ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪೊಲೀಸ್ ವಾಹನ: ಪಿಎಸ್ಐ ಮತ್ತು ಚಾಲಕನಿಗೆ ಗಾಯ
Team Udayavani, Jan 30, 2021, 10:50 PM IST
ಬಂಟ್ವಾಳ: ರಾ.ಹೆ. 75ರ ಬಿ.ಸಿ.ರೋಡು ಸರ್ಕಲ್ ಬಳಿ ದನವೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಆಳಕ್ಕೆ ಬಿದ್ದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಘಟನೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪಿಎಸ್ಐ ಸಂಜೀವ ಹಾಗೂ ಚಾಲಕ ಸತೀಶ್ ಗಾಯಗೊಂಡು, ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಮುಂಜಾನೆ ರಾತ್ರಿ ಗಸ್ತಿನ ಹಿನ್ನೆಲೆಯಲ್ಲಿ ಇವರು ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಭಾಗಕ್ಕೆ ತೆರಳುತ್ತಿದ್ದು, ಈ ವೇಳೆ ಘಟನೆ ನಡೆದಿದೆ. ಪೊಲೀಸ್ ವಾಹನ ಸುಮಾರು 40 ಅಡಿಗೆ ಬಿದ್ದಿದ್ದು, ಕೆಳಗೆ ಬೀಳುತ್ತಿರುವುದನ್ನು ಕಂಡ ವಾಹನದವರು ಆ್ಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ:ಮನೆ ಕಳೆದುಕೊಳ್ಳುವ ಭೀತಿ: ಮೃತ ತಾಯಿಯ ದೇಹವನ್ನು 10 ವರ್ಷ ಫ್ರೀಜರ್ನಲ್ಲಿಟ್ಟಿದ್ದ ಮಹಿಳೆ!