ಆನ್‌ಲೈನ್ ಶಿಕ್ಷಣ ನಿಷೇಧ: ಅಧಿಕೃತ ಆದೇಶ ಪ್ರಕಟ
Team Udayavani, Jun 16, 2020, 5:40 AM IST
ಬೆಂಗಳೂರು: ರಾಜ್ಯದ ರಾಜ್ಯ ಪಠ್ಯಕ್ರಮ, ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳು ಎಲ್‌ಕೆಜಿಯಿಂದ 5ನೇ ತರಗತಿ ತನಕ ಆನ್‌ಲೈನ್ ಅಥವಾ ಆಫ್ಲೈನ್ ಬೋಧನೆ ಮಾಡುವಂತಿಲ್ಲ ಎಂದು ರಾಜ್ಯ ಸರಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.
5ನೇ ತರಗತಿಯ ವರೆಗೂ ಆನ್‌ಲೈನ್ ಶಿಕ್ಷಣ ನಿಷೇಧಿಸಲಾಗಿದೆ ಎಂದು ಕಳೆದ ಬುಧವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿ ದ್ದರು. ಆದರೆ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ.