Udayavni Special

ಕನ್ನಡ ಹುಡುಗಿಯ ಪರಭಾಷಾ ಪಯಣ : ತೆಲುಗಿನತ್ತ ಶ್ರೀಲೀಲಾ


Team Udayavani, Jan 13, 2021, 10:45 AM IST

shree

“ಕಿಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಪರಿಚಯವಾದ ನಟಿ ಶ್ರೀಲೀಲಾ, ನಂತರ “ಭರಾಟೆ’ ಮೂಲಕ
ಸಿನಿಪ್ರಿಯರಿಗೆ ಹತ್ತಿರವಾದ ಹುಡುಗಿ. ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಅಭಿನಯದ “ದುಬಾರಿ’ ಚಿತ್ರದಲ್ಲಿ ಮತ್ತು ಧನ್ವೀರ್‌ ಗೌಡ ಅಭಿನಯದ “ಬೈಟು ಲವ್‌’ ಚಿತ್ರಗಳಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಹಿಂದೆಯೇ ಶ್ರೀಲೀಲಾ ಸದ್ದಿಲ್ಲದೆ ತೆಲುಗಿನತ್ತ ಮುಖ ಮಾಡಿದ್ದಾರೆ.

ಹೌದು, ಶ್ರೀಲೀಲಾ ತೆಲುಗಿನ “ಪೆಲ್ಲಿಸಂದಡಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗು ನಟ ಶ್ರೀಕಾಂತ್‌ ಪುತ್ರ ರೋಶನ್‌ ಶ್ರೀಕಾಂತ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಪೆಲ್ಲಿ ಸಂದಡಿ’ ಚಿತ್ರದಲ್ಲಿ ಶ್ರೀಲೀಲಾ ಹೀರೋಯಿನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ತೆಲುಗು ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿಯಾಗುತ್ತಿರುವುದರ ಬಗ್ಗೆ ಮಾತನಾಡುವ ಶ್ರೀಲೀಲಾ, “ತೆಲುಗಿನಲ್ಲಿ ಈ ಹಿಂದೆ ಕೂಡ ಒಂದಷ್ಟು ಸಿನಿಮಾಗಳ ಆಫ‌ರ್ ಬಂದಿದ್ದರೂ, ಸಬೆjಕ್ಟ್ ಇಷ್ಟವಾಗದ ಕಾರಣ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿರಲಿಲ್ಲ. “ಪೆಲ್ಲಿ ಸಂದಡಿ’ ಸಿನಿಮಾದ ಸಬ್ಜೆಕ್ಟ್ ಮತ್ತು ಕ್ಯಾರೆಕ್ಟರ್‌ ಎರಡೂ ಇಷ್ಟವಾಗಿದ್ದರಿಂದ, ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಈಗಾಗಲೇ ಈ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಶೂಟಿಂಗ್‌ ಕೂಡ ಆರಂಭವಾಗಲಿದೆ’ ಎಂದಿದ್ದಾರೆ.

ಇನ್ನು ಸುಮಾರು ಎರಡೂವರೆ ದಶಕದ ಹಿಂದೆಯೇ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್‌ ನಿರ್ದೇಶನದಲ್ಲಿ “ಪೆಲ್ಲಿ
ಸಂದಡಿ’ ಎಂಬ ಹೆಸರಿನ ಚಿತ್ರ ತೆಲುಗಿನಲ್ಲಿ ತೆರೆಕಂಡಿತ್ತು. ಶ್ರೀಕಾಂತ್‌ ಇದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ಮತ್ತೇ ಅದೇ ಹೆಸರಿನಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಶ್ರೀಕಾಂತ್‌ ಪುತ್ರ ರೋಶನ್‌ ನಾಯಕನಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಅಂದಹಾಗೆ, ಚಿತ್ರದ ಟೈಟಲ್‌ “ಪೆಲ್ಲಿ ಸಂದಡಿ’ ಅಂತಿದ್ದರೂ, ಇದು ರಿಮೇಕ್‌ ಚಿತ್ರ ಅಲ್ಲವಂತೆ. “ಆಗ ಬಂದ “ಪೆಲ್ಲಿ ಸಂದಡಿ’ ಸಿನಿಮಾಕ್ಕೂ ಈಗ
ಬರುತ್ತಿರುವ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇದು ರಿಮೇಕ್‌ ಸಿನಿಮಾವಲ್ಲ. ಎರಡೂ ಸಿನಿಮಾಗಳ ಟೈಟಲ್‌ ಒಂದೇ
ಅನ್ನೋದು ಬಿಟ್ಟರೆ, ಉಳಿದೆಲ್ಲವೂ ಸಂಪೂರ್ಣ ಭಿನ್ನವಾಗಿರುತ್ತದೆ.

ಇದು ಕಂಪ್ಲೀಟ್‌ ಇಂದಿನ ಜನರೇಶನ್‌ ಸಬೆjಕ್ಟ್ ಸಿನಿಮಾ. ಆಡಿಯನ್ಸ್‌ಗೆ ಇಷ್ಟವಾಗುವಂಥ ಎಲ್ಲ ಎಂಟರ್‌ಟೈನ್ಮೆಂಟ್ಸ್‌ ಇದರಲ್ಲಿದೆ’ ಅನ್ನೋದು ಶ್ರೀಲೀಲಾ ಮಾತು. “ನನಗೂ ಇದು ಮೊದಲ ತೆಲುಗು ಸಿನಿಮಾವಾಗಿದ್ದರಿಂದ, ಒಂದಷ್ಟು ನಿರೀಕ್ಷೆ, ಕುತೂಹಲ ಎರಡೂ ಇದೆ. ಈಗಾಗಲೇ “ಪೆಲ್ಲಿ ಸಂದಡಿ’ ಸಿನಿಮಾದ ಶೂಟಿಂಗ್‌ ಶುರುವಾಗಿದ್ದು, ಸಿನಿಮಾದ ಕ್ಯಾರೆಕ್ಟರ್‌ಗಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇದೇ ವರ್ಷದ ಮಧ್ಯ ಭಾಗದಲ್ಲಿ ಈ ಸಿನಿಮಾ ಸ್ಕ್ರೀನ್‌ಗೆ ಬರುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದ್ದಾರೆ ಶ್ರೀಲೀಲಾ.

ನಿರ್ದೇಶಕ ಗೌರಿ ರೊನಾಂಕಿ ಈ “ಪೆಲ್ಲಿ ಸಂದಡಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ತೆಲುಗಿನ ಖ್ಯಾತ ನಿರ್ದೇಶಕ ಕೆ.
ರಾಘವೇಂದ್ರ ರಾವ್‌ ಈ ಚಿತ್ರದ ನಿರ್ದೇಶನ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ವರ್ಷವೇ ಚಿತ್ರತಂಡ ಈ ಚಿತ್ರದ ಟೈಟಲ್‌ ಅನೌನ್ಸ್‌ ಮಾಡಿತ್ತು. ಆದರೆ ಆನಂತರ ಬಂದ ಕೋವಿಡ್‌ ಲಾಕ್‌ ಡೌನ್‌ನಿಂದಾಗಿ ಚಿತ್ರದ ಕೆಲಸಗಳಿಗೆ ಬ್ರೇಕ್‌ ಬಿದ್ದಿತ್ತು. ಇದೀಗ ಮತ್ತೆ “ಪೆಲ್ಲಿ ಸಂದಡಿ’ ಚಿತ್ರದ ಕೆಲಸಗಳು ರೀ-ಸ್ಟಾರ್ಟ್‌ ಆಗಿದ್ದು, ಚಿತ್ರದ ಹೀರೋಯಿನ್‌ ಆಗಿ ಚಿತ್ರತಂಡಕ್ಕೆ ಶ್ರೀಲೀಲಾ ಎಂಟ್ರಿಯಾಗಿದ್ದಾರೆ. ಇದರ ನಡುವೆ ಕನ್ನಡದಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿರುವ ಎರಡೂ ಚಿತ್ರಗಳು ಈಗಾಗಲೇ
ಸೆಟ್ಟೇರಿದ್ದು, ಈ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಒಟ್ಟಾರೆ ಈ ವರ್ಷಾಂತ್ಯದೊಳಗೆ ತಾನು ಅಭಿನಯದ ಈ ಎಲ್ಲಚಿತ್ರಗಳೂ ಪ್ರೇಕ್ಷಕರ ಮುಂದೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಶ್ರೀಲೀಲಾ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Untitled-1

ಥಾಯ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಸೋಲು

Untitled-1

ಜೋ ಬೈಡನ್ ನನಗೆ ಹಿಂದಿನಿಂದಲೂ ಪರಿಚಯ : ಅಶೋಕ ಖೇಣಿ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೆಂಟಗನ್‌ ಪೋಸ್ಟರ್‌ ಬಂತು 5+5=1

ಪೆಂಟಗನ್‌ ಪೋಸ್ಟರ್‌ ಬಂತು 5+5=1

ಅಕ್ಷಿತ್ ‌ಪ್ರೇಮ ಪುರಾಣ

ಅಕ್ಷಿತ್ ‌ಪ್ರೇಮ ಪುರಾಣ

‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!

‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!

ವಿನೋದ್‌ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್‌ ಹೀರೋನ ಫ್ಯಾಮಿಲಿ ಎಂಟರ್‌ಟೈನರ್‌

ವಿನೋದ್‌ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್‌ ಹೀರೋನ ಫ್ಯಾಮಿಲಿ ಎಂಟರ್‌ಟೈನರ್‌

ಶ್ರೀ ಜಗನ್ನಾಥದಾಸರ ಜೀವನಚರಿತ್ರೆಗೆ ಮುಹೂರ್ತ

ಶ್ರೀ ಜಗನ್ನಾಥದಾಸರ ಜೀವನಚರಿತ್ರೆಗೆ ಮುಹೂರ್ತ

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

ನೂರಾರು ಕುಶಲ ಕರ್ಮಿಗಳಿಗೆ ವರದಾನ

ನೂರಾರು ಕುಶಲ ಕರ್ಮಿಗಳಿಗೆ ವರದಾನ

Untitled-1

ಕಟ್ಟಡ ನಿರ್ಮಾಣವಾದರೂ ಮೂಲಸೌಕರ್ಯ ಕೊರತೆ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಕಲೆಕ್ಟರ್ ಗೇಟ್‌ ಜಂಕ್ಷನ್‌: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?

ಕಲೆಕ್ಟರ್ ಗೇಟ್‌ ಜಂಕ್ಷನ್‌: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.