Udayavni Special

ಶಿರ್ವ :ಬಟ್ಟೆ ಖರೀದಿಗೆಂದು ತಾಯಿಜೊತೆ ಬಂದು ನಾಪತ್ತೆಯಾಗಿದ್ದ ಮಗು ಶವವಾಗಿ ಬಾವಿಯಲ್ಲಿ ಪತ್ತೆ

Team Udayavani, Apr 3, 2021, 9:59 PM IST

ಶಿರ್ವ : ನಾಪತ್ತೆಯಾಗಿದ್ದ ಮಗು ಶವವಾಗಿ ಬಾವಿಯಲ್ಲಿ ಪತ್ತೆ

ಶಿರ್ವ: ಅದಮಾರಿನಿಂದ ಬಟ್ಟೆ ಖರೀದಿಗೆಂದು ತಾಯಿಯ ಜತೆ ಮುದರಂಗಡಿಗೆ ಬಂದು ನಾಪತ್ತೆಯಾಗಿದ್ದ ಹೆಣ್ಣು ಮಗು ಬಟ್ಟೆ ಅಂಗಡಿ ಹಿಂಬದಿಯ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮುದರಂಗಡಿ ಪೇಟೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಅದಮಾರು ವಾಜಪೇಯಿ ಕಾಲನಿಯ ನಿವಾಸಿ ಕೃಷ್ಣ- ಜಯಲಕ್ಷ್ಮಿ ದಂಪತಿ ಪುತ್ರಿ 2 ವರ್ಷ 9 ತಿಂಗಳ ಪ್ರಾಯದ ಮಗು ಪ್ರಿಯಾಂಕಾ ಮೃತಪಟ್ಟಾಕೆ.

ಘಟನೆಯ ವಿವರ
ಮೃತ ಬಾಲಕಿ ಮತ್ತು ಆಕೆಯ ತಾಯಿ ಬಟ್ಟೆ ಖರೀದಿಗೆಂದು ಅದಮಾರಿನಿಂದ ರಿಕ್ಷಾದಲ್ಲಿ 4-30ರ ವೇಳೆಗೆ ಮುದರಂಗಡಿಯ ಬಟ್ಟೆ ಅಂಗಡಿಗೆ ಬಂದಿದ್ದರು. ತಾಯಿ ಬಟ್ಟೆ ಖರೀದಿಸುವಾಗ ಅಂಗಡಿಯ ಒಳಗೆ ಮತ್ತು ಹೊರಗೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಗಾಬರಿಗೊಂಡ ತಾಯಿ ಮತ್ತು ಅಂಗಡಿ ಮಾಲಕರು, ಸಿಬಂದಿ, ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶಿರ್ವ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ :ಈ ಮಣ್ಣಿನ ಮಗನೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ : ದೀದಿಗೆ ಮೋದಿ ತಿರುಗೇಟು

ಮಗುವಿನ ಬ್ಯಾಗ್‌ ಪತ್ತೆಯಾಗಿತ್ತು
ಮಗು ನಾಪತ್ತೆಯಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಬಟ್ಟೆ ಅಂಗಡಿ ಸಿಬಂದಿ ಮತ್ತೋರ್ವ ಮಹಿಳೆ ಅಂಗಡಿ ಸಮೀಪದ ಬಾವಿಯಲ್ಲಿ ಇಣುಕಿದಾಗ ಮಗುವಿನ ಕುತ್ತಿಗೆಯಲ್ಲಿದ್ದ ನೀಲಿ ಬಣ್ಣದ ಬ್ಯಾಗ್‌ ನೀರಿನಲ್ಲಿರುವುದು ಕಂಡುಬಂದಿತ್ತು. ತತ್‌ಕ್ಷಣ ಶಿರ್ವ ಪೊಲೀಸರು, ಅಗ್ನಿಶಾಮಕ ಸಿಬಂದಿ ಮತ್ತು ಸ್ಥಳೀಯ ಕೆಲವರು ಹುಡುಕಾಟ ನಡೆಸಿದರು. ಶವ ಸಿಗದಿದ್ದಾಗ ಮುಳುಗು ತಜ್ಞ ದೆಂದೂರುಕಟ್ಟೆಯ ಅಶೋಕ್‌ ಶೆಟ್ಟಿ ಸುಮಾರು 25 ಅಡಿ ನೀರಿರುವ ಬಾವಿಗಿಳಿದು ಶವವನ್ನು ಮೇಲಕ್ಕೆತ್ತಿದ್ದಾರೆ.

ಬಾವಿಗೆ ಬಿದ್ದಿರುವ ಶಂಕೆ
ಅಂಗಡಿಯ ಹೊರಗೆ ಆಟವಾಡುತ್ತಿದ್ದ ಮಗು ಕಟ್ಟಡದ ಬದಿಯ ಓಣಿಯಲ್ಲಿ ಹೋಗಿ ಕಟ್ಟಡದ ಹಿಂಬದಿಯಲ್ಲಿದ್ದ ಕಡಿಮೆ ಎತ್ತರದ ಆವರಣವಿರುವ ಸುಮಾರು 65 ಅಡಿ ಆಳದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಟಾಪ್ ನ್ಯೂಸ್

rrrrrrrrrrr

ಮುಧೋಳ : ಆಕ್ಸಿಜನ್ ಬೆಡ್ ಸಿಗದೆ ಯುವಕ ಆಸ್ಪತ್ರೆ ಎದುರೇ ಸಾವು

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

bj watling

ಫೈನಲ್ ಪಂದ್ಯಕ್ಕೂ ಮುನ್ನ ಕಿವೀಸ್ ಗೆ ಆಘಾತ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೀಪರ್ ವಿದಾಯ

fhdtgrt

‘ಚೆನ್ನಾಗಿದ್ದೇನೆ,ನನಗೇನು ಆಗಿಲ್ಲ’: ಸಾವಿನ ವದಂತಿಗೆ ‘ಶಕ್ತಿಮಾನ್’ ನಟ ಮುಕೇಶ್ ಆಕ್ರೋಶ   

honda

ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !

david attenborough

ಎದುರಾಗಲಿದೆ ಕೋವಿಡ್ ಮೀರಿದ ದೊಡ್ಡ ಸ‌ವಾಲು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಗೆದ್ದ ಯಡಮೊಗೆಯ ಕುಟುಂಬ!  ಎಲ್ಲ 9 ಮಂದಿಯೂ ಸೋಂಕು ಎದುರಿಸಿ ಜಯಿಸಿದರು

ಕೋವಿಡ್ ಗೆದ್ದ ಯಡಮೊಗೆಯ ಕುಟುಂಬ! ಎಲ್ಲ 9 ಮಂದಿಯೂ ಸೋಂಕು ಎದುರಿಸಿ ಜಯಿಸಿದರು

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

Udupi Shiroor Mutt Uttaradhiukari Pattabhisheka’s Predatory ritual practice

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ  

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಈದುಲ್ ಫ್ರಿತ್ ಹಬ್ಬವನ್ನು ಸರಳವಾಗಿ ಆಚರಿಸಿ, ಬಡವರಿಗೆ ಸಹಾಯ ಮಾಡಿ:ಜಿಲ್ಲಾ ಮುಸ್ಲಿಮ್ ಒಕ್ಕೂಟ

ಈದುಲ್ ಫ್ರಿತ್ ಹಬ್ಬವನ್ನು ಸರಳವಾಗಿ ಆಚರಿಸಿ, ಬಡವರಿಗೆ ಸಹಾಯ ಮಾಡಿ:ಜಿಲ್ಲಾ ಮುಸ್ಲಿಮ್ ಒಕ್ಕೂಟ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

rrrrrrrrrrr

ಮುಧೋಳ : ಆಕ್ಸಿಜನ್ ಬೆಡ್ ಸಿಗದೆ ಯುವಕ ಆಸ್ಪತ್ರೆ ಎದುರೇ ಸಾವು

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

ಗಗಗಗಗಗಗಗಗಗಗಗ

ಮಹಾರಾಷ್ಟ್ರ ಕೋವಿಡ್ ಸೋಂಕಿತರಿಗೆ ಮತ್ತೊಂದು ಶಾಕ್ : 2000 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

bj watling

ಫೈನಲ್ ಪಂದ್ಯಕ್ಕೂ ಮುನ್ನ ಕಿವೀಸ್ ಗೆ ಆಘಾತ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೀಪರ್ ವಿದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.