RBI MPC : ಸತತ 9ನೇ ಬಾರಿಯೂ ರೆಪೋ ದರ ಯಥಾಸ್ಥಿತಿ-ಜಿಡಿಪಿ ಅಂದಾಜು ಹೆಚ್ಚಳ
ಇಎಂಐ ಪಾವತಿಯಲ್ಲಿ ಯಾವುದೇ ರೀತಿಯ ಆರ್ಥಿಕ ಹೊರೆ ಬೀಳುವುದಿಲ್ಲ
Team Udayavani, Aug 8, 2024, 12:10 PM IST
ನವದೆಹಲಿ: ಸತತ 9ನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ (ಆಗಸ್ಟ್ 08) ತಿಳಿಸಿದ್ದಾರೆ.
ಹೀಗಾಗಿ ರೆಪೋ ದರ ಶೇ.6.50ರಲ್ಲೇ ಮುಂದುವರಿಯಲಿದೆ. ಇದೇ ವೇಳೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಆರ್‌ಬಿಐ ಶೇ.7.2 ಎಂದು ಅಂದಾಜಿಸಿದೆ. ಈ ಹಿಂದೆ ಅದನ್ನು ಶೇ.7 ಎಂದು ಅಂದಾಜಿಸಲಾಗಿತ್ತು. ಹಣದುಬ್ಬರದ ಅಂದಾಜನ್ನು ಶೇ.4.5 ರಲ್ಲೇ ಮುಂದುವರಿಸಲಾಗಿದೆ.
2023ರ ಫೆಬ್ರವರಿಯಿಂದ ಈವರೆಗೂ ರೆಪೋ ದರ ಶೇ.6.5ರಲ್ಲಿಯೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬಂದಿರುವುದಾಗಿ ಆರ್ ಬಿಐ ತಿಳಿಸಿದೆ.
ರೆಪೋ ದರ ಯಥಾಸ್ಥಿತಿಯಿಂದಾಗಿ ಗೃಹ ಹಾಗೂ ವಾಹನ ಸಾಲದ ಇಎಂಐ ಪಾವತಿಯಲ್ಲಿ ಯಾವುದೇ ರೀತಿಯ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಆರ್ ಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
The Big Billion Days 2024 ಗೆ ಫ್ಲಿಪ್ ಕಾರ್ಟ್ ಸಜ್ಜು: ಪೂರೈಕೆ ಜಾಲದ ವಿಸ್ತರಣೆ
Tata Curvv:ಟಾಟಾ ಕರ್ವ್ ಪೆಟ್ರೋಲ್, ಡೀಸೆಲ್ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ
August 1.75 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ: 10% ಹೆಚ್ಚಳ
GDP;ಕಡಿಮೆ ಸರಕಾರಿ ವೆಚ್ಚದಿಂದಾಗಿ ಬೆಳವಣಿಗೆ ನಿಧಾನವಾಗಿದೆ: ಶಕ್ತಿಕಾಂತ ದಾಸ್
GDP; ಭಾರತದ ಜಿಡಿಪಿ 15 ತಿಂಗಳ ಕನಿಷ್ಠ ಮಟ್ಟಕ್ಕೆ: 6.7% ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.