ಮುಂಬಯಿ ಷೇರುಪೇಟೆ ಸೂಚ್ಯಂಕ 400 ಅಂಕ ಕುಸಿತ, 14,800ಕ್ಕೆ ಕುಸಿದ ನಿಫ್ಟಿ
ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಅನುಭವಿಸಿದೆ.
Team Udayavani, Apr 5, 2021, 11:03 AM IST
ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ನಡುವೆಯೂ ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೋಮವಾರ(ಏಪ್ರಿಲ್ 05) ಆರಂಭಿಕ ವಹಿವಾಟಿನಲ್ಲಿ 400 ಅಂಕ ಕುಸಿತ ಕಂಡಿದೆ.
ಮುಂಬಯಿ ಷೇರುಪೇಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ 434.90 ಅಂಕ ಕುಸಿತ ಕಂಡಿದ್ದು, 49,594.93 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 109.35 ಅಂಕ ಕುಸಿತ ಕಂಡಿದ್ದು, 14,758 ಗಡಿಗೆ ತಲುಪಿದೆ.
ಸೂಚ್ಯಂಕ ಕುಸಿತದಿಂದ ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಎಸ್ ಬಿಐ, ಬಜಾಜ್ ಆಟೋ, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಅನುಭವಿಸಿದೆ.
ಮತ್ತೊಂದೆಡೆ ಇನ್ಫೋಸಿಸ್, ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ಲಾಭ ಗಳಿಸಿವೆ. ಗುರುವಾರ ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ 520.68ಅಂಕ ಏರಿಕೆಯಾಗಿ 50,029.83ರ ಗಡಿ ದಾಟಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 1,534 ಅಂಕ ಜಿಗಿತ; ನಿಫ್ಟಿಯೂ ಏರಿಕೆ
ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು
ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ
ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ
ವರದಿ ಕೊಡುವವರೆಗೆ ಟ್ವಿಟರ್ ಖರೀದಿಸಲ್ಲ ಎಂದ ಮಸ್ಕ್
MUST WATCH
ಹೊಸ ಸೇರ್ಪಡೆ
2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ
ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ
ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ
ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ