ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 277 ಅಂಕ ಜಿಗತ, ನಿಫ್ಟಿ ಏರಿಕೆ
ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರ, ವಿಪ್ರೋ, ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.
Team Udayavani, Jan 4, 2022, 11:36 AM IST
ಮುಂಬಯಿ: ಅಮೆರಿಕ ಷೇರುಮಾರುಕಟ್ಟೆಯಲ್ಲಿನ ದಾಖಲೆಯ ವಹಿವಾಟಿನ ಪರಿಣಾಮ ಮಂಗಳವಾರ (ಜನವರಿ 04) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 270ಕ್ಕೂ ಅಧಿಕ ಅಂಕ ಏರಿಕೆ ಕಂಡಿದೆ.
ಇದನ್ನೂ ಓದಿ:ಟಾಲಿವುಡ್ ಕಡೆಗೆ ಸಲಗ ಸಂಚಾರ: ಬಾಲಕೃಷ್ಣ ಚಿತ್ರದಲ್ಲಿ ವಿಜಯ್ ನಟನೆ
ಜಾಗತಿಕ ಷೇರುಪೇಟೆಯ ಟ್ರೆಂಡಿಂಗ್ ಹಿನ್ನೆಲೆಯಲ್ಲಿ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 277.85 ಅಂಕ ಏರಿಕೆಯೊಂದಿಗೆ 59,461.07 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 80.40 ಅಂಕಗಳಷ್ಟು ಏರಿಕೆಯಾಗಿದ್ದು, 17,706.10 ಅಂಕಗಳ ಮಟ್ಟ ತಲುಪಿದೆ.
ಸೋಮವಾರದ(ಜನವರಿ 03) ವರ್ಷದ ಮೊದಲ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ 930 ಅಂಕಗಳಷ್ಟು ದಾಖಲೆ ಪ್ರಮಾಣದ ಏರಿಕೆಯೊಂದಿಗೆ 59,183 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 272 ಅಂಕಗಳಷ್ಟು ಏರಿಕೆಯಾಗಿದ್ದು, 17,626 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎನ್ ಟಿಪಿಸಿ, ಪವರ್ ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್, ಎಸ್ ಬಿಐ, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರ, ವಿಪ್ರೋ, ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
215 ಉತ್ಪನ್ನಗಳ ತೆರಿಗೆ ಬದಲಿಲ್ಲ? ಚಂಡೀಗಢದಲ್ಲಿ ನಡೆವ ಸಭೆಯಲ್ಲಿ ಚರ್ಚೆ ಸಾಧ್ಯತೆ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 462 ಅಂಕ ಜಿಗಿತ; ವಾರಾಂತ್ಯದ ವಹಿವಾಟು ಅಂತ್ಯ
ಆರ್ಥಿಕ ಹಿಂಜರಿಕೆ ಭೀತಿ: ಷೇರುಪೇಟೆ ಸೆನ್ಸೆಕ್ಸ್ 709 ಅಂಕ ಕುಸಿತ; ಲಾಭ ಕಂಡ ಷೇರು ಯಾವುದು
400ಕ್ಕೂ ಅಧಿಕ ಅಂಕ ಕುಸಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್; ನಿಫ್ಟಿಯೂ ಇಳಿಕೆ
ಸಾವಿರದ ಸನಿಹಕ್ಕೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್; ಲಾಭ ಗಳಿಸಿದ ಷೇರು ಯಾವುದು