ಸೂಕ್ತ ದಾಖಲೆ ಕೊಟ್ಟರೆ ಅಧಿಕಾರಿಗಳು ಜೈಲಿಗೆ : ಚಿಕ್ಕಮಗಳೂರಿನಲ್ಲಿ ಆರ್.ಅಶೋಕ್
ಗ್ರಾಮ ವಾಸ್ತವ್ಯದ ಉದ್ದೇಶವೇ ಸಮಸ್ಯೆ ಬಗೆಹರಿಸುವುದು
Team Udayavani, Feb 4, 2023, 2:41 PM IST
ಚಿಕ್ಕಮಗಳೂರು : ಹಿಂದೆ ಐಬಿಯಲ್ಲಿ ಕುಳಿತು ಕಾಫಿ ಕುಡಿದು ಅರ್ಜಿ ತೆಗೆದುಕೊಂಡು ಹೋಗುತ್ತಿದ್ದರು. ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವಿಗೆ ಸ್ಪಂದಿಸುತ್ತೇನೆ. ಗ್ರಾಮ ವಾಸ್ತವ್ಯದ ಉದ್ದೇಶವೇ ಕಾಫಿ ಬೆಳೆಗಾರರ ಸಮಸ್ಯೆ ಬಗೆ ಹರಿಸುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸರಕಾರಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ರಾಜಕೀಯ ಮಾತನಾಡುವುದಿಲ್ಲ.ಇದು ಸರಕಾರಿ ಕಾರ್ಯಕ್ರಮ ಮುಗಿದ ನಂತರ ಮಾತನಾಡುತ್ತೇನೆ. ನಾಳೆ ಬೆಳಗ್ಗೆ 10 ಗಂಟೆಗೆ ಬನ್ನಿ, ಎಲ್ಲ ರಾಜಕೀಯ ಹೇಳುತ್ತೇನೆ. ನಿಮ್ಮ 100 ಪ್ರಶ್ನೆಗೆ 200 ಉತ್ತರವನ್ನ ಕೊಟ್ಟೆ ಇಲ್ಲಿಂದ ಹೋಗುತ್ತೇನೆ ಎಂದರು.
ಯಾರ್ಯಾರು 57ರ ಅರ್ಜಿಯಲ್ಲಿ ರೈತರಿಗೆ ಮೋಸ ಮಾಡಿದ್ದಾರೆ. ಸೂಕ್ತ ದಾಖಲೆ ಕೊಟ್ಟರೆ ಅಧಿಕಾರಿಗಳನ್ನ ಜೈಲಿಗೆ ಹಾಕುತ್ತೇನೆ ಎಂದರು.