ಮಾರ್ಚ್ 31 ರ ತನಕ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿಯಿಲ್ಲ : ಡಿಜಿಸಿಎ
ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಆಲ್ ಕಾರ್ಗೋ ಆಪರೇಷನ್ ಹಾಗೂ ಡಿಜಿಸಿಎ ಅನುಮತಿಸಿದ ವಿಶೇಷ ವಿಮಾನಗಳ ಹಾರಾಟಕ್ಕೆ ಅನ್ವಯಿಸುವುದಿಲ್ಲ
Team Udayavani, Feb 27, 2021, 12:53 PM IST
ನವ ದೆಹಲಿ : ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ಮೇಲಿನ ನಿರ್ಬಮಧವನ್ನು ಮಾರ್ಚ್ 31 ರ ತನಕ ವಿಸ್ತರಿಸಲಾಗಿದೆ ಎಂದು ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಹೇಳಿದೆ.
ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಆಲ್ ಕಾರ್ಗೋ ಆಪರೇಷನ್ ಹಾಗೂ ಡಿಜಿಸಿಎ ಅನುಮತಿಸಿದ ವಿಶೇಷ ವಿಮಾನಗಳ ಹಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ಸಹ ತಿಳಿಸಿದೆ.
ಓದಿ : ಜಾಗತಿಕ ಮಟ್ಟದಲ್ಲಿ ತನ್ನ ವ್ಯಾವಹಾರಿಕ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ ಟಿಕ್ ಟಾಕ್.!
ಆದಾಗ್ಯೂ, ನಿಗದಿತ ವಿಮಾನಗಳನ್ನು ಆಯ್ದ ಮಾರ್ಗಳಲ್ಲಿ ಕೇಸ್ ಟು ಕೇಸ್ ಆಧಾರದ ಮೇಲೆ ಹಾರಾಟಕ್ಕೆ ಅನುಮತಿಸಬಹುದು ಎಂದು ತಿಳಿಸಿದೆ.
— DGCA (@DGCAIndia) February 26, 2021
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೋವಿಡ್ ನಿರ್ವಹಣೆಯ ಕಾರಣಕ್ಕಾಗಿ ನಿರ್ಬಂಧವನ್ನು ಹೇರಲಾಗಿತ್ತು. ಸರ್ಕಾರ, ಈಗ ಆರ್ಥಿಕ ಕ್ಷೇತ್ರಗಳನ್ನು ಕಾರ್ಯಾರಂಭಿಸಲು ಅನುಮತಿಸಿದೆಯಾದರೂ, ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟಕ್ಕೆ ಇನ್ನೂ ಅನುಮತಿಸಿಲ್ಲ.
ದೇಶಿಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಕಳೆದ ವರ್ಷವೇ ಅನುಮತಿಯನ್ನು ನೀಡಿತ್ತು, ಆದರೇ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ.
ಇನ್ನು, ಕಳೆದ ಡಿಸೆಂಬರ್ ನಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಕೋವಿಡ್ ಸೋಂಕು ಹೆಚ್ಚಾದ ಕಾರಣ, ಅಲ್ಲಿಂದ ಭಾರತಕ್ಕೆ ಹಾಗೂ ಭಾರತದಿಂದ ಯುಕೆ ಗೆ ಹಾರಾಟ ನಡೆಸುತ್ತಿದ್ದ ವಿಮಾನಗಳಿಗೆ ನಿಷೇಧ ಹೇರಿತ್ತಾದರೂ, ಕೆಲವು ದಿನಗಳ ನಂತರ ನಿಷೇಧವನ್ನು ಹಿಂಪಡೆದಿತ್ತು.
ಓದಿ : ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್