ವಿದ್ಯುತ್ ಕಡಿತವಿಲ್ಲ,300ಯೂನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಉತ್ತರಾಖಂಡ ಚುನಾವಣಾ ತಂತ್ರ
Team Udayavani, Jul 11, 2021, 2:34 PM IST
ಡೆಹ್ರಾಡೂನ್ : ಉತ್ತರಾಖಂಡ ಜುನಾವಣೆಯ ರಂಗು ಗರಿಗೆದರುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಅಸ್ತ್ರವನ್ನು ಪ್ರಯೋಗಿಸುತ್ತಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ/ಆಪ್) ಉತ್ತರಾಖಂಡ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ಬಲವಾದ ರಣ ತಂತ್ರವನ್ನು ಹೆಣೆದಂತೆ ಕಾಣುತ್ತಿದೆ.
ಇದನ್ನೂ ಓದಿ : ಆತ ನಮ್ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದೆ, ಅದು ನಮ್ಮ ಪ್ರೀತಿಯ ಸಂಬಂಧ: ಡಿ.ಕೆ.ಶಿವಕುಮಾರ್
ವಿದ್ಯುತ್ ಕಡಿತವಿಲ್ಲದೆ ಪ್ರತಿ ಮನೆಗಳಿಗೆ 300 ಯೂನಿಟ್ ವಿದ್ಯುತ್ ನನ್ನು ಉಚಿತವಾಗಿ ನೀಡುವ ಭರವಸೆಯನ್ನು ಉತ್ತರಾಖಂಡ ಜನರಿಗೆ ನೀಡಿದೆ. ಹಿಂದಿನ ಮಸೂದೆಗಳ ಮನ್ನಾ, ಮತ್ತು ರೈತರಿಗೆ ಉಚಿತ ಪೂರೈಕೆ ಮಾಡುವ ಭರಚಸೆಯನ್ನು ಆಮ್ ಆದ್ಮಿ ಪಕ್ಷ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಭಿರುಗಾಳಿ ಬೀಸಿದಂತಾಗಿದೆ.
ರಾಷ್ಟ್ರೀಯ ಪ್ರಮುಖ ಎರಡು ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧವಾಗಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಎದ್ದು ನಿಂತ ಹಾಗೆ, ಉತ್ತರಾಖಂಡದಲ್ಲಿಯೂ ಹೊಸ ಕ್ರಾಂತಿ ಮಾಡಲಿದೆಯೇ ಎಂಬ ಗುಸುಗುಸು ಅಲ್ಲಿನ ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದೆ.
ದೆಹಲಿಯಲ್ಲಿ ತಮ್ಮ ಪಕ್ಷದ ಪ್ರಮುಖ ನಾಯಕರೊಂದಿಗೆ ಮಾತನಾಡಿದ ಕೇಜ್ರಿವಾಲ್, ಹಿಲ್ ಸ್ಟೇಟ್ ಉತ್ತರಾಖಂಡದಲ್ಲಿ ಅಭಿವೃದ್ಧಿ ತರದ ಪಕ್ಷಗಳ ವಿರುದ್ಧವಾಗಿ, ಜನ ಪರವಾಗ ಆಮ್ ಆದ್ಮಿ ಪಾರ್ಟಿ ಈಗಿನಿಂದಲೇ ಕಾರ್ಉ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ಇನ್ನು, ಇತ್ತೀಚೆಗಷ್ಟೇ, ಮುಖ್ಯಮಂತ್ರಿಯಾಗಿ ಉತ್ತರಾಖಂಡ ಅಧಿಕಾರ ಸ್ವೀಕರಿಸಿದ ಪುಷ್ಕರ್ ಸಿಂಗ್ ಧಾಮಿ ಮೇಲೆ ಕೇಂದ್ರ ಭರವಸೆ ಇಟ್ಟುಕೊಂಡಿದ್ದು, ಹೊಸ ನೇತಾರನ ಆಡಳಿತದ ವಿರುದ್ಧ ಆಮ್ ಆದ್ಮಿ ಹೇಗೆ ತನ್ನ ಚುನಾವಣಾ ತಂತ್ರವನ್ನು ರೂಪಿಸಲಿದೆ ಎನ್ನುವುದನ್ನು ಕಾಡು ನೋಡಬೇಕಾಗಿದೆ.
ಇದನ್ನೂ ಓದಿ : ಇಂಧನ ಬೇಡಿಕೆ ಸುಧಾರಣೆ : ಜೂನ್ ನಲ್ಲಿ ಶೇಕಡಾ. 1.5 ರಷ್ಟು ಹೆಚ್ಚಳ..!