Udayavni Special

ಜಲ್ಲಿಕಟ್ಟು ನಿಷೇಧಿಸಿದ್ದೇ ಯುಪಿಎ: ಪ್ರಧಾನಿ ಮೋದಿ ವಾಗ್ಬಾಣ


Team Udayavani, Apr 3, 2021, 7:25 AM IST

ಜಲ್ಲಿಕಟ್ಟು ನಿಷೇಧಿಸಿದ್ದೇ ಯುಪಿಎ: ಪ್ರಧಾನಿ ಮೋದಿ ವಾಗ್ಬಾಣ

ಮಧುರೈ: ತಮಿಳುನಾಡಿನ ಮತದಾರರ ಬೆರಳಿಗೆ ಶಾಯಿ ಅಂಟಲು ಮೂರು ದಿನ ಬಾಕಿ ಇರುವಾ ಗಲೇ ರಾಜಕೀಯ ಜಟಾಪಟಿ ಜೋರಾಗಿದೆ. ಅಖಾಡಕ್ಕೀಗ ಜಲ್ಲಿಕಟ್ಟು ಗೂಳಿಯೂ ನುಗ್ಗಿ ಬಂದಿದೆ! 2011ರಲ್ಲಿ ಡಿಎಂಕೆ- ಕಾಂಗ್ರೆಸ್‌ ಎರಡೂ ಸೇರಿ ತಮಿಳು ಸಂಸ್ಕೃತಿಯಾದ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ.

ಮಧುರೈನಲ್ಲಿ ಶುಕ್ರವಾರ ಚುನಾವಣ ಪ್ರಚಾರ ಕೈಗೊಂಡಿದ್ದ ಪ್ರಧಾನಿ, 2011ರಲ್ಲಿದ್ದ ಯುಪಿಎ ಸರಕಾರದಲ್ಲಿ ಡಿಎಂಕೆಯ ದೊಡ್ಡ ದೊಡ್ಡ ಸಚಿವರೂ ಇದ್ದರು. ಒಬ್ಬ ಯುಪಿಎ ಮುಖಂಡನಂತೂ ಜಲ್ಲಿ ಕಟ್ಟು ಅನಾಗರಿಕ ಕ್ರೀಡೆ ಅಂತಲೇ ಜರಿದಿದ್ದರು. ಈ ಹಿಂದೆ ಚುನಾವಣ ಪ್ರಣಾಳಿಕೆಯಲ್ಲೂ ಕಾಂಗ್ರೆಸ್‌ ಜಲ್ಲಿಕಟ್ಟನ್ನು ನಿಷೇಧಿಸುವುದಾಗಿ ಹೇಳಿತ್ತು. ಈಗ ಕಾಂಗ್ರೆಸ್‌- ಡಿಎಂಕೆ ತಾವು ತಮಿಳು ಸಂಸ್ಕೃತಿ ರಕ್ಷಕರು ಅಂತ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ಬೇರೆ ಕಥೆ ಹೇಳುತ್ತಿವೆ” ಎಂದು ಟೀಕಿಸಿದರು.

ತಮಿಳರ ನೋವು ಬಲ್ಲೆ: 2016-17ರಲ್ಲಿ ತಮಿಳು ನಾಡಿನ ಜನ ಜಲ್ಲಿಕಟ್ಟಿಗೆ ಪುನರ್ಜನ್ಮ ನೀಡಲು ಬಯ ಸಿದ್ದರು. ನಾನು ನಿಮ್ಮ ನೋವನ್ನು ಬಲ್ಲೆ. ಜಲ್ಲಿಕಟ್ಟು ಮುಂದುವರಿಸುವ ಬಗ್ಗೆ ಎಐಎಡಿಎಂಕೆ ಹೊರಡಿಸಿದ್ದ ಅಧ್ಯಾದೇಶಕ್ಕೆ ನಾವು ಒಪ್ಪಿಗೆ ನೀಡಿದೆವು. ಈಗ ಜಲ್ಲಿಕಟ್ಟು ಯಾವುದೇ ಅಡೆತಡೆಗಳಿಲ್ಲದೆ ನಡೆ ಯುತ್ತಿದೆ. ಅಂದು ಜಲ್ಲಿಕಟ್ಟು ವಿರೋಧಿಸಿದ್ದ ಕಾಂಗ್ರೆಸ್‌- ಡಿಎಂಕೆ ಈಗ ಬೇರೆಯದ್ದೇ ನಾಟಕ ಆಡುತ್ತಿವೆ. ಜನರನ್ನು ಸತ್ಯದಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸ್ತ್ರೀ ನಿಂದಕರಿಗೆ ಪಾಠ ಕಲಿಸಿ: ಮೀನಾಕ್ಷಿಯಮ್ಮ ನೆಲೆಸಿದ ಮಧುರೈ ನಾರಿಶಕ್ತಿಯ ಪಾಠ ಹೇಳಿದೆ. ಆದರೆ, ಮಧುರೈನ ಅಂತರಂಗ ಡಿಎಂಕೆ- ಕಾಂಗ್ರೆಸ್‌ಗೆ ಇದುವರೆಗೂ ಅರ್ಥವಾಗಿಲ್ಲ. ಆ ಪಕ್ಷಗಳ ಮುಖಂಡರು ಮಹಿಳೆಯರನ್ನು ಅವ‌ಮಾ ನಿಸುತ್ತಲೇ ಇದ್ದಾರೆ. ಇಂಥವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎ. ರಾಜಾರ ವಿವಾದಾತ್ಮಕ ಹೇಳಿಕೆಗೆ ಪ್ರಧಾನಿ ಪುನಃ ಟಾಂಗ್‌ ಕೊಟ್ಟರು.

ಅಯ್ಯಪ್ಪ ಭಕ್ತರಿಗೆ ಲಾಠಿ ಸ್ವಾಗತವೇಕೆ?
41 ದಿನಗಳ ಕಠಿನ ವ್ರತ ಮುಗಿಸಿ ಲಕ್ಷಾಂತರ ಭಕ್ತರು, ಅಯ್ಯಪ್ಪನನ್ನು ನೋಡಲು ಶಬರಿಮಲೆಗೆ ಬರುತ್ತಾರೆ. ಹೂವಿನೊಂದಿಗೆ ಸ್ವಾಗತಿಸಬೇಕಿದ್ದ ಭಕ್ತರಿಗೆ ಕೇರಳ ಸರಕಾರ ಲಾಠಿಯ ಸ್ವಾಗತ ಕೋರುತ್ತಿದೆ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ… ಅಯ್ಯಪ್ಪನ ಭಕ್ತರು ಮುಗ್ಧರೇ ಹೊರತು, ಕ್ರಿಮಿನಲ್‌ ಗಳಲ್ಲ…
– ಶಬರಿಮಲೆ ಅಯ್ಯಪ್ಪನ ಸಾನ್ನಿಧ್ಯವಿರುವ ಪತ್ತನಂತಿಟ್ಟದಲ್ಲಿ ನಿಂತು ಪ್ರಧಾನಿ ಮೋದಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಸರಕಾರದ ವಿರುದ್ಧ ವಾಗøಹಾರ ನಡೆಸಿದರು. ಶುಕ್ರವಾರದ ರ್ಯಾಲಿಯ ಹೈಲೈಟ್ಸ್‌ ಹೀಗಿದೆ…

– ಎಲ್‌ಡಿಎಫ್‌ ಸರಕಾರ ಮೊದಲು ಕೇರಳದ ಚಿತ್ರವನ್ನೇ ವಿರೂಪಗೊಳಿಸಲು ಯತ್ನಿಸಿತ್ತು. ಕೇರಳ ಸಂಸ್ಕೃತಿ ಹಿಂದುಳಿದಿದೆ ಅಂತಲೂ ತೋರಿಸಲೆತ್ನಿಸಿತ್ತು. ಈಗ ಪುಣ್ಯ ಕ್ಷೇತ್ರಗಳ ಶಾಂತಿ, ಪಾವಿತ್ರ್ಯಕ್ಕೆ ಭಂಗ ತರುತ್ತಿದೆ.

– ಎಲ್‌ಡಿಎಫ್‌ ಮತ್ತು ಯುಡಿಎಫ್‌ ಹಣಕ್ಕಾಗಿ ಎಂಥ ದುರಾಸೆಗಿಳಿಯಲೂ ರೆಡಿ. ಸೋಲಾರ್‌ ಹಗರಣ, ಡಾಲರ್‌ ಹಗರಣ, ಭೂಮಾಫಿಯಾ, ಅಕ್ರಮ ಚಿನ್ನ ಕಳ್ಳಸಾಗಣೆ, ಲಂಚ ಹಗರಣ, ಅಬಕಾರಿ ಹಗರಣ… ಹೀಗೆ ಈ ಪಟ್ಟಿಗೆ ಕೊನೆಯಿಲ್ಲ. ಇಬ್ಬರೂ ಸೇರಿ ಎಲ್ಲ ರಂಗಗಳನ್ನೂ ಲೂಟಿ ಮಾಡಿದ್ದಾರೆ.

– ತ್ರಿವಳಿ ತಲಾಕ್‌ ಬಗ್ಗೆ ಮುಸ್ಲಿಂ ಲೀಗ್‌ನ ನಿಲುವೇನು? ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳು ಸಮಾಜಕ್ಕೆ ಮಾಡಿ¨ªಾದರೂ ಏನು?

– ಎಲ್‌ಡಿಎಫ್- ಯುಡಿಎಫ್‌ ಕೇರಳದಲ್ಲಿ ಸರಕಾರಿ ವ್ಯವಸ್ಥೆಯನ್ನು ಪಾರ್ಶ್ವವಾಯುವಿಗೆ ತಳ್ಳಿವೆ. ರಾಜಕೀಯವಾಗಿ ಇವುಗಳಿಗೆ ಅಂತ್ಯಹಾಡಿ, ಎನ್‌ಡಿಎ ಪ್ರಗತಿಯನ್ನು ಬೆಂಬಲಿಸಲು ಇದು ಸೂಕ್ತ ಸಮಯ.

– ಸುಶಿಕ್ಷಿತರನ್ನು ರಾಜಕೀಯಕ್ಕೆ ತರುವುದೇ ಬಿಜೆಪಿಯ ಮುಖ್ಯ ಉದ್ದೇಶ. ಅದಕ್ಕಾಗಿ ಇ. ಶ್ರೀಧರನ್‌ರಂಥವರು ಬಿಜೆಪಿ ಸೇರಿದ್ದಾರೆ. ಶ್ರೀಧರನ್‌ ಕೇರಳ ರಾಜಕಾರಣದ ಗೇಮ್‌ ಚೇಂಜರ್‌. ದೇಶಕ್ಕೆ ಭಾರೀ ಕೊಡುಗೆ ನೀಡಿದ ಇವರು, ಸಮಾಜಸೇವೆಗಾಗಿ ಈಗ ಬಿಜೆಪಿಯನ್ನು ಆಯ್ಕೆಮಾಡಿಕೊಂಡಿದ್ದಾರೆ.

ಎಂಜಿಆರ್‌ ಸ್ಮರಿಸಿದ ಮೋದಿ
ಮಧುರೈ ಅಂದರೆ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್‌ ನೆನಪಾಗುತ್ತಾರೆ. ಎಂಜಿಆರ್‌ ಸರಕಾರವನ್ನು ಉಚ್ಚಾಟಿಸಿ ಅಂದು ಕಾಂಗ್ರೆಸ್‌ ರಾಷ್ಟ್ರಪತಿ ಆಳ್ವಿಕೆ ಹೇರಿದ್ದಾಗ, ಮಧುರೈ ಪಶ್ಚಿಮ ಕ್ಷೇತ್ರದ ಜನ ಅವರ ಕೈಹಿಡಿದು ಗೆಲ್ಲಿಸಿ ದ್ದರು. 1977, 1980, 1984ರಲ್ಲಿ ಈ ಭಾಗದಿಂ ದಲೇ ಎಂಜಿಆರ್‌ ಸ್ಪರ್ಧಿಸಿ ಗೆದ್ದಿದ್ದರು. ಅವರ “ಮಧುರೈ ವೀರನ್‌’ ಸಿನೆಮಾವನ್ನು ಮರೆಯಲಾ ದೀತೆ ಎಂದು ಮೋದಿ ಗುಣಗಾನ ಮಾಡಿದರು.

ಪಿಣರಾಯಿಗೆ ಕಾಂಗ್ರೆಸ್‌ ಕರೆಂಟ್‌ ಶಾಕ್‌
ವಿದ್ಯುತ್‌ ಖರೀದಿಯಲ್ಲಿ ಕೇರಳ ಸರಕಾರ ಹಗ ರಣ ನಡೆಸಿದೆ ಎಂದು ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಗಂಭೀರ ಆರೋಪ ಮಾಡಿದ್ದಾರೆ. ಕೇರಳ ಸರಕಾರ, ಅದಾನಿ ಕಂಪೆನಿಯಿಂದ 8,785 ಕೋಟಿ ರೂ.ಗೆ 300 ಮೆಗಾವ್ಯಾಟ್‌ ದೀರ್ಘಾವಧಿಯ ಪವನಶಕ್ತಿಯನ್ನು 25 ವರ್ಷ ಗಳವರೆಗೆ ಖರೀದಿಸಲು ಮುಂದಾಗಿದ್ದೇಕೆ? ಇದರಿಂದ ಅದಾನಿಗೆ 1 ಸಾವಿರ ಕೋಟಿ ರೂ. ಲಾಭವಾಗಲಿದೆ. ಈ ಒಪ್ಪಂದ ಜನರಿಗೆ ದೊಡ್ಡ ಹೊರೆ. ಬಿಜೆಪಿ ಜತೆಗೂಡಿ ಪಿಣರಾಯಿ ಈ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ.

ಐಟಿ ದಾಳಿಗೆ ಡಿಎಂಕೆ ಕೆಂಡಾಮಂಡಲ
ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಪುತ್ರಿ ಸೆಂಥಮರಾಯಿ ಅವರ ಚೆನ್ನೆçಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿಗೆ ಡಿಎಂಕೆ ಕೆಂಡಾಮಂಡಲವಾಗಿದೆ. ಇದು ರಾಜಕೀಯ ದುರುದ್ದೇಶದಿಂದ ನಡೆದ ದಾಳಿ. ಇಂಥ ದಾಳಿಗೆ ಪಕ್ಷ ಹೆದರುವುದಿಲ್ಲ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್‌ ಹೇಳಿದ್ದಾರೆ.

ಟಾಪ್ ನ್ಯೂಸ್

shambo shiva shankara kannada film

ಮಾತಿನ ಮನೆಯಲ್ಲಿ ‘ಶಂಭೋ ಶಿವಶಂಕರ’

07

ನಟಿ ಮಿನಿಶಾ ಮೇಲೆ ಹಣ ಕಳುವು ಆರೋಪ ಕೇಳಿ ಬಂದಿತ್ತು: ಅಷ್ಟಕ್ಕೂ ಅಂದು ನಡೆದಿದ್ದೇನು ?

ಕುಲಹಳ್ಳಿಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ವಶ: ಬನಹಟ್ಟಿ ಪೊಲೀಸರಿಂದ ಇಬ್ಬರ ಬಂಧನ

ಕುಲಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ವಶ: ಇಬ್ಬರ ಬಂಧನ

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಸಿ.ಪಿ.ಯೋಗೇಶ್ವರ್

ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯೋಣ: ಬಿಜೆಪಿ ಬೆಳವಣಿಗೆ ಬಗ್ಗೆ ಯೋಗೇಶ್ವರ್

ಕಲಿಕಾ ನಿರಂತರತೆಗೆ ಕಾರ್ಯಪಡೆ ರಚನೆ: ಸಚಿವ ಸುರೇಶ್ ಕುಮಾರ್

ಕಲಿಕಾ ನಿರಂತರತೆಗೆ ಕಾರ್ಯಪಡೆ ರಚನೆ: ಸಚಿವ ಸುರೇಶ್ ಕುಮಾರ್

cpy

ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ: ಸಚಿವ ಯೋಗೇಶ್ವರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sದ್ಗಹಗ್ದಸದ್ಗಹಜಜಹಗ್ದದ

ಡೆಲ್ಟಾ ಹಿನ್ನೆಲೆ : ಗೋವಾದಲ್ಲಿ ಕೆಲ ದಿನಗಳ ಕಾಲ ಕರ್ಫ್ಯೂ ಸಾಧ್ಯತೆ : ಪ್ರಮೋದ ಸಾವಂತ್

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

rಗಹಗರ್ಗನಬಗ್ನಹಗ್

ಸಚಿವರ ವಿರುದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

shambo shiva shankara kannada film

ಮಾತಿನ ಮನೆಯಲ್ಲಿ ‘ಶಂಭೋ ಶಿವಶಂಕರ’

07

ನಟಿ ಮಿನಿಶಾ ಮೇಲೆ ಹಣ ಕಳುವು ಆರೋಪ ಕೇಳಿ ಬಂದಿತ್ತು: ಅಷ್ಟಕ್ಕೂ ಅಂದು ನಡೆದಿದ್ದೇನು ?

ಕುಲಹಳ್ಳಿಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ವಶ: ಬನಹಟ್ಟಿ ಪೊಲೀಸರಿಂದ ಇಬ್ಬರ ಬಂಧನ

ಕುಲಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ವಶ: ಇಬ್ಬರ ಬಂಧನ

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.