ರಾಮನಗರ: ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಡಿಕೆ ಸುರೇಶ್, ಅಶ್ವತ್ಧ ನಾರಾಯಣ ಜಟಾಪಟಿ
ನಮಗೆ ಹೇಳದೆಯೇ ಬಿಜೆಪಿಯಿಂದ ಕಾರ್ಯಕ್ರಮ ನಡೆಸಿದೆ.
Team Udayavani, Jan 3, 2022, 2:16 PM IST
ಬೆಂಗಳೂರು:ರಾಮನಗರದಲ್ಲಿ ನಾನಾ ಅಭಿವೃದ್ಧಿ ಕಾರ್ಯಕ್ರಮಗಳ ಅನಷ್ಠಾನಕ್ಕಾಗಿ ಸೋಮವಾರ (ಜನವರಿ 03) ಆಯೋಜಿಸಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಮಧ್ಯೆ ನಡೆದ ವಾಗ್ವಾದ ಕೈ ಕೈ ಮಿಲಾಯಿಸುವ ಹಂತ ತಲುಪಿ ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲೇ ರಾದ್ಧಾಂತ ಸೃಷ್ಟಿಯಾದ ಘಟನೆ ನಡೆದಿದೆ.
ಮೇಕೆದಾಟು ವಿಚಾರವಾಗಿ ಬಿಜೆಪಿ – ಕಾಂಗ್ರೆಸ್ ಮಧ್ಯೆ ನಡೆಯುತ್ತಿದ್ದ ಆರೋಪ ಈಗ ವೇದಿಕೆಯಲ್ಲೇ ಹೊಡೆದಾಟ ಸೃಷ್ಟಿಸುವ ಸ್ಥಿತಿ ನಿರ್ಮಿಸಿದೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದರಿಗೆ ಸೂಕ್ತ ಗೌರವ ನೀಡಿಲ್ಲ ಎಂದು ಆರೋಪಿಸಿ ವೇದಿಕೆಯಲ್ಲಿ ಪ್ರತಿಭಟಿಸಿದ ಸಂಸದ ಡಿ ಕೆ ಸುರೇಶ್ , ಕಾರ್ಯಕ್ರಮದ ಬಗ್ಗೆ ನಮ್ಮ ಜೊತೆ ಸಭೆ ನಡೆಸಬೇಕಿತ್ತು ವಿಜೃಂಭಣೆಯಿಂದ ನಿಮ್ಮನ್ನು ಸ್ವಾಗತ ಮಾಡುತ್ತಿದ್ದೆವು. ನಮಗೆ ಹೇಳದೆಯೇ ಬಿಜೆಪಿಯಿಂದ ಕಾರ್ಯಕ್ರಮ ನಡೆಸಿದೆ. ನಿಮಗೆ ಈ ಸಂಸ್ಕೃತಿ ಆರೆಸ್ಸೆಸ್ ಹೇಳಿಕೊಡ್ತಾ? ಎಂದು ಪ್ರಶ್ನಿಸಿದರು.
ನಂತರ ಅಶ್ವತ್ ನಾರಾಯಣ್ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಡಿಕೆ ಎಂದು ಘೋಷಣೆ ಹಾಕಿದಾಗ ಯಾರಪ್ಪಾ ಅಲ್ಲಿ ಗಂಡು ಕೆಲಸದಲ್ಲಿ ತೋರಿಸಿ” ಎಂದು ಅಶ್ವತ್ ನಾರಾಯಣ್ ಹೇಳಿಕೆಗೆ ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಭಾಷಣ ಮಾಡುತ್ತಿದ್ದ ಅಶ್ವತ್ಥನಾರಾಯಣ ಬಳಿಗೆ ನುಗ್ಗಿ ಬಂದಾಗ ಇಬ್ಬರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಅಶ್ವತ್ಥ್ ನಾರಾಯಣ ಮೈಕ್ ಕಿತ್ತೆಸೆದ ಎಂಎಲ್ ಸಿ ರವಿ ಭಾಷಣಕ್ಕೆ ಅಡ್ಡಿಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ
ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಲಭ್ಯ
ಕಾಮೆಡ್ ಕೆ ಫಲಿತಾಂಶ ಪ್ರಕಟ: ಟಾಪ್ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನ ವಿರುದ್ಧದ ಎಫ್ಐಆರ್ ರದ್ದತಿಗೆ ನಕಾರ
ಪಿರಿಯಾಪಟ್ಟಣ : ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ