

10goal

ಕೆಕೆಆರ್‌ಡಿಬಿ ನಿಗದಿತ ಗುರಿ ಸಾಧಿಸದ್ದಕ್ಕೆ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.