ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?
ಎನ್ ಎಸ್ ಇ ನಿಫ್ಟಿ 180 ಅಂಕಗಳಷ್ಟು ಇಳಿಕೆಯಾಗಿದ್ದು, 16,998 ಅಂಕಗಳಿಗೆ ಕುಸಿದಿದೆ.
Team Udayavani, Jan 27, 2022, 10:57 AM IST
ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೆಗೆಟಿವ್ ಟ್ರೆಂಡ್ ಪರಿಣಾಮ ಗುರುವಾರ (ಜ.27)ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಕ ಇಳಿಕೆಯಾಗಿದ್ದು, ಕಳೆದ 14 ತಿಂಗಳ ಬಳಿಕ ಏಷ್ಯನ್ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಭಾರೀ ಇಳಿಕೆ ಕಂಡಂತಾಗಿದೆ.
ಇದನ್ನೂ ಓದಿ:ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ
ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,011 ಅಂಕಗಳಷ್ಟು ಕುಸಿತ ಕಂಡಿದ್ದು, 56,847 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 180 ಅಂಕಗಳಷ್ಟು ಇಳಿಕೆಯಾಗಿದ್ದು, 16,998 ಅಂಕಗಳಿಗೆ ಕುಸಿದಿದೆ.
ಡಾ.ರೆಡ್ಡೀಸ್ ನಿಫ್ಟಿ ಷೇರು ಶೇ.2.85ರಷ್ಟು ನಷ್ಟ ಕಂಡಿದ್ದು, ಇಂದು ಪ್ರತಿ ಷೇರಿನ ಬೆಲೆ 4,325 ರೂಪಾಯಿಗೆ ಇಳಿಕೆಯಾಗಿದೆ. ಅಲ್ಲದೇ ಟೈಟಾನ್, ಗ್ರಾಸಿಮ್ ಇಂಡಸ್ಟ್ರೀಸ್, ಈಚರ್ ಮೋಟಾರ್ಸ್, ಎಚ್ ಡಿಎಫ್ ಸಿ ಷೇರು ನಷ್ಟ ಕಂಡಿದೆ. ಮತ್ತೊಂದೆಡೆ ಆ್ಯಕ್ಸಿಸ್ ಬ್ಯಾಂಕ್,ಇಂಡಸ್ ಇಂಡ್ ಬ್ಯಾಂಕ್, ಎನ್ ಟಿಪಿಸಿ, ಮಾರುತಿ ಸುಜುಕಿ ಷೇರು ಲಾಭ ಗಳಿಸಿದೆ.
ಇಂದಿನ ವಹಿವಾಟಿನಲ್ಲಿ ಡಾ.ರೆಡ್ಡೀಸ್, ವಿಪ್ರೋ, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ, ಇನ್ಫೋಸಿಸ್, ಬಜಾಜ್ ಫಿನ್ ಸರ್ವ್ ಷೇರುಗಳು ಶೇ.3.37ರಷ್ಟು ನಷ್ಟ ಕಂಡಿದೆ.
ಮಂಗಳವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 367 ಅಂಕ ಏರಿಕೆಯೊಂದಿಗೆ 57,858 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 129 ಅಂಕ ಏರಿಕೆ ಕಂಡಿದ್ದು, 17,278 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೊದಲ ಬಾರಿಗೆ ರೈಲಿನಲ್ಲಿ ಬಸ್ ಸಾಗಣೆ; ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಹೊರಟ 32 ಬಸ್ಗಳು
ನೆರೆ, ಪ್ರಾಕೃತಿಕ ವಿಕೋಪಗಳಲ್ಲಿ ತುರ್ತು ಪರಿಹಾರ ಕಾರ್ಯ: ಜಿಲ್ಲಾಧಿಕಾರಿ ಕರೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ
ಮಗಳನ್ನೇ ಹತ್ಯೆಗೈದ ಪ್ರಕರಣ : ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು