ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

Team Udayavani, Oct 16, 2021, 6:50 PM IST

nayi

ಸಾಗರ: ಕಾಣೆಯಾದ ಮುದ್ದಾದ ನಾಯಿಮರಿಯೊಂದು ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳ ನೆರವಿನಿಂದ ಮರಳಿ ಮನೆಗೆ ಸೇರಿದ ಘಟನೆ ನಡೆದಿದೆ.

ಜೆಸಿ ರಸ್ತೆಯಲ್ಲಿನ ಐಸ್‌ಕ್ರೀಂ ಮಾರಾಟಗಾರ ಪ್ರಶಾಂತ್ ಬಾಬು ಸಾಕಿದ್ದ ನಾಲ್ಕು ತಿಂಗಳ ಪುಟ್ಟ ನಾಯಿ ಮರಿ ಶುಕ್ರವಾರ ಮಧ್ಯಾಹ್ನದ ವೇಳೆ ಕಾಣೆಯಾಗಿ ಮನೆಯವರನ್ನು ಕಂಗಾಲು ಮಾಡಿತ್ತು.

ಅಂಗಡಿಗಳಿಗೆ ಐಸ್‌ಕ್ರೀಂ ವಿತರಿಸಲು ಪ್ರಶಾಂತ್‌ಬಾಬು ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಟಾಗ, ನಾಲ್ಕು ತಿಂಗಳ ಪೊಮೋರಿಯನ್ ನಾಯಿ ’ಕ್ಯೂಟಿ’ ಸಹ ಮನೆಯಿಂದ ಹೊರಗೆ ಬಂದಿದೆ. ಜೆಸಿ ರಸ್ತೆಯಲ್ಲಿ ವ್ಯಕ್ತಿಯೋರ್ವನ ಕಾಲ ಬುಡದಲ್ಲಿ ಪುಟ್ಟ ಮರಿ ಕಾಣಿಸಿಕೊಂಡಿದೆ. ಅದನ್ನು ಅವರು ಎತ್ತಿಕೊಂಡು ತಮ್ಮ ದ್ವಿಚಕ್ರವಾಹನದಲ್ಲಿ ತೆರಳಿದ್ದಾರೆ.

ನಾಯಿಮರಿ ಕಾಣೆಯಾದ ಹಿನ್ನೆಲೆಯಲ್ಲಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಪುಟ್ಟ ಮರಿಯನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡ ವ್ಯಕ್ತಿ ವಿಠ್ಠಲ ದೇವಸ್ಥಾನ ರಸ್ತೆ, ಅಶೋಕ ರಸ್ತೆಗಳಲ್ಲಿ ಸಂಚರಿಸಿದ ದೃಶ್ಯ ಕಂಡುಬಂದಿದೆ. ಅವುಗಳ ವಿಡಿಯೋ ಮತ್ತು ಫೋಟೋಗಳನ್ನು ವಿವಿಧ ವಾಟ್ಸ್‌ಆಪ್ ಗುಂಪುಗಳಲ್ಲಿ ಶೇರ್ ಮಾಡಲಾಗಿತ್ತು.

ಶನಿವಾರ ಬೆಳಗ್ಗೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ದೂರವಾಣಿ ಮೂಲಕ ಸಂಪರ್ಕಿಸಿ, ನಾಯಿಮರಿ ತನ್ನ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾನೆ. ತಕ್ಷಣ ಪ್ರಶಾಂತ್‌ಬಾಬು ವಾಹನದಲ್ಲಿ ಧಾವಿಸಿ, ನಾಯಿ ಮರಿಯನ್ನು ಮನೆಗೆ ಕರೆತಂದಿದ್ದಾರೆ. ಕಾಣೆಯಾಗಿದ್ದ ನಾಯಿ ಮರಿ ಪತ್ತೆಗೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಿಸಿ ಕ್ಯಾಮರಾದ ದೃಶ್ಯ ಸಹಕಾರಿಯಾಗಿದೆ.

ಶುಕ್ರವಾರ ಮಧ್ಯಾಹ್ನ ನಾಯಿ ಮರಿ ಕಾಣೆಯಾಗಿತ್ತು. ಸಿಸಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದರಿಂದ, ನಾಯಿಯನ್ನು ಕರೆದುಕೊಂಡು ಹೋಗಿದ್ದ ವ್ಯಕ್ತಿಯೇ ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗಿದೆ.

ಶೇರ್ ಮಾಡಲಾಗಿದ್ದ ದೃಶ್ಯಾವಳಿಗಳನ್ನು ಡಿಲಿಟ್ ಮಾಡಬೇಕೆಂದು ಆ ವ್ಯಕ್ತಿ ಕೋರಿದ್ದಾರೆ.

ಟಾಪ್ ನ್ಯೂಸ್

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

25clean

ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ ತಳವಾರ

1ddsd

ತೀರ್ಥಹಳ್ಳಿ: ಸರ್ಕಾರಿ ರಜೆಯಲ್ಲಿ ಹಂಚು ಸಾಗಾಟ; ಅಧಿಕಾರಿಗಳು ಗಮನಿಸಲಿ!

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.