
ಶ್ರೀಗಂಧ ಮರ ಕಟಾವು ಮತ್ತು ಸಾಗಾಣಿಕೆ ನೀತಿ ಸರಳೀಕಣಕ್ಕೆ ಅರಣ್ಯ ಇಲಾಖೆ ಚಿಂತನೆ
ಬೆಂಗಳೂರಿನ ಅರಣ್ಯ ಭವನದಲ್ಲಿ ಜ.20ರಂದು ಮಹತ್ವದ ಸಭೆ
Team Udayavani, Jan 18, 2022, 11:18 AM IST

ಬೆಂಗಳೂರು: ರಾಜ್ಯ ಸರಕಾರದ ಚಾಲ್ತಿಯಲ್ಲಿರುವ ಶ್ರೀಗಂಧ ನೀತಿ ಹಾಗೂ ಮರಗಳ ಕಟಾವು ಹಾಗೂ ಸಾಗಣಿಕೆ ಮಾರ್ಗಸೂಚಿ ಬದಲಾವಣೆಗೆ ಅರಣ್ಯ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಬೆಂಗಳೂರಿನ ಅರಣ್ಯ ಭವನದಲ್ಲಿ ಜ.20ರಂದು ಮಹತ್ವದ ಸಭೆ ನಡೆಯಲಿದ್ದು, ಅರಣ್ಯ ಸಚಿವರೂ ಸೇರಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಈಗ ಶ್ರೀಗಂಧವನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಪರಿಗಣಿಸಲಾಗಿದೆ. ಉತ್ತರ ಕರ್ನಾಟಕವೂ ಸೇರಿದಂತೆ ಹಲವು ಭಾಗಗಳಲ್ಲಿ ಶ್ರೀಗಂಧದ ಕೃಷಿ ಆರಂಭಿಸಲಾಗಿದೆ. ಆದರೆ ಅರಣ್ಯ ಇಲಾಖೆಯ ಹಾಲಿ ನಿಯಮಾವಳಿಗಳು ಶ್ರೀಗಂಧ ಕಟಾವು ಹಾಗೂ ಸಾಗಣ ಸಂದರ್ಭದಲ್ಲಿ ರೈತರಿಗೆ ಅನನುಕೂಲ ಕಲ್ಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ನೀತಿಯಲ್ಲಿ ಬದಲಾವಣೆ ತರವಂತೆ ಬೇಡಿಕೆ ವ್ಯಕ್ತವಾಗಿದೆ.
ಅದೇ ರೀತಿ ಪಟ್ಟಾ ಭೂಮಿಯಲ್ಲಿ ರೈತರು ಬೆಳೆದ ಇನ್ನಿತರ ಜಾತಿಯ ಮರಗಳ ಕಟಾವು ಹಾಗೂ ಸಾಗಣೆಗೆ ಸಂಬAಧಪಟ್ಟAತೆಯೂ ಅತಿ ಎನ್ನಿಸುವಂಥ ನಿಯಮಗಳು ಜಾರಿಯಲ್ಲಿವೆ. ಇದೆಲ್ಲದರ ಬಗ್ಗೆ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ನಿಯಮಗಳನ್ನು ಸರಳಿಕರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಆದರೆ ಮೊದಲ ಸಭೆಯಲ್ಲೇ ನಿಯಮ ಸಡಿಲಿಕೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ನಿರಂತರ ಚರ್ಚೆಯ ಬಳಿಕ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯ ಬಿದ್ದರೆ ಆ ದಿಶೆಯಲ್ಲೂ ಪ್ರಯತ್ನ ನಡೆಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಬದಲಾದ ಕಾಲಘಟ್ಟಕ್ಕೆ ತಮ್ಮನ್ನು ತೆರೆದುಕೊಳ್ಳುವ ಹಾದಿಯಲ್ಲಿ ಅರಣ್ಯ ಇಲಾಖೆ ಈಗ ಮೊದಲ ಹೆಜ್ಜೆ ಇಟ್ಟಂತಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Chennai flood: ಜನಸಾಮಾನ್ಯರ ಜೊತೆ ಪ್ರವಾಹದಲ್ಲಿ ಸಿಲುಕಿದ ನಟ ಅಮೀರ್ ಖಾನ್, ವಿಷ್ಣು ವಿಶಾಲ್

Kadaba: ಕೊಣಾಜೆ ಆನೆ ದಾಳಿ ಶಂಕೆ; ದನ ಸಾವು

Elephants: 60 ವರ್ಷ ಮೀರಿದ ಆನೆಗಳನ್ನು ಕಾರ್ಯಾಚರಣೆಗೆ ಬಳಸಬೇಡಿ

Chhattisgarh: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ತಂದೆಯ ಶವ ಬಾವಿಯಲ್ಲಿ ಪತ್ತೆ

Rajasthan Bandh: ದುಷ್ಕರ್ಮಿಗಳಿಂದ ಕರ್ಣಿ ಸೇನೆಯ ಮುಖ್ಯಸ್ಥನ ಹತ್ಯೆ. ಇಂದು ರಾಜಸ್ಥಾನ ಬಂದ್