ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ, ಲಾಭಗಳಿಸಿದ ಇನ್ಫೋಸಿಸ್ ಷೇರು
ಎಸ್ ಎಸ್ ಇ ನಿಫ್ಟಿ ಕೂಡಾ 139.70 ಅಂಕಗಳಷ್ಟು ಏರಿಕೆಯಾಗಿದ್ದು, 16,188.90 ಅಂಕಗಳಲ್ಲಿ ವಹಿವಾಟು ನಡೆದಿದೆ.
Team Udayavani, Jul 18, 2022, 11:58 AM IST
ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ (ಜುಲೈ 18) ಬಾಂಬೆ ಷೇರುಪೇಟೆಯ ಆರಂಭಿಕ ಹಂತದಲ್ಲಿ ಸೆನ್ಸೆಕ್ಸ್ 500 ಅಂಕಗಳ ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:ವಿಚಿತ್ರ ಕೆಲಸ ಮಾಡುತ್ತಿದ್ದಾನೆ ಈ ಯುವಕ: 1 ಗಂಟೆಗೆ 7,000 ರೂ. ಸಂಬಳ!
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500.49 ಅಂಕಗಳಷ್ಟು ಏರಿಕೆಯೊಂದಿಗೆ 54,224.40 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎಸ್ ಎಸ್ ಇ ನಿಫ್ಟಿ ಕೂಡಾ 139.70 ಅಂಕಗಳಷ್ಟು ಏರಿಕೆಯಾಗಿದ್ದು, 16,188.90 ಅಂಕಗಳಲ್ಲಿ ವಹಿವಾಟು ನಡೆದಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಇನ್ಫೋಸಿಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಲ್ ಆ್ಯಂಡ್ ಟಿ, ಟೆಕ್ ಮಹೀಂದ್ರ ಮತ್ತು ಬಜಾಜ್ ಫಿನ್ ಸರ್ವ್, ಐಟಿ, ಮೆಟಲ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಬ್ರಿಟಾನಿಯಾ ಇಂಡಸ್ಟ್ರಿಸ್ ಷೇರುಗಳು ನಷ್ಟ ಕಂಡಿದೆ.
ಬಿಇಎಲ್ ಷೇರು ದರ ಶೇ.4ರಷ್ಟು ಹೆಚ್ಚಳವಾಗಿದ್ದು, ಇದರಿಂದಾಗಿ ಬಿಇಎಲ್ ಕಂಪನಿಯ 2023ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ವರದಿಯಲ್ಲಿ 431.49 ಕೋಟಿ ರೂಪಾಯಿ ಲಾಭಗಳಿಸಿದೆ. ಇದು ಕಳೆದ ವರ್ಷಕ್ಕಿಂತ 11.15 ಕೋಟಿ ರೂಪಾಯಿಯಷ್ಟು ಹೆಚ್ಚಿನ ಆದಾಯ ಗಳಿಸಿದಂತಾಗಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್