ಬೆಳ್ಳಂಬೆಳಗ್ಗೆ ಪಿಎಫ್ಐ- ಎಸ್ ಡಿಪಿಐ ವಿರುದ್ಧ ಎನ್ಐಎ ಸಮರ: ರಾಜ್ಯದಲ್ಲಿ 75 ಮಂದಿ ವಶಕ್ಕೆ


Team Udayavani, Sep 27, 2022, 9:38 AM IST

ಬೆಳ್ಳಂಬೆಳಗ್ಗೆ ಪಿಎಫ್ಐ ವಿರುದ್ಧ ಎನ್ಐಎ ಸಮರ: ರಾಜ್ಯದಲ್ಲಿ 60ಕ್ಕೂ ಹೆಚ್ಚು ಮಂದಿ ವಶಕ್ಕೆ

ಬೆಂಗಳೂರು: ವಾರದ ಹಿಂದಷ್ಟೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ನಾಯಕರ ಮೇಳೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಇತರ ತನಿಖಾ ಸಂಸ್ಥೆಗಳು ಇಂದು ಮತ್ತೊಂದು ಸುತ್ತಿನ ದಾಳಿ ನಡೆಸಿದೆ.

ಕರ್ನಾಟಕ ಸೇರಿ ಎಂಟು ವಿವಿಧ ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ದಾಳಿ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ ಪಿಎಫ್ ಐ ಮತ್ತು ಎಸ್ ಡಿಪಿಐನ 75 ಜನರನ್ನು ವಶಕ್ಕೆ ಪಡೆಯಲಾಗಿದೆ.

ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ ಐ ಮುಖಂಡರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿಗಳು ಲಭಿಸಿವೆ. ಎನ್‌ ಐಎ ನೀಡಿದ ಸುಳಿವುಗಳ ಆಧಾರದ ಮೇಲೆ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಎಂಟು ರಾಜ್ಯಗಳಲ್ಲಿ ದಾಳಿ ನಡೆಸುತ್ತಿವೆ ಎಂದು ಎನ್‌ ಐಎ ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ:ಮರ್ಸಿಡಿಸ್‌ ಕಾರಿಗೆ ಢಿಕ್ಕಿ ಹೊಡೆದು ಎರಡು ತುಂಡಾದ ಟ್ರಾಕ್ಟರ್ | ವೀಡಿಯೋ

ಕರ್ನಾಟಕದಲ್ಲಿ, 75 ಪಿಎಫ್‌ಐ ಸದಸ್ಯರನ್ನು ‘ಪ್ರಿವೆಂಟಿವ್ ಕಸ್ಟಡಿ’ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಅವರನ್ನು ಸ್ಥಳೀಯ ತಹಸೀಲ್ದಾರ್ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನದಡಿ ಜೈಲಿಗೆ ಕಳುಹಿಸಲಾಗುತ್ತದೆ.

ಪ್ರೆವೆಂಟಿವ್ ಆಕ್ಷನ್ ರಿಪೋರ್ಟ್ (PAR) ಅಡಿಯಲ್ಲಿ ಎಲ್ಲರನ್ನೂ ಬಂಧಿಸಲಾಗಿದೆ. ಅವರು ಸ್ಥಳೀಯ ತಹಸೀಲ್ದಾರ್ ಮುಂದೆ ಬಾಂಡ್ ಶ್ಯೂರಿಟಿ ನೀಡಬೇಕು. ಅವರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದಿಲ್ಲ. ಅವರು ಉತ್ತಮ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು. ಈ ಬಂಧಿತರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ವಿಜಯಪುರ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಅಶ್ಫಾಕ್ ಜಮಖಂಡಿ ಎಂಬವನನ್ನು ಪೊಲೀಸರು ಮಂಗಳವಾರ ಬೆಳಂಬೆಳಿಗ್ಗೆ ವಶಕ್ಕೆ ಪಡೆದು, ವಿಚಾರಣೆ ಆರಂಭಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಪೊಲೀಸರು ಪಿಎಫ್ ಐ ಹಾಗೂ ಎಸ್ ಡಿಪಿಐ ಸಂಘಟನೆ ಕಾರ್ಯಕರ್ತರ ಮೇಲೆ ದಾಳಿ ನಡೆಸಿ ಅಜಮ್ ನಗರದ ಝಕಿವುಲ್ಲಾ ಫಾರುಖ್ ಫೈಜಿ, ಶಿವಾಜಿ ನಗರದ ಸಲಾಲುದ್ದೀನ್ ಬಾಬುಸಾಬ್ ಕಿಲ್ಲೇವಾಲೆ(44), ಅಸಾದಖಾನ್ ಸೊಸೈಟಿಯ ಅಬಿದಖಾನ್ ಗೌಸಖಾನ್ ಕಡೋಲಿ, ಬದ್ರುದ್ದಿನ್ ಹಸಮಸಾಬ್ ಪಟೇಲ್, ಅಮನ್ ನಗರದ ಸಮೀವುಲ್ಲಾ ಅಬ್ದುಲಮಜೀದ ಪೀರಜಾದೆ, ಬಾಕ್ಸೈಟ್ ರೋಡ್ ನ ಜಹೀರ ಗೌಸಮುದ್ದಿನ್ ಘೀವಾಲೆ, ವಿದ್ಯಾಗಿರಿಯ ರೇಹಾನ್ ಅಬ್ದುಲ್ ಅಜೀಜ್ ಶಾಯನ್ನವರ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ರಾಯಚೂರಿನಲ್ಲಿ ಪಿಎಫ್ ಐ ಮಾಜಿ ಅಧ್ಯಕ್ಷ ಮಹ್ಮದ್ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಆಸೀಂ ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಲ್ಲೂ ದಾಳಿ ಮಾಡಲಾಗಿದ್ದು, 5 ಮಂದಿ ಪಿಎಫ್ಐ ಮುಖಂಡರು- ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗದಲ್ಲಿ ಪಿಎಫ್‌ಐ ಮುಖಂಡ ಅಫ್ಹಾನ್ ಅಲಿಯನ್ನು ಮುಂಜಾಗ್ರತಾ ಕ್ರಮದಲ್ಲಿ ಬಂಧಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಉಗ್ರಗಾಮಿ ಸಂಘಟನೆಯ ನಾಲ್ವರನ್ನು ಮುಂಜಾಗ್ರತಾ ಬಂಧನದಲ್ಲಿ ಬಂಧಿಸಲಾಗಿದೆ.

ಚಾಮರಾಜನಗರದಲ್ಲಿ ಇಬ್ಬರು ಪಿಎಫ್‌ಐ ಮುಖಂಡರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಪಿಎಫ್‌ಐ ಜಿಲ್ಲಾಧ್ಯಕ್ಷ ಕಪಿಲ್ ಮತ್ತು ಕಾರ್ಯದರ್ಶಿ ಸುಹೈಬ್ ಬಂಧಿತರು.

ಮಂಗಳೂರಿನಲ್ಲಿ ಪೊಲೀಸರು ಸುಮಾರು ಹತ್ತಕ್ಕೂ ಹೆಚ್ಚು ಮಂದಿಯನ್ನು, ಸೆಕ್ಷನ್ 107 151 ಅಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿ ಪೊಲೀಸರು ಅಪ್ಪ, ಮಗ ಸೇರಿ 5 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅಪ್ಪ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಮಗ ಕ್ಯಾಂಪಸ್ ಫ್ರೆಂಟ್ ಆಫ್ ಇಂಡಿಯಾದ ಮಾಜಿ ಜಿಲ್ಲಾಧ್ಯಕ್ಷ ಇಮ್ರಾನ್ ಹಾಗೂ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

ಟಾಪ್ ನ್ಯೂಸ್

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

1-sadsad

ಪಾಕ್ ಗೆ ಹೋಗುವವರಿಗೆ ಫ್ರೀ ಟಿಕೆಟ್: ಶರಣ್ ಪಂಪ್ ವೆಲ್

1-weqwq

ಸವದತ್ತಿ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ಭರತ ಹುಣ್ಣಿಮೆ ಸಂಪನ್ನ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

“ಆರಗ ಮತ್ತೂಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

‘ಆರಗ ಮತ್ತೊಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

arrest-25

ಅಗರ್ತಲಾ ರೈಲು ನಿಲ್ದಾಣದಲ್ಲಿ 8 ರೋಹಿಂಗ್ಯಾ, 4 ಬಾಂಗ್ಲಾದೇಶಿಗಳ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಆರಗ ಮತ್ತೂಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

‘ಆರಗ ಮತ್ತೊಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ… ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ… ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

1-sadsd

ಪೋಕ್ಸೋ ಪ್ರಕರಣದ ಆರೋಪಿಗೆ ಸಹಕಾರ; ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ

1-d–as-dasd

ಪಂಚರತ್ನ ಪಂಚರ್, ಪ್ರಜಾಧ್ವನಿ ಬ್ರೇಕ್ ಫೇಲ್: ಶಿವಮೊಗ್ಗದಲ್ಲಿ ನಳಿನ್ ವ್ಯಂಗ್ಯ

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

MUST WATCH

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ಹೊಸ ಸೇರ್ಪಡೆ

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

1-sadsad

ಪಾಕ್ ಗೆ ಹೋಗುವವರಿಗೆ ಫ್ರೀ ಟಿಕೆಟ್: ಶರಣ್ ಪಂಪ್ ವೆಲ್

1-weqwq

ಸವದತ್ತಿ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ಭರತ ಹುಣ್ಣಿಮೆ ಸಂಪನ್ನ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.