Udayavni Special

ಶಹಬಾಜ್ ಬೌಲಿಂಗ್ ಕಮಾಲ್ : ಹೈದರಾಬಾದ್‌ ವಿರುದ್ಧ RCB ಗೆ 6 ರನ್‌ಗಳ ಗೆಲುವು

3 ವಿಕೆಟ್‌ ಕಿತ್ತ ಶಹಜಾಬ್‌, ರೋಚಕ ಹೋರಾಟದಲ್ಲಿ ಕೈಚೆಲ್ಲಿದ ಹೈದರಾಬಾದ್‌

Team Udayavani, Apr 14, 2021, 11:31 PM IST

ಹೈದರಾಬಾದ್‌ ವಿರುದ್ಧ RCB 6 ರನ್‌ಗಳ ಗೆಲುವು : ಸತತ 2ನೇ ಪಂದ್ಯ ಗೆದ್ದಿರುವ ಕೊಹ್ಲಿ ಪಡೆ

ಚೆನ್ನೈ: ಸನ್‌ರೈಸರ್ ಹೈದರಾಬಾದ್‌ ಎದುರಿನ ಸಣ್ಣ ಮೊತ್ತದ ಹೋರಾಟದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಆರು ರನ್ನುಗಳ ರೋಚಕ ಗೆಲುವು ದಾಖಲಿಸಿದೆ. ಕೂಟದ ಮೊದಲೆರಡೂ ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೊಂದೆಡೆ ಹೈದರಾಬಾದ್‌ ಎರಡೂ ಪಂದ್ಯಗಳಲ್ಲಿ ಎಡವಿತು.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಹೋರಾಟಭರಿತ ಅರ್ಧ ಶತಕದಿಂದಾಗಿ ಆರ್‌ಸಿಬಿ 8 ವಿಕೆಟಿಗೆ 149 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತು. ಡೇವಿಡ್‌ ವಾರ್ನರ್‌ (54)-ಮನೀಷ್‌ ಪಾಂಡೆ (38) ಮುನ್ನುಗ್ಗಿ ಬರುತ್ತಿದ್ದಾಗ ಹೈದರಾಬಾದ್‌ ದೊಡ್ಡ ಅಂತರದ ಗೆಲುವು ಸಾಧಿಸುತ್ತದೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಆರ್‌ಸಿಬಿಯ ನಿಖರ ಬೌಲಿಂಗ್‌ ಹಾಗೂ ಅಷ್ಟೇ ಚುರುಕಿನ ಫೀಲ್ಡಿಂಗ್‌ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಅಂತಿಮವಾಗಿ ವಾರ್ನರ್‌ ಪಡೆ 9 ವಿಕೆಟಿಗೆ 143 ರನ್‌ ಗಳಿಸಿ ಸೋಲನ್ನು ಸ್ವೀಕರಿಸಿತು.

ಶಾಬಾಜ್‌ ಅಹ್ಮದ್‌ 7 ರನ್ನಿಗೆ 3 ವಿಕೆಟ್‌ ಉಡಾಯಿಸಿ ಆರ್‌ಸಿಬಿ ಬೌಲಿಂಗ್‌ ಹೀರೋ ಎನಿಸಿದರು. 17ನೇ ಓವರ್‌ ಎಸೆದ ಅವರು ಕೇವಲ 1 ರನ್‌ ನೀಡಿ ಮೂರು ವಿಕೆಟ್‌ ಕಿತ್ತು ಪಂದ್ಯ ತಿರುವು ಪಡೆಯಲು ಕಾರಣರಾದರು. ಈ ಸಾಹಸದಿಂದಾಗಿ ಒಂದು ವಿಕೆಟಿಗೆ 96 ರನ್‌ ಮಾಡಿ ಗೆಲುವಿನ ಹಾದಿಯಲ್ಲಿದ್ದ ಸನ್‌ರೈಸರ್ ನಾಟಕೀಯ ಕುಸಿತಕ್ಕೆ ಸಿಲುಕಿತು. ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ತಲಾ 2 ವಿಕೆಟ್‌ ಕಿತ್ತು ಹೈದರಾಬಾದ್‌ಗೆ ನಿಯಂತ್ರಣ ಹೇರಿದರು.

ಮ್ಯಾಕ್ಸ್‌ವೆಲ್‌ ಅರ್ಧ ಶತಕ
ಆರ್‌ಸಿಬಿ ಪರ ಅಂತಿಮ ಎಸೆತದಲ್ಲಿ ಔಟಾದ ಮ್ಯಾಕ್ಸ್‌ ವೆಲ್‌ 41 ಎಸೆತ ಎದುರಿಸಿ 59 ರನ್‌ ಹೊಡೆದರು. ಇದು 5 ಫೋರ್‌, 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಮೊದಲ ಪಂದ್ಯವನ್ನು ತಪ್ಪಿಕೊಂಡಿದ್ದ ಎಡಗೈ ಓಪನರ್‌ ದೇವದತ್ತ ಪಡಿಕ್ಕಲ್‌ ಆಡುವ ಬಳಗದಲ್ಲಿ ಕಾಣಿಸಿಕೊಂಡದ್ದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತಾದರೂ ಅವರ ಶೀಘ್ರ ನಿರ್ಗಮನ ಅಷ್ಟೇ ನಿರಾಸೆ ಮೂಡಿಸಿತು (11).
ವನ್‌ಡೌನ್‌ನಲ್ಲಿ ಬಂದ ಮತ್ತೋರ್ವ ಎಡಗೈ ಆಟಗಾರ ಶಾಬಾಜ್‌ ಅಹ್ಮದ್‌ ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ನದೀಂ ಎಸೆತವೊಂದನ್ನು ಸಿಕ್ಸರ್‌ಗೆ ಬಡಿದಟ್ಟಿದರೂ ಬಳಿಕ ನದೀಂ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿದರು. ಪವರ್‌ ಪ್ಲೇ ಮುಗಿದ ಬಳಿಕ ಮೊದಲ ಎಸೆತದಲ್ಲೇ ಹೈದರಾಬಾದ್‌ ಈ ಯಶಸ್ಸು ಸಾಧಿಸಿತು. ಪವರ್‌ ಪ್ಲೇಯಲ್ಲಿ ಆರ್‌ಸಿಬಿ ಒಂದು ವಿಕೆಟಿಗೆ 47 ರನ್‌ ಪೇರಿಸಿತ್ತು.

ಮುಂದಿನದು ವಿರಾಟ್‌ ಕೊಹ್ಲಿ-ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿಯ ಆಟ. 10 ಓವರ್‌ ತನಕ ಇವರ ಬ್ಯಾಟಿಂಗ್‌ನಲ್ಲಿ ಯಾವುದೇ ಅಬ್ಬರ ಇರಲಿಲ್ಲ. ಅರ್ಧ ಹಾದಿ ಕ್ರಮಿಸು ವಾಗ 2 ವಿಕೆಟಿಗೆ ಕೇವಲ 63 ರನ್‌ ಒಟ್ಟುಗೂಡಿತ್ತು.

ನದೀಂ ಪಾಲಾದ 11ನೇ ಓವರಿನಲ್ಲಿ ಮ್ಯಾಕ್ಸ್‌ ವೆಲ್‌-ಕೊಹ್ಲಿ ಸಿಡಿದು ನಿಂತು 22 ರನ್‌ ಸೂರೆಗೈದರು. ಮ್ಯಾಕ್ಸಿ ಸತತ ಎಸೆತಗಳಲ್ಲಿ 2 ಸಿಕ್ಸರ್‌, ಒಂದು ಬೌಂಡರಿ ಬಾರಿಸಿದರು. ನಾಯಕ ವಿರಾಟ್‌ ಕೊಹ್ಲಿ 13ನೇ ಓವರ್‌ ತನಕ ನಿಂತು ರನ್‌ಗತಿ ಏರಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ದ್ವಿತೀಯ ಸ್ಪೆಲ್‌ ಬೌಲಿಂಗ್‌ ಆಕ್ರಮಣಕ್ಕಿಳಿದ ಜಾಸನ್‌ ಹೋಲ್ಡರ್‌ ದೊಡ್ಡ ಬೇಟೆಯಾಡಿದರು. ಕೊಹ್ಲಿ ಬ್ಯಾಟಿಗೆ ಟಾಪ್‌ ಎಜ್‌ ಆಗಿ ಚಿಮ್ಮಿದ ಚೆಂಡು ನೇರವಾಗಿ ವಿಜಯ್‌ ಶಂಕರ್‌ ಕೈ ಸೇರಿತು. ಕೊಹ್ಲಿ ಆಕ್ರೋಶದಿಂದಲೇ ಮೈದಾನ ತೊರೆದರು. ಆರ್‌ಸಿಬಿ ಕಪ್ತಾನನ ಗಳಿಕೆ 29 ಎಸೆತಗಳಿಂದ 33 ರನ್‌.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಶಂಕರ್‌ ಬಿ ಹೋಲ್ಡರ್‌ 33
ದೇವದತ್ತ ಪಡಿಕ್ಕಲ್‌ ಸಿ ನದೀಂ ಬಿ ಭುವನೇಶ್ವರ್‌ 11
ಶಾಬಾಜ್‌ ಅಹ್ಮದ್‌ ಸಿ ರಶೀದ್‌ ಬಿ ನದೀಂ 14
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಸಾಹಾ ಬಿ ಹೋಲ್ಡರ್‌ 59
ಎಬಿ ಡಿ ವಿಲಿಯರ್ ಸಿ ವಾರ್ನರ್‌ ಬಿ ರಶೀದ್‌ 1
ವಾಷಿಂಗ್ಟನ್‌ ಸುಂದರ್‌ಸಿ ಪಾಂಡೆ ಬಿ ರಶೀದ್‌ 8
ಡಿ. ಕ್ರಿಸ್ಟಿಯನ್‌ ಸಿ ಸಿ ಸಾಹಾ ಬಿ ನಟರಾಜನ್‌ 1
ಕೈಲ್‌ ಜಾಮೀಸನ್‌ ಸಿ ಪಾಂಡೆ ಬಿ ಹೋಲ್ಡರ್‌ 12
ಹರ್ಷಲ್‌ ಪಟೇಲ್‌ ಔಟಾಗದೆ 0
ಇತರ 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 149
ವಿಕೆಟ್‌ ಪತನ: 1-19, 2-47, 3-91, 4-95, 5-105, 6-109, 7-136, 8-149.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-30-1
ಜಾಸನ್‌ ಹೋಲ್ಡರ್‌ 4-0-30-3
ಶಾಬಾಜ್‌ ನದೀಂ 4-0-36-1
ಟಿ. ನಟರಾಜನ್‌ 4-0-32-1
ರಶೀದ್‌ ಖಾನ್‌ 4-0-18-2

ಸನ್‌ರೈಸರ್ ಹೈದರಾಬಾದ್‌
ವೃದ್ಧಿಮಾನ್‌ ಸಾಹಾ ಸಿ ಮ್ಯಾಕ್ಸ್‌ವೆಲ್‌ ಬಿ ಸಿರಾಜ್‌ 1
ಡೇವಿಡ್‌ ವಾರ್ನರ್‌ ಸಿ ಕ್ರಿಸ್ಟಿಯನ್‌ ಬಿ ಕೈಲ್‌ 54
ಮನೀಷ್‌ ಪಾಂಡೆ ಸಿ ಪಟೇಲ್‌ ಬಿ ಶಾಬಾಜ್‌ 38
ಜಾನಿ ಬೇರ್‌ಸ್ಟೊ ಸಿ ಎಬಿಡಿ ಬಿ ಶಾಬಾಜ್‌ 12
ಅಬ್ದುಲ್‌ ಸಮದ್‌ ಸಿ ಮತ್ತು ಬಿ ಶಾಬಾಜ್‌ 0
ವಿಜಯ್‌ ಶಂಕರ್‌ ಸಿ ಕೊಹ್ಲಿ ಬಿ ಪಟೇಲ್‌ 3
ಜಾಸನ್‌ ಹೋಲ್ಡರ್‌ ಸಿ ಕ್ರಿಸ್ಟಿಯನ್‌ ಬಿ ಸಿರಾಜ್‌ 4
ರಶೀದ್‌ ಖಾನ್‌ ರನೌಟ್‌ 17
ಭುವನೇಶ್ವರ್‌ ಔಟಾಗದೆ 2
ಶಾಬಾಜ್‌ ನದೀಂ ಸಿ ಅಹ್ಮದ್‌ ಬಿ ಪಟೇಲ್‌ 0
ಟಿ. ನಟರಾಜನ್‌ ಔಟಾಗದೆ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 143
ವಿಕೆಟ್‌ ಪತನ: 1-13, 2-96, 3-115, 4-115, 5-116, 6-123, 7-130, 8-142, 9-142.
ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 4-1-25-2
ಕೈಲ್‌ ಜಾಮೀಸನ್‌ 3-0-30-1
ವಾಷಿಂಗ್ಟನ್‌ ಸುಂದರ್‌ 2-0-14-0
ಯಜುವೇಂದ್ರ ಚಹಲ್‌ 4-0-29-0
ಹರ್ಷಲ್‌ ಪಟೇಲ್‌ 4-0-25-2
ಡೇನಿಯಲ್‌ ಕ್ರಿಸ್ಟಿಯನ್‌ 1-0-7-0
ಶಾಬಾಜ್‌ ಅಹ್ಮದ್‌ 2-0-7-3
ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ

ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ

ಐಪಿಎಲ್‌ ಐಡಿಯನ್ನೇ ನಕಲು ಮಾಡಿದ ಇಬ್ಬರ ಸೆರೆ! ದೆಹಲಿಯಲ್ಲಿ ಪಂದ್ಯ ವೀಕ್ಷಿಸಿದ್ದ ಭೂಪರು!

ಐಪಿಎಲ್‌ ಐಡಿಯನ್ನೇ ನಕಲು ಮಾಡಿದ ಇಬ್ಬರ ಸೆರೆ! ದೆಹಲಿಯಲ್ಲಿ ಪಂದ್ಯ ವೀಕ್ಷಿಸಿದ್ದ ಭೂಪರು!

ravindra jadeja

ಅತ್ಯಂತ ಸುರಕ್ಷಿತವೆನಿಸುವ ಸ್ಥಳಕ್ಕೆ ಮರಳಿದ್ದೇನೆ: ರವೀಂದ್ರ ಜಡೇಜಾ

jos buttler gave bat to jaiswal

ಯಶಸ್ವಿ ಜೈಸ್ವಾಲ್ ಗೆ ವಿಶೇಷ ಗಿಫ್ಟ್ ನೀಡಿದ ಜಾಸ್ ಬಟ್ಲರ್

Michael Hussey

ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿಗೂ ಕೋವಿಡ್ ಪಾಸಿಟಿವ್

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

7-15

ಕೊರೊನಾ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.