ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು
ಎನ್ ಎಸ್ ಇ ನಿಫ್ಟಿ 8.2 ಅಲ್ಪ ಕುಸಿತದೊಂದಿಗೆ 17,101.95 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ
Team Udayavani, Jan 28, 2022, 5:00 PM IST
ಮುಂಬಯಿ: ಮುಂಬಯಿ ಷೇರುಪೇಟೆ ವಹಿವಾಟು ಶುಕ್ರವಾರ (ಜನವರಿ 28) ಬೆಳಗ್ಗೆ 700ಕ್ಕೂ ಅಧಿಕ ಅಂಕ ಏರಿಕೆ ಕಂಡಿದ್ದು, ದಿನಾಂತ್ಯಕ್ಕೆ ಸೆನ್ಸೆಕ್ಸ್ 76.71 ಅಂಕಗಳಷ್ಟು ಇಳಿಕೆಯೊಂದಿಗೆ ಅಂತ್ಯಗೊಂಡಿದೆ.
ಇದನ್ನೂ ಓದಿ:ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್ ಅಧಿಕಾರಿ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 76.71 ಅಂಕಗಳಷ್ಟು ಕುಸಿದಿದ್ದು, 57,200 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದ್ದು, ಅದೇ ರೀತಿ ಎನ್ ಎಸ್ ಇ ನಿಫ್ಟಿ 8.2 ಅಲ್ಪ ಕುಸಿತದೊಂದಿಗೆ 17,101.95 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಎನ್ ಟಿಪಿಸಿ ಷೇರು ಭರ್ಜರಿ ಲಾಭಗಳಿಸಿದ್ದು, ಸನ್ ಫಾರ್ಮಾ, ಇಂಡಸ್ ಇಂಡ್ ಬ್ಯಾಂಕ್, ಐಟಿಸಿ ಷೇರು ಕೂಡಾ ಲಾಭ ಕಂಡಿದೆ. ಮತ್ತೊಂದೆಡೆ ಮಾರುತಿ ಸುಜುಕಿ ಷೇರು ಬೆಲೆ ಶೇ.3.04ರಷ್ಟು ನಷ್ಟ ಕಂಡಿದ್ದು, ಟೆಕ್ ಮಹೀಂದ್ರ, ಪವರ್ ಗ್ರಿಡ್ ಕಾರ್ಪೋರೇಶನ್, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟಕ್ಕೆ ಗುರಿಯಾಗಿದೆ.
ಇಂದು ಮಧ್ಯಾಹ್ನ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 730 ಅಂಕಗಳಷ್ಟು ಏರಿಕೆಯಾಗಿದ್ದು, 58,000 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಎನ್ ಎಸ್ ಇ ನಿಫ್ಟಿ ಶೇ.0.7ರಷ್ಟು ಏರಿಕೆಯೊಂದಿಗೆ 17,219 ಅಂಕಗಳ ಮಟ್ಟಕ್ಕೆ ತಲುಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು
ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ
ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ
ವರದಿ ಕೊಡುವವರೆಗೆ ಟ್ವಿಟರ್ ಖರೀದಿಸಲ್ಲ ಎಂದ ಮಸ್ಕ್
ಜಿಎಸ್‌ಟಿ ಪೋರ್ಟಲ್ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?