ಮೇ 8ರಿಂದ ಪ್ರಧಾನಿ ಮೋದಿ ಪೋರ್ಚುಗಲ್, ಫ್ರಾನ್ಸ್ ಪ್ರವಾಸ
Team Udayavani, Apr 4, 2021, 6:36 PM IST
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ವಿಶಾಲ ವ್ಯಾಪ್ತಿ ಆಧಾರಿತ ಹೂಡಿಕೆ ಒಪ್ಪಂದ (ಬಿಬಿಟಿಐಎ)ಕ್ಕೆ ಮೇ 8ರಂದು ಸಹಿ ಹಾಕಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಪೋರ್ಚುಗಲ್ ಪ್ರವಾಸ ಕೈಗೊಳ್ಳಲ್ಲಿದ್ದು, ಲಿಸ್ಬೆನ್ನಲ್ಲಿ ಅದಕ್ಕೆ ಸಂಬಂಧಿಸಿದ ಸಮ್ಮೇಳನದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಮತ್ತು ಐರೋಪ್ಯ ರಾಷ್ಟ್ರಗಳ ಪ್ರತಿನಿಧಿಗಳ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಐರೋಪ್ಯ ಒಕ್ಕೂಟದ ವ್ಯಾಪಾರ ವಹಿವಾಟಿನಲ್ಲಿ ಭಾರತ ಪ್ರಮುಖ ಪಾಲುದಾರ ರಾಷ್ಟ್ರ. 2007ರಿಂದ ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವೆ ಇರುವ ಔದ್ಯಮಿಕ ಭಿನ್ನಾಭಿಪ್ರಾಯಗಳು ಈ ಒಡಂಬಡಿಕೆಯಿಂದ ದೂರವಾಗುವ ಸಾಧ್ಯತೆ ಇದೆ.
ಲಿಸ್ಬೇನ್ನಿಂದ 2ನೇ ಹಂತದಲ್ಲಿ ಅವರು ಫ್ರಾನ್ಸ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರಾನ್ ಜತೆಗೆ ಕಡಲು ಭದ್ರತೆಗೆ ಸಂಬಂಧಿಸಿದಂತೆ ಮೋದಿ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ :ಕೋವಿಡ್ ನಿರ್ಬಂಧ ಸಡಿಲಿಕೆಗೆ ಸರಕಾರವನ್ನು ಒತ್ತಾಯಿಸಿದ ಹೊಟೇಲಿಗರ ಸಂಘಟನೆ “ಆಹಾರ್’