ದುಬೈ ಪ್ರವಾಸದ ವೇಳೆ ಶಿವಸೇನಾ ಶಾಸಕ ಲಟ್ಕೆ ಹೃದಯಾಘಾತದಿಂದ ನಿಧನ
ಶಾಸಕರಾಗುವ ಮುನ್ನ ಲಟ್ಕೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ನ ಕಾರ್ಪೋರೇಟರ್ ಆಗಿದ್ದರು.
Team Udayavani, May 12, 2022, 12:50 PM IST
ಮುಂಬಯಿ: ಮುಂಬಯಿಯ ಶಿವಸೇನಾ ಶಾಸಕ ರಮೇಶ್ ಲಟ್ಕೆ (52ವರ್ಷ) ಹೃದಯಸ್ತಂಭನದಿಂದ ದುಬೈನಲ್ಲಿ ಸಾವನ್ನಪ್ಪಿರುವುದಾಗಿ ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಮದುವೆ ವದಂತಿ: ಸುನೀಲ್ ಶೆಟ್ಟಿ ಹೇಳಿದ್ದೇನು?
ರಮೇಶ್ ಲಟ್ಕೆ ಕುಟುಂಬ ಸದಸ್ಯರ ಜತೆ ದುಬೈ ಪ್ರವಾಸಕ್ಕೆ ತೆರಳಿದ್ದು, ಬುಧವಾರ ತಡರಾತ್ರಿ ಲಟ್ಕೆ ಅವರು ಹೃದಯಸ್ತಂಭನದಿಂದ ವಿಧಿವಶರಾಗಿದ್ದಾರೆಂದು ಪಕ್ಷದ ಪದಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ರಮೇಶ್ ಲಟ್ಕೆ ಅವರು ಮುಂಬಯಿಯ ಪೂರ್ವ ಅಂಧೇರಿ ಕ್ಷೇತ್ರದಿಂದ ಎರಡು ಬಾರಿ ಶಿವಸೇನಾದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗುವ ಮುನ್ನ ಲಟ್ಕೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ನ ಕಾರ್ಪೋರೇಟರ್ ಆಗಿದ್ದರು.
ರಮೇಶ್ ಲಟ್ಕೆ ಅವರ ಪಾರ್ಥಿವ ಶರೀರ ಇಂದು ಸಂಜೆ ಮುಂಬಯಿ ತಲುಪುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ. ಘಟನೆ ಬಗ್ಗೆ ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಾಹಿತಿ ನೀಡಿದ್ದು, ಪಕ್ಷದ ಹಿರಿಯ ಮುಖಂಡ ಲಟ್ಕೆ ಅವರ ಪಾರ್ಥಿವ ಶರೀರ ದುಬೈನಿಂದ ಮುಂಬೈಗೆ ತರುವ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸಲು ತಿಳಿಸಿರುವುದಾಗಿ ಪಕ್ಷದ ಪದಾಧಿಕಾರಿ ವಿವರ ನೀಡಿದ್ದಾರೆ.
ರಮೇಶ್ ಲಟ್ಕೆ ಅವರ ನಿಧನದ ಬಗ್ಗೆ ಶಿವಸೇನಾ ವಕ್ತಾರೆ ಪ್ರಿಯಾಂಕ ಚತುರ್ವೇದಿ ಸಾಂತ್ವಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ಅವರ ಆಕಸ್ಮಿಕ ನಿಧನದ ಸುದ್ದಿಗೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ನಿತೇಶ್ ರಾಣೆ, ಕುಟುಂಬ ಸದಸ್ಯರಿಗೆ ಸಾಂತ್ವಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್ ಆಕ್ಷೇಪ
ಜೆಟ್ಏರ್ ವೇಸ್ಗೆ ವಿಮಾನ ಯಾರು ಕೊಡ್ತಾರೆ?
ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ
ನನ್ನ ಕೇಸಲ್ಲೂ ಸುಳ್ಳು ಹೇಳಿದ್ದ ಶ್ರೀಕುಮಾರ್: ನಂಬಿ ನಾರಾಯಣನ್
ಮುರುಘರಾಜೇಂದ್ರ ಶ್ರೀ ಗಳ 50ನೇ ಹುಟ್ಟುಹಬ್ಬ :ಬೈನಾ ಕನ್ನಡ ವಿದ್ಯಾರ್ಥಿಗಳಿಗೆ ನೆರವು