
ಮಂಗಳೂರು ಸೇರಿ ಹತ್ತಕ್ಕೂ ಅಧಿಕ ರಾಜ್ಯಗಳಲ್ಲಿ ಪಿಎಫ್ ಐ, ಎಸ್ ಡಿಪಿಐ ಕಚೇರಿಗಳ ಮೇಲೆ NIA ದಾಳಿ
ಎನ್ ಐಎ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿ ಹಾಗೂ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿದೆ.
Team Udayavani, Sep 22, 2022, 10:05 AM IST

ನವದೆಹಲಿ:ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹತ್ತು ರಾಜ್ಯಗಳಲ್ಲಿ ಇರುವ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿಗಳ ಮೇಲೆ ಗುರುವಾರ (ಸೆಪ್ಟೆಂಬರ್ 22) ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಇದನ್ನೂ ಓದಿ:ಶಿರಸಿ: ಎನ್.ಐ.ಎ. ದಾಳಿ, ಎಸ್.ಡಿ.ಪಿ.ಐ. ಮುಖಂಡನ ಬಂಧನ
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ಪಿಎಫ್ ಐನ ನೂರಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ. ಹತ್ತಕ್ಕೂ ಅಧಿಕ ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ಕಾರ್ಯಾಚರಣೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ವರದಿ ವಿವರಿಸಿದೆ.
Karnataka | PFI and SDPI workers protest against NIA raid in Mangaluru
NIA is conducting searches at multiple locations in various states pic.twitter.com/4Pl2Tj8oar
— ANI (@ANI) September 22, 2022
ಉತ್ತರಪ್ರದೇಶದ ಲಕ್ನೋದಲ್ಲಿ ಪಿಎಫ್ ಐನ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಉತ್ತರಕನ್ನಡದ ಶಿರಸಿ, ಕಲಬುರಗಿ, ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಸ್ಥಳಗಳಲ್ಲಿ ಎನ್ ಐಎ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿ ಹಾಗೂ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿದೆ.
ದೆಹಲಿಯ ಶಾಹೀನ್ ಬಾಗ್ ಮತ್ತು ಘಾಜಿಪುರ್ ನಲ್ಲಿಯೂ ಪಿಎಫ್ ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ. ಅಸ್ಸಾಂನಲ್ಲಿಯೂ ಪಿಎಫ್ ಐ ಜೊತೆ ಸಂಪರ್ಕ ಹೊಂದಿರುವ ಒಂಬತ್ತು ಮಂದಿಯನ್ನು ಅಸ್ಸಾಂ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಕಳೆದ ರಾತ್ರಿ ಅಸ್ಸಾಂನ ಹಟಿಗಾಂವ್ ಪ್ರದೇಶದಲ್ಲಿ ಎನ್ ಐಎ ಮತ್ತು ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಿಎಫ್ ಐ ಜತೆ ಸಂಪರ್ಕ ಹೊಂದಿರುವವರನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಎನ್ ಐಗೆ ತಿಳಿಸಿದ್ದಾರೆ.
ಸುಮಾರು 200ಕ್ಕೂ ಅಧಿಕ ಎನ್ ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ. ಮಂಗಳೂರಿನಲ್ಲಿ ಎನ್ ಐಎ ದಾಳಿ ನಡೆಸಿರುವುದರ ವಿರುದ್ಧ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರದ ಪ್ರಗತಿಗಾಗಿ ಜಾತಿ ಮತ್ತು ಪ್ರಾದೇಶಿಕ ತಾರತಮ್ಯವನ್ನು ತೊಡೆದುಹಾಕಿ: ಯೋಗಿ ಆದಿತ್ಯನಾಥ್

ಒಡಿಶಾ ಸಚಿವನ ಹತ್ಯೆ: ಸಿಬಿಐ ತನಿಖೆಗೆ ಆಗ್ರಹ

ಬಿಜೆಪಿ ಜೊತೆಗೆ ಮೈತ್ರಿಗಿಂತ ಸಾಯುವುದು ಲೇಸು: ನಿತೀಶ್ ಕುಮಾರ್

ಮೋದಿ ಸರ್ಕಾರದ ಡಿಡಿಎಲ್ಜೆಯಲ್ಲಿ ಸಚಿವ ಜೈಶಂಕರ್ ನಟನೆ: ಜೈರಾಮ್ ರಮೇಶ್

ಗೋರಖ್ನಾಥ್ ದೇಗುಲ ದಾಳಿ: ಆರೋಪಿ ಅಹ್ಮದ್ ಮುರ್ತಾಜಾಗೆ ಮರಣದಂಡನೆ ಶಿಕ್ಷೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
