ನಮ್ಮ ಹಕ್ಕೊತ್ತಾಯ-ಉಡುಪಿ: ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಾಣವಾಗಲಿ


Team Udayavani, Mar 30, 2023, 7:41 AM IST

driving track

ಉಡುಪಿ: ಹಲವಾರು ವರ್ಷಗಳ ಬೇಡಿಕೆ ಯಾದ ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಾಣ ಕಾರ್ಯ ಇನ್ನೂ ಈಡೇರದೆ ಪ್ರಸ್ತಾವನೆಯಲ್ಲಿಯೇ ಬಾಕಿ ಉಳಿದಿದೆ. ಇದಕ್ಕೆ ಕಂಟಕವಾಗಿರುವುದು ಡೀಮ್ಡ್ ಫಾರೆಸ್ಟ್‌.

ಯೋಜನೆಗಾಗಿ ಗುರುತಿಸಲಾಗಿರುವ ಸುಮಾರು 5.5 ಎಕರೆ ಪ್ರದೇಶದಲ್ಲಿ 200ರಷ್ಟು ಮರಗಳಿದ್ದು ನಿರ್ಮಾಣ ಆರಂಭ ಮಾಡಲು ಉದ್ದೇಶಿಸಿದ ಸಮಯದಲ್ಲಿಯೇ ಅರಣ್ಯ ಇಲಾಖೆ ಇದನ್ನು ಡೀಮ್ಡ್ ಫಾರೆಸ್ಟ್‌ ಪ್ರದೇಶ ಎಂದು ಪರಿಗಣಿಸಿದೆ. ಈ ಕಾರಣಕ್ಕಾಗಿ ಈ ಪ್ರಸ್ತಾವನೆ ಕಡತದಲ್ಲಿಯೇ ಬಾಕಿ ಉಳಿದಿತ್ತು. ಪದೇಪದೇ ಈ ವಿಚಾರಗಳು ಪ್ರಸ್ತಾಪಕ್ಕೆ ಬರುತ್ತಿದ್ದರೂ ಮುಂದಕ್ಕೆ ಹೋಗಿಲ್ಲ. ಡೀಮ್ಡ್ ಫಾರೆಸ್ಟ್‌ ಸಮಸ್ಯೆಗೆ ಮುಕ್ತಿ ನೀಡದೇ ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಾಣ ಸಾಧ್ಯವಿಲ್ಲ. ಈ ಚುನಾವಣೆಯಲ್ಲಾ ದರೂ ಇದಕ್ಕೊಂದು ಮುಕ್ತಿ ಸಿಗಲಿ ಎಂಬುದು ನಮ್ಮ ಹಕ್ಕೊತ್ತಾಯ.

ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾರ್ಷಿಕವಾಗಿ ಕೋಟ್ಯಂತರ ರೂ. ರಾಜಸ್ವ ಸಂಗ್ರಹವಾಗುತ್ತಿದ್ದರೂ ಸುಸಜ್ಜಿತ ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಾಣವಾಗಿಲ್ಲ. ಟ್ರ್ಯಾಕ್‌ ಅನುಪಸ್ಥಿತಿಯಲ್ಲಿ ಚಾಲನಾ ಪರವಾನಿಗೆ ಬಯಸುವ ಅರ್ಜಿದಾರರು ರಜತಾದ್ರಿಯ ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗದ ರಸ್ತೆಯಲ್ಲಿ ತಮ್ಮ ಚಾಲನಾ ಕೌಶಲ ಪ್ರದರ್ಶಿಸುತ್ತಿದ್ದಾರೆ. ಯೋಜನೆಯ ಆರಂಭದ ದಿನಗಳಲ್ಲಿ ಆರ್‌ಟಿಒ ಉತ್ಸಾಹದಿಂದ 64 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್‌ ಗೋಡೆ ನಿರ್ಮಾಣ ಕೆಲಸ ಪೂರ್ಣಗೊಳಿಸಿತ್ತು. ಆದರೆ ಅರಣ್ಯ ಇಲಾಖೆಯಿಂದ ತಡೆ ಬಂದ ಕಾರಣ ಡ್ರೈವಿಂಗ್‌ ಟ್ರಾಕ್‌ ಹಾಕುವ ಯೋಜನೆಗೆ ತಡೆ ಬಿದ್ದಿದೆ.

ಆರ್‌ಟಿಒ ಮೂಲಗಳ ಪ್ರಕಾರ ಉಡುಪಿಯಲ್ಲಿ ದಿನಕ್ಕೆ ಸರಾಸರಿ 75ರಷ್ಟು ದ್ವಿಚಕ್ರ ವಾಹನ ಹಾಗೂ ಚತುಷcಕ್ರ ವಾಹನ ಪರವಾನಿಗೆ ನೀಡಲಾಗುತ್ತದೆ. ಪರವಾನಿಗೆದಾರರನ್ನು ಲಿಖೀತ, ಮೌಖೀಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಕಾರಣಕ್ಕಾಗಿ ಗಣಕೀಕೃತ ಚಾಲನಾ ಪರೀಕ್ಷಾ ಟ್ರ್ಯಾಕ್‌ ಹೆಚ್ಚು ಅಗತ್ಯವಿರುವ ಯೋಜನೆಯಾಗಿದೆ.

ಅಲೆವೂರಿನಲ್ಲಿ ಗಣಕೀಕೃತ ಡ್ರೈವಿಂಗ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ತಡೆ ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕಿದರೆ ಶೀಘ್ರ ದಲ್ಲಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ರವಿಶಂಕರ್‌.

ಯಾಕೆ ಅಗತ್ಯ?
ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಾಣ ಮಾಡಿದರೆ ಜಿಲ್ಲೆಯ ಹಲವಾರು ಮಂದಿಗೆ ಉಪಯೋಗವಾಗಲಿದೆ. ಪ್ರಸ್ತುತ ಆರ್‌ಟಿಒ ಕಚೇರಿಯಲ್ಲಿರುವ ಸಣ್ಣ ಟ್ರ್ಯಾಕ್‌ನಲ್ಲಿಯೇ ಮಾಡಲಾಗುತ್ತಿದ್ದು, ಅಲೆವೂರು ಅಥವಾ ಬೇರೆ ಪ್ರದೇಶದಲ್ಲಿ ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಾಣ ಮಾಡಿದರೆ ಆರ್‌ಟಿಒ ಕಚೇರಿಯಲ್ಲಿ ಉಂಟಾಗುವ ಜನದಟ್ಟನೆಯನ್ನೂ ತಡೆಗಟ್ಟಬಹುದಾಗಿದೆ. ಸುಸಜ್ಜಿತ ಟ್ರ್ಯಾಕ್‌ ಕೂಡ ಇಲ್ಲದಿರುವುದು ದುರಂತವೇ ಸರಿ.

ಗುತ್ತಿಗೆ ಪಡೆದಿದ್ದ ಕೆಎಸ್ಸಾರ್ಟಿಸಿ
ಅಲೆವೂರಿನಲ್ಲಿ ಕಂಪ್ಯೂಟರೈಸ್ಡ್ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ನಿರ್ಮಿಸಲು ಕೆಎಸ್ಸಾರ್ಟಿಸಿ ಸಂಸ್ಥೆಯ ನಿರ್ಮಾಣ ವಿಭಾಗದವರಿಗೆ 9 ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿತ್ತು. ಇದಕ್ಕಾಗಿ 6 ಕೋಟಿ ರೂ. ಗಳಷ್ಟು ಹಣವೂ ಬಿಡುಗಡೆಯಾಗಿತ್ತು. ಈ ನಡುವೆ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಎದುರಾದ ಕಾರಣ ಮೊಟಕು ಗೊಂಡಿದೆ. ಈ ಕಾರಣಕ್ಕೆ ಆ ಮೊತ್ತವೂ ವಿನಿಯೋಗವಾಗದೆ ಹಿಂದಿರುಗಿದೆ.

 ~ ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ

police crime

Shivamogga ಬಂಧಿಸಲು ತೆರಳಿದ್ದ ವೇಳೆ ದಾಳಿ; ಆರೋಪಿಗೆ ಪೊಲೀಸರ ಗುಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ