“ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್‌ನಲ್ಲಿ ಕನ್ನಡ
ಎಲ್ಲಿಯೇ ರೇಶನ್ ಪಡೆದರೂ ಪಡಿತರ ಚೀಟಿ ರದ್ದಾಗದು
Team Udayavani, Apr 18, 2021, 6:30 AM IST
ದಾವಣಗೆರೆ: ವಲಸಿಗರಿಗೆ ದೇಶದ ಯಾವುದೇ ಭಾಗದಲ್ಲೂ ಸುಲಭವಾಗಿ ಪಡಿತರ ಆಹಾರಧಾನ್ಯ ಸಿಗುವಂತೆ ಮಾಡಲು ಕೇಂದ್ರ ಸರಕಾರ ಈಗಾಗಲೇ ಜಾರಿಗೆ ತಂದಿರುವ “ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್‌ನಲ್ಲಿ ಕನ್ನಡ ಭಾಷೆಯನ್ನೂ ಅಳವಡಿಸಲಾಗಿದೆ. ಮೊದಲು ಇಂಗ್ಲಿಷ್ ಹಾಗೂ ಹಿಂದಿ ಮಾತ್ರ ಇತ್ತು.
ವ್ಯಕ್ತಿಯ ಭೌತಿಕ ಸ್ಥಳವನ್ನು ಲೆಕ್ಕಿಸದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬರುವ ಎಲ್ಲ ಫಲಾನು
ಭವಿಗಳಿಗೆ ಆಹಾರ ಭದ್ರತೆ ಒದಗಿಸುವ ಏಕೈಕ ಗುರಿಯೊಂದಿಗೆ “ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್ ಅಭಿ ವೃದ್ಧಿಪಡಿಸಲಾಗಿದೆ. ಆದರೆ ಇದರ ಬಳಕೆಗೆ ಭಾಷೆ ಅಡ್ಡಿಯಾಗಿದ್ದು, ಈಗ ಕೇಂದ್ರ ಸರಕಾರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಹಾಗೂ ಒರಿಯಾವನ್ನೂ ಸೇರಿಸಿದೆ.
ಕಾರ್ಡ್ ರದ್ದಾಗದು
ಕೇವಲ ಆಧಾರ್ ನಂಬರ್ ಸಹಾಯದಿಂದ ಈ ಆ್ಯಪ್‌ನಿಂದಲೇ ರೇಶನ್ ಕಾರ್ಡ್ ನಂಬರ್, ಪಡಿತರ ವ್ಯವಹಾರ, ಪಡಿತರ ಲಭ್ಯತೆ ಹಾಗೂ ಜಿಪಿಎಸ್ ಮೂಲಕ ಹತ್ತಿರದ ಪಡಿತರ ಅಂಗಡಿ ಮುಂತಾದ ಮಾಹಿತಿ ಲಭ್ಯವಾಗಲಿವೆ. ಕೆಲವರು ವಲಸೆ ಬಂದ ಸ್ಥಳದಲ್ಲಿ ಪಡಿತರ ಪಡೆದರೆ ಮೂಲ ಸ್ಥಳದ ಕಾರ್ಡ್ ರದ್ದಾಗಬಹುದು ಎಂಬ ಭೀತಿಯಿಂದ ಪಡಿತರ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಎಲ್ಲಿಯೇ ಪಡಿತರ ಪಡೆದರೂ ಕಾರ್ಡ್ ರದ್ದಾಗುವುದಿಲ್ಲ.
ವಲಸಿಗರಿಗೆ ಆಹಾರ ಭದ್ರತೆ ಒದಗಿಸುವ ಗುರಿಯೊಂದಿಗೆ “ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಇತ್ತೀಚೆಗೆ ಕನ್ನಡವನ್ನೂ ಅಳವಡಿಸಲಾಗಿದೆ. ಇಂಗ್ಲಿಷ್, ಹಿಂದಿ ಓದಲು ಬಾರದ ಕನ್ನಡಿಗರಿಗೆ ಇದು ಹೆಚ್ಚು ಉಪಯುಕ್ತವಾಗಿದೆ.
– ನಾಗರಾಜ ಎಂ.ವಿ., ತಾಂತ್ರಿಕ ಸಹಾಯಕರು, ಆಹಾರ ಇಲಾಖೆ
– ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ : ಮನೆಯ ಮೇಲೆ ಮರ ಬಿದ್ದು ಇಬ್ಬರು ಸಾವು
ರಾಜ್ಯದಲ್ಲಿ ಹೆಚ್ಚುತ್ತಿದೆ ಹನಿಟ್ರ್ಯಾಪ್ ಹಾವಳಿ: ಉದ್ಯಮಿ,ರಾಜಕಾರಣಿಗಳೇ ಟಾರ್ಗೆಟ್
ಬುಧವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ
MUST WATCH
ಹೊಸ ಸೇರ್ಪಡೆ
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ
ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು