16ನೇ IPL ನೊಳಗೊಂದು ಸುತ್ತು

ಇಲ್ಲಿದೆ 2023ರ ಐಪಿಎಲ್‌ನ ಸಂಕ್ಷಿಪ್ತ ಚಿತ್ರಣ

Team Udayavani, May 31, 2023, 7:23 AM IST

ipl 2023

2023ರ ಐಪಿಎಲ್‌ ಹಲವು ಕಾರಣಗಳಿಗೆ ಮುಖ್ಯವೆನಿಸುತ್ತದೆ. 2022ರಲ್ಲಿ ಬಹಳ ಕಾಲದ ಅನಂತರ 10 ತಂಡಗಳು ಕಣಕ್ಕಿಳಿದಿದ್ದವು. ಅದು 2023ರಲ್ಲೂ ಮುಂದುವರಿದಿದೆ. ವಿಶೇಷವೆಂದರೆ ಕಳೆದ ಬಾರಿ ಫೈನಲ್‌ಗೇರಿದ್ದ ನೂತನ ತಂಡ ಗುಜರಾತ್‌ ಟೈಟಾನ್ಸ್‌ ಈ ಬಾರಿಯೂ ಫೈನಲ್‌ಗೇರಿತ್ತು. ಆ ಮೂಲಕ ಹಿಂದಿನ ವರ್ಷದ ಸಾಧನೆ ಅದೃಷ್ಟದ ಆಧಾರದ ಮೇಲೆ ನಡೆದಿದ್ದಲ್ಲ ಎಂದು ಸಾಬೀತು ಮಾಡಿತು. ಈ ಹಿನ್ನೆಲೆಗಳನ್ನಿಟ್ಟುಕೊಂಡು 2023ರ ಐಪಿಎಲ್‌ನ ಒಂದು ಸಂಕ್ಷಿಪ್ತ ಚಿತ್ರಣವನ್ನು ಇಲ್ಲಿ ನೀಡಲಾಗಿದೆ.

ಆರ್‌ಸಿಬಿಗೆ “ಈ ಸಲವೂ ಕಪ್‌ ನಮ್ದಲ್ಲ”
ಇದುವರೆಗೆ ಮೂರು ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫೈನಲ್‌ಗೇರಿದೆ ಯಾದರೂ ಒಮ್ಮೆಯೂ ಗೆದ್ದಿಲ್ಲ. ಈ ಬಾರಿ ಆರ್‌ಸಿಬಿಯ ಆರಂಭಿಕ ಪಂದ್ಯದ ಯಶಸ್ಸನ್ನು ನೋಡಿದಾಗ ಅಭಿಮಾನಿಗಳಿಗೆ ಆಶೆ ಚಿಗುರಿತ್ತು. ಅದಾದ ಮೇಲೆ ಒಂದು ಪಂದ್ಯ ಸೋತರೆ, ಇನ್ನೊಂದು ಪಂದ್ಯ ಗೆಲ್ಲುವ ಮಾದರಿಯಲ್ಲೇ ಆಡಿತು. ಅಂತಿಮವಾಗಿ 14 ಪಂದ್ಯಗಳಲ್ಲಿ 7 ಗೆದ್ದರೆ, 7 ಸೋತಿತು. ಕನಿಷ್ಠ 4ನೇ ಸ್ಥಾನ ಪಡೆಯಲು ಆಗಲಿಲ್ಲ. 6ನೇ ಸ್ಥಾನ ಪಡೆದು ಪ್ಲೇಆಫ್ಗೇರುವ ಅವಕಾಶ ಕಳೆದುಕೊಂಡಿತು. ಈ ಸಲ ಕಪ್‌ ನಮೆªà ಎಂಬ ಮಾತು ಅಕ್ಷರಶಃ ಅರ್ಥ ಕಳೆದುಕೊಂಡಿದೆ.

ಮರಳಿ ಮಿಂಚಿದ ಕೊಹ್ಲಿ
ಆರ್‌ಸಿಬಿ ಪಾಲಿನ ಒಂದೇ ಒಂದು ಸಮಾಧಾನಕರ ಸಂಗತಿಯೆಂದರೆ ವಿರಾಟ್‌ ಕೊಹ್ಲಿ ಭರ್ಜರಿಯಾಗಿ ಆಡಿದ್ದು. ಇಡೀ ಕೂಟ ಪೂರ್ಣ ಕೊಹ್ಲಿ ಮತ್ತು ನಾಯಕ ಫಾ ಡು ಪ್ಲೆಸಿಸ್‌ ತಂಡದ ಬೆಂಬಲಕ್ಕೆ ನಿಂತರು. ತಂಡಕ್ಕೆ ಹೊರೆಯೆನಿಸಿದ್ದು ಪ್ರಬಲ ಬೌಲಿಂಗ್‌ ವಿಭಾಗದ ಕೊರತೆ. ಅದಿರಲಿ ಮತ್ತೆ ಕೊಹ್ಲಿ ವಿಚಾರಕ್ಕೆ ಬರುವುದಾದರೆ… ಅದ್ಭುತ ಬ್ಯಾಟಿಂಗ್‌ ಮಾಡಿದ ಅವರು 2 ಶತಕ, 6 ಅರ್ಧಶತಕಗಳ ಮೂಲಕ ಒಟ್ಟು 639 ರನ್‌ ಬಾರಿಸಿದರು. ಈ ಮೂಲಕ ಅಗ್ರಸಾಧಕರ ಪೈಕಿ ಒಬ್ಬರೆನಿಸಿದರು. ನಾಯಕ ಡು ಪ್ಲೆಸಿಸ್‌ ಶತಕ ಬಾರಿಸದಿ ದ್ದರೂ 8 ಅರ್ಧಶತಕಗಳೊಂದಿಗೆ 730 ರನ್‌ ಗಳಿಸಿದರು.

ಶುಭಮನ್‌ ಗಿಲ್‌ ಎಂಬ ತಾರೆ
ಕಳೆದ ವರ್ಷ, ಈ ವರ್ಷಾರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರ್ಜರಿ ಯಾಗಿ ಮಿಂಚಿದ 23 ವರ್ಷದ ಶುಭ ಮನ್‌ ಗಿಲ್‌, ಈ ಬಾರಿಯ ಐಪಿಎಲ್‌ ಆರಂಭದಲ್ಲಿ ಸ್ವಲ್ಪ ಮಂಕಾಗಿದ್ದರು. ಪಂದ್ಯಗಳು ಮುಗಿದಂತೆ ಸಿಡಿಯಲು ಆರಂಭಿಸಿದ ಅವರು ಫೈನಲ್‌ ಸಹಿತ ಗುಜರಾತ್‌ ಟೈಟಾನ್ಸ್‌ ಪರ ಒಟ್ಟು 17 ಪಂದ್ಯಗಳನ್ನಾಡಿ 890 ರನ್‌ ಗಳಿಸಿದ್ದರು. ಅದರಲ್ಲಿ 3 ಶತಕ, 4 ಅರ್ಧಶತಕಗಳು ಸೇರಿದ್ದವು. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಅನಂತರ ಭಾರತದ ಪಾಲಿಗೆ ಯಾರು ಎಂಬ ಪ್ರಶ್ನೆಗೆ ಶುಭಮನ್‌ ಗಿಲ್‌ ತಮ್ಮ ಸಾಧನೆಗಳ ಮೂಲಕ ಉತ್ತರವಾಗಿದ್ದಾರೆ.

ಕೈಕೈ ಹಿಡಿದು ನಡೆದ ಹಾರ್ದಿಕ್‌-ಗುಜರಾತ್‌ ಟೈಟಾನ್ಸ್‌
2022ರ ಆವೃತ್ತಿಯವರೆಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಹಾರ್ದಿಕ್‌ ಪಾಂಡ್ಯ, ಗುಜರಾತ್‌ ಟೈಟಾನ್ಸ್‌ಗೆ ನಾಯಕರಾಗಿ ಆಯ್ಕೆಯಾದರು. ಅದೇನು ಪವಾಡವೋ… ಕಣಕ್ಕಿಳಿದ ಮೊದಲನೆಯ ಕೂಟದಲ್ಲೇ ಗುಜರಾತ್‌ ಪ್ರಶಸ್ತಿ ಜಯಿಸಿತು. ಈ ಸಾಧನೆಯ ಆಧಾರದ ಮೇಲೆ ಹಾರ್ದಿಕ್‌ ಭಾರತ ಟಿ20 ತಂಡದ ನಾಯಕರೂ ಆದರು. ಈಗವರು ಭವಿಷ್ಯದ ನಾಯಕನೆಂಬ ಹೆಸರು ಹೊಂದಿದ್ದಾರೆ. ವಿಶೇಷವೆಂದರೆ ಹಾರ್ದಿಕ್‌ ಪಾಂಡ್ಯ ಈ ಬಾರಿಯೂ ಗುಜರಾತ್‌ ಟೈಟಾನ್ಸ್‌ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಅಲ್ಲಿಗೆ ಕಳೆದ ವರ್ಷದ ತಂಡದ ಸಾಧನೆ ಅದೃಷ್ಟದ ಆಧಾರದಲ್ಲಿ ಬಂದಿದ್ದಲ್ಲ ಎಂಬುದನ್ನು ನಿರೂಪಿಸಿದರು. ತಮ್ಮ ನಾಯಕತ್ವದ ಶಕ್ತಿಯನ್ನೂ ತೆರೆದಿಟ್ಟರು.

ಮುಂಬೈಗೆ ಬುಮ್ರಾ ಗೈರಿನ ಕೊರಗು
2022ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಕಳಪೆ ಪ್ರದರ್ಶನ ತೋರಿತ್ತು. ಈ ಬಾರಿಯ ಆರಂಭದಲ್ಲಿ ಎಂದಿನಂತೆ ಕಳಪೆಯಾಟವನ್ನೇ ಆಡಿತು. ಅದರ ಎಂದಿನ ಶೈಲಿಯಂತೆ ನಿಧಾನವಾಗಿ ಸುಧಾರಿಸಿಕೊಳ್ಳುತ್ತ ಸಾಗಿದ ಅದು ಅಂತೂ ನಿರ್ಗಮನ ಸುತ್ತಿಗೇರಿ, ಅಲ್ಲಿ ಗೆದ್ದು 2ನೇ ಅರ್ಹತಾ ಪಂದ್ಯದಲ್ಲಿ ಸ್ಥಾನ ಪಡೆಯಿತು. ಅಲ್ಲಿ ಸೋಲುವ ಮೂಲಕ ಫೈನಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿತು. ಇಡೀ ಕೂಟದಲ್ಲಿ ಮುಂಬೈ ಕಾಡಿದ್ದು ಖ್ಯಾತ ವೇಗಿ ಜಸಿøàತ್‌ ಬುಮ್ರಾ ಅವರ ಗೈರು. ಪ್ರತೀ ಬಾರಿ ಅವರು ತಂಡದ ಬೌಲಿಂಗ್‌ ವಿಭಾಗದ ಬೆನ್ನೆಲುಬಾಗಿದ್ದರು. ಈ ಬಾರಿ ಪೂರ್ಣವಾಗಿ ಗೈರಾಗಿದ್ದರು.

ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌
ಈ ಬಾರಿಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆರಂಭ ಅಷ್ಟೇನೂ ಉತ್ತ ಮವಾಗಿರ ಲಿಲ್ಲ. ಗುಜ ರಾತ್‌ ಟೈಟಾನ್ಸ್‌ ವಿರು ದ್ಧವೇ ಮೊದಲ ಮ್ಯಾಚ್‌ ನಲ್ಲಿ 5 ವಿಕೆ ಟ್‌ ಗಳ ಅಂತ ರ ದಿಂದ ಧೋನಿ ಪಡೆ ಸೋತಿತ್ತು. ಬಳಿಕ ಸೋಲು- ಗೆಲು ವಿನ ಮಿಶ್ರ ಣ ದೊಂದಿಗೆ ಆಟ ಸಾಗು ತ್ತಿತ್ತು. ಒಟ್ಟು 14 ಪಂದ್ಯ ಗ ಳಲ್ಲಿ 8ರಲ್ಲಿ ಗೆಲುವು ಸಾಧಿ ಸಿದ ಚೆನ್ನೈ 2ನೇ ತಂಡ ವಾಗಿ ಪ್ಲೇ ಆಫ್ ಪ್ರವೇಶಿ ಸಿತ್ತು. ಒಂದು ಪಂದ್ಯ ದಲ್ಲಿ ಯಾವುದೇ ರಿಸಲ್ಟ್ ಬಂದಿರ ಲಿಲ್ಲ. ಹೀಗಾಗಿ 17 ಅಂಕ ಗಳು ಬಂದಿ ದ್ದವು. ಈ ಬಾರಿ ಚೆನ್ನೈ ಪರ ಬ್ಯಾಟಿಂಗ್‌ ನಲ್ಲಿ ಹೆಚ್ಚು ಮಿಂಚಿ ದ ವರು ನ್ಯೂಜಿ ಲೆಂಡ್‌ನ‌ ವಿಕೆಟ್‌ ಕೀಪರ್‌ ಕಾನ್ವೆ. ಇವರು 672 ರನ್‌ ಬಾರಿ ಸಿ ದರು. ರುತು ರಾಜ್‌ ಗಾಯ ಕ್ವಾಡ್‌ 590, ಶಿವಂ ದುಬೆ 418, ರಹಾನೆ 326 ರನ್‌ ಗಳಿ ಸಿ ಮಿಂಚಿ ದರು. ಬೌಲಿಂಗ್‌ ನಲ್ಲಿ ತುಷಾರ್‌ ದೇಶ ಪಾಂಡೆ 21, ರವೀಂದ್ರ ಜಡೇಜ 20, ಮತೀಶಾ ಪಥಿ ರಣ 19, ದೀಪಕ್‌ ಚಹರ್‌ 13 ವಿಕೆಟ್‌ ಗಳಿ ಸಿ ದರು.

ಧೋನಿಗೆ ನಿವೃತ್ತಿಯ ಕೂಟವೇ?
ಉದ್ಘಾಟನ ಐಪಿಎಲ್‌ನಲ್ಲಿ ಆಡಿದ ಎಂ.ಎಸ್‌.ಧೋನಿ 16ನೇ ಕೂಟದ ಫೈನಲ್‌ನಲ್ಲೂ ಆಡಿದ್ದಾರೆ. ಅಲ್ಲಿಗೆ ಇಂತಹದ್ದೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಧೋನಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಇಲ್ಲಿ ಎಷ್ಟು ಬಾರಿ ಟ್ರೋಫಿ ಗೆದ್ದಿದ್ದಾರೆ ಎನ್ನುವುದು ಮಾತ್ರ ಮುಖ್ಯವಲ್ಲ, ಎಷ್ಟು ಬಾರಿ ಫ್ಲೇಆಫ್ಗೇರಿಸಿದ್ದಾರೆ, ಎಷ್ಟು ಬಾರಿ ಫೈನಲ್‌ವರೆಗೆ ಒಯ್ದಿದ್ದಾರೆ ಎನ್ನುವುದನ್ನೂ ಪರಿಗಣಿಸಿದರೆ ಧೋನಿ ಅದ್ಭುತ ನಾಯಕನೆಂದು ಧೈರ್ಯವಾಗಿ ಹೇಳಬಹುದು. ಅವರಿಗೆ ಪ್ರಸ್ತುತ 41 ವರ್ಷ. ಇದೇ ಅವರ ಅಂತಿಮ ಕೂಟವೆಂದು ಊಹಿಸಲಾಗಿದೆ. ಆದರೆ ಆ ಬಗ್ಗೆ ಅಂತಿಮ ನಿರ್ಧಾರವನ್ನು ಧೋನಿಯೇ ಘೋಷಿಸಬೇಕು.

 

ಟಾಪ್ ನ್ಯೂಸ್

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Kadaba ಜೈ ಶ್ರೀರಾಮ್‌ ಘೋಷಣೆ: ಇಬ್ಬರ ಬಂಧನ

Kadaba ಜೈ ಶ್ರೀರಾಮ್‌ ಘೋಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

environment

Environment: ನಮ್ಮ ಪರಿಸರ ನಮ್ಮ ಭವಿಷ್ಯ : ಮೆಚ್ಚುಗೆ ಗಳಿಸಿದ ಲೇಖನಗಳು

modi deen dayal upadhyaya

Jana Sangh: ದೀನದಯಾಳ್‌ ಕನಸಿಗೆ ಮೋದಿಯ ಸ್ಪರ್ಶಮಣಿ

XEDERMA PIGMENDOMOUS

Health: ಜೆರೋಡರ್ಮಾ ಪಿಗ್ಮೆಂಟೋಸಂ ಎಂಬ ಮಾರಣಾಂತಿಕ ಚರ್ಮ ರೋಗ

modi with women

Reservation: ಮಹಿಳಾ ಮೀಸಲಾತಿ, ಚುನಾವಣೆ ಮೇಲೆ ಪ್ರಭಾವ?

RIVER

Article: ನದಿಯ ಹಂಗು ಬದುಕಿಗಿರಲಿ ಸದಾ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.