ಯುಪಿಯ ಪೂರ್ವಾಂಚಲಕ್ಕೆ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ


Team Udayavani, Oct 25, 2021, 1:10 PM IST

1-nn

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದು, ರಾಜ್ಯದಲ್ಲಿ 9 ಮೆಡಿಕಲ್ ಕಾಲೇಜುಗಳನ್ನು ಸೋಮವಾರ ಏಕಕಾಲದಲ್ಲಿ ಉದ್ಘಾಟನೆ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಸಿದ್ಧಾರ್ಥನಗರ ಜಿಲ್ಲೆಯಿಂದ ವೈದ್ಯಕೀಯ ಕಾಲೇಜುಗಳನ್ನು ಆನ್ಲೈನ್ ಮೂಲಕ ಉದ್ಘಾಟಿಸಿದರು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪಸ್ಥಿತರಿದ್ದರು.

ಈ ವೇಳೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ”ಹಿಂದಿನ ಸರಕಾರಗಳು ‘ಪೂರ್ವಾಂಚಲ್’ ಜನರನ್ನು ಕಾಯಿಲೆಗಳಿಂದ ಬಳಲುವಂತೆ ಬಿಟ್ಟಿದ್ದವು ಆದರೆ ಈಗ ಅದು ಉತ್ತರ ಭಾರತದ ವೈದ್ಯಕೀಯ ಕೇಂದ್ರವಾಗಲಿದೆ” ಎಂದರು.

”ಈ ಹಿಂದೆ, ಪೂರ್ವಾಂಚಲದ ಚಿತ್ರಣವನ್ನು ಹಿಂದಿನ ಸರ್ಕಾರಗಳು ಹಾಳುಮಾಡಿದ್ದವು, ‘ದಿಮಾಗಿ’ ಜ್ವರದಿಂದಾಗಿ ಅದು ಅಪಖ್ಯಾತಿಗೆ ಒಳಗಾಗಿತ್ತು.ಆ ಪ್ರದೇಶವು ಈಗ ಹೊಸ ಭರವಸೆಯನ್ನು ಕಾಣುತ್ತಿದೆ” ಎಂದರು.

”ಸುಮಾರು ಎರಡೂವರೆ ಸಾವಿರ ಹೊಸ ಹಾಸಿಗೆಗಳ 9 ಹೊಸ ವೈದ್ಯಕೀಯ ಕಾಲೇಜುಗಳು ,ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಪೂರ್ವಾಂಚಲ್ ಈಗ ದೇಶದ ಹೊಸ ವೈದ್ಯಕೀಯ ಕೇಂದ್ರವಾಗಲಿದೆ” ಎಂದು ಪ್ರಧಾನಿ ಹೇಳಿದರು.

”ಜನರು ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಓಡಬೇಕಾಗಿತ್ತು, ಆದರೆ ಹೊಸ ವೈದ್ಯಕೀಯ ಕಾಲೇಜುಗಳೊಂದಿಗೆ, ಆ ದಿನಗಳು ಮುಗಿದಿವೆ” ಎಂದರು.

2,329 ಕೋಟಿ ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸಿದ್ಧಾರ್ಥನಗರ, ಇಟಾಹ್, ಹರ್ದೋಯಿ, ಪ್ರತಾಪಗಢ, ಫತೇಪುರ್, ಡಿಯೋರಿಯಾ, ಗಾಜಿಪುರ, ಮಿರ್ಜಾಪುರ್ ಮತ್ತು ಜೌನ್ಪುರ್ ಜಿಲ್ಲೆಗಳಲ್ಲಿ ನಿರ್ಮಿಸಲಾಗಿದೆ.

ಪ್ರಧಾನ ಮಂತ್ರಿ ಕಾರ್ಯಾಲಯದ ಮಾಹಿತಿಗಳ ಪ್ರಕಾರ, ಎಂಟು ವೈದ್ಯಕೀಯ ಕಾಲೇಜುಗಳನ್ನು ಜಿಲ್ಲಾ ಅಥವಾ ರೆಫರಲ್ ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಕೇಂದ್ರದ ಪ್ರಾಯೋಜಿತ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ ಮತ್ತು ಜೌನ್ಪುರದಲ್ಲಿನ ಕಾಲೇಜನ್ನು ರಾಜ್ಯ ಸರಕಾರವು ತನ್ನ ಸ್ವಂತ ಸಂಪನ್ಮೂಲಗಳ ಮೂಲಕ ಕಾರ್ಯಗತಗೊಳಿಸಿದೆ.

ಟಾಪ್ ನ್ಯೂಸ್

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

yoga

ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್

1-ffdd

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ffdd

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

1-ffdfdf

ಖ್ಯಾತ ಪತ್ರಕರ್ತ, ಪದ್ಮಶ್ರೀ ವಿನೋದ್ ದುವಾ ವಿಧಿವಶ

1-sadsd

‘SEX’ ಸಮಸ್ಯೆ :ದೆಹಲಿ ಸಾರಿಗೆ ಇಲಾಖೆಗೆ ನೋಟಿಸ್ ಕಳುಹಿಸಿದ ಮಹಿಳಾ ಆಯೋಗ

ಓಮೆಕ್ರಾನ್ ಭೀತಿ : ವಿದೇಶದಿಂದ ಬರುವ ಪ್ರವಾಸಿಗರಿಗೆ RTPCR ತಪಾಸಣೆ ಕಡ್ಡಾಯ ; ಗೋವಾ ಸಿಎಂ

ಒಮಿಕ್ರಾನ್ ಭೀತಿ : ವಿದೇಶದಿಂದ ಬರುವ ಪ್ರವಾಸಿಗರಿಗೆ RTPCR ತಪಾಸಣೆ ಕಡ್ಡಾಯ ; ಗೋವಾ ಸಿಎಂ

ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಕರ್ನಾಟಕ ಸೇರಿ ಕೆಲವು ರಾಜ್ಯಗಳಿಗೆ ಕೇಂದ್ರ ಪತ್ರ

ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಕರ್ನಾಟಕ ಸೇರಿ ಕೆಲವು ರಾಜ್ಯಗಳಿಗೆ ಕೇಂದ್ರ ಪತ್ರ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

acb

ಚಾಮರಾಜನಗರ : ತೆರಿಗೆ ಇಲಾಖೆಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಎಸಿಬಿ ಬಲೆಗೆ

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.