ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಕಣ್ಮರೆ: ಮುಂದುವರೆದ ಶೋಧ ಕಾರ್ಯ
Team Udayavani, Jan 23, 2022, 11:13 AM IST
ಸಾಗರ: ನಗರದ ಖಾಸಗಿ ಬಸ್ ಮಾಲೀಕ ಪ್ರಕಾಶ್ ಟ್ರಾವೆಲ್ಸ್‌ನ ಪ್ರಕಾಶ್ ಶುಕ್ರವಾರ ರಾತ್ರಿ ಎಂಟು ಘಂಟೆಯ ನಂತರ ಕಣ್ಮರೆಯಾಗಿದ್ದು, ಅವರ ಕಾರು, ಮೊಬೈಲ್ ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆಯ ಬಳಿ ಕಂಡುಬಂದಿರುವುದರಿಂದ ಶನಿವಾರ ಶರಾವತಿ ಹಿನ್ನೀರಿನಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಸ್ನೇಹಿತರು, ಮುಳುಗು ತಜ್ಞರು ಹುಡುಕಾಟ ನಡೆಸಿದ್ದಾರೆ.
ರಾತ್ರಿಯಾದ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವವರೆಗೂ ಪ್ರಕಾಶರ ಯಾವುದೇ ಸುಳಿವು ಸಿಕ್ಕಿಲ್ಲ. ಭಾನುವಾರ ಮುಂಜಾನೆಯಿಂದ ಮತ್ತೆ ಶೋಧನೆ ಮುಂದುವರೆದಿದೆ.
ಶುಕ್ರವಾರ ರಾತ್ರಿ ಪ್ರಕಾಶ್ ಮೊಬೈಲ್‌ಗೆ ಎಷ್ಟೇ ಬಾರಿ ಕರೆ ಮಾಡಿದರೂ ಯಾವುದೇ ಕರೆ ಸ್ವೀಕರಿಸುತ್ತಿಲ್ಲದಿದುರಿಂದ ಅನುಮಾನಗೊಂಡ ಮನೆಯವರು ಪೊಲೀಸರ ಸಹಾಯ ಪಡೆದಿದ್ದಾರೆ.
ಪ್ರಕಾಶ್ ಮೊಬೈಲ್‌ನಲ್ಲಿ ತಾಲೂಕಿನ ಹುಲಿದೇವರಬನ ಟವರ್ ಲೊಕೇಶನ್ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಅವರ ಕಾರು ಹಾಗೂ ಮೊಬೈಲ್ ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿದೆ.