ಅನೈತಿಕ ಸರ್ಕಾರದ ದಿವಳಿ ಬಜೆಟ್ ಇದು : ಸಿದ್ದರಾಮಯ್ಯ
ಬಜೆಟ್ ಬಗ್ಗೆ ಸಿದ್ದರಾಮಯ್ಯ ಅಸಮಧಾನ
Team Udayavani, Mar 8, 2021, 5:57 PM IST
ಬೆಂಗಳೂರು : ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್ ಔಟ್ ಮಾಡಿದ್ದೇವೆ, ನಮ್ಮ ಅಗತ್ಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿದೆ, ಇದನ್ನ ಯಡಿಯೂರಪ್ಪ ಒಳ್ಳೇ ಬಜೆಟ್ ಅಂತಿದ್ದಾರೆ, ಯಾವದೃಷ್ಟಿಕೋನದಲ್ಲಿ ಇದು ಒಳ್ಳೆಯ ಬಜೆಟ್, ಇದು ದಿವಾಳಿ ಬಜೆಟ್ ಎಂದು ಸಿದ್ದರಾಮಯ್ಯ ಆಯವ್ಯಯದ ಬಗ್ಗೆ ಅನಮಾಧಾನ ಹೊರ ಹಾಕಿದ್ದಾರೆ.
ಅಭಿವೃದ್ಧಿ ಕೆಲಸಕ್ಕೆ ದುಡ್ಡು ಕೊಟ್ಟಿದ್ದಾರಾ? 31 ಸಾವಿರ ಕೋಟಿ ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ತುಂಬಾ ಕಡಿಮೆಯಾಯ್ತು. ಪ್ರತಿಯೊಂದು ಪೈಸೆಗೂ ಲೆಕ್ಕವಿರಬೇಕು, ಇಲ್ಲಿ ಪಾರದರ್ಶಕತೆ ಉಳಿಸಿಕೊಂಡಿಲ್ಲ. ಕಳೆದ ವರ್ಷ 143 ಕೋಟಿ 35 ಲಕ್ಷ ಸರ್ ಪ್ಲಸ್ ಬಜೆಟ್ ಅಂದಿದ್ದರು,ಆಯವ್ಯಯ ಅಂದಾಜು ಬಜೆಟ್ ಮಾಡಿದ್ದರು, ಪರಿಷ್ಕೃತ ಅಂದಾಜು ಪ್ರಕಾರ ರೆವಿನ್ಯೂ19485 ಕೋಟಿ 84 ಡಿಫಿಶಿಟ್ ತೋರಿಸಿದ್ದಾರೆ ಎಂದು ರಾಜ್ಯ ಬಜೆಟ್ ಬಗ್ಗೆ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಆಡಳಿತ ಸುಧಾರಣೆಗೆ 40 ಸಾವಿರ ಕೋಟಿ ಇಟ್ಟಿದ್ದಾರೆ, ಇಷ್ಟು ದೊಡ್ಡ ಮೊತ್ತ ಅದೇಗೆ ಇಟ್ಟಿದ್ದಾರೋ ಗೊತ್ತಿಲ್ಲ, ಇಷ್ಟು ಹಣ ಇದ್ಯೋ ಇಲ್ವೋ ಅರ್ಥವಾಗ್ತಿಲ್ಲ, ಪರಿಶಿಷ್ಟರ ಎಸ್ಸಿಪಿ,ಟಿಎಸ್ಪಿ ಹಣ ಹೆಚ್ಚಿಡಬೇಕು, ಜನಸಂಖ್ಯೆಗನುಗುಣವಾಗಿ ಇದಕ್ಕೆ ಹಣ ಮೀಸಲಿಡಬೇಕು, ಇವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡ್ತಾರೆ, ಬಜೆಟ್ ಹೆಚ್ಚಾದಂತೆ ಈ ಹಣವೂ ಹೆಚ್ಚಿಡಬೇಕು ಆದರೆ ಈ ಎಸ್ಸಿಪಿ,ಟಿಎಸ್ಪಿ ಹಣ 2505 ಕೋಟಿ ಇಟ್ಟಿದ್ದಾರೆ.
ಈ ವರ್ಷ 20 ಸಾವಿರ ಕೋಟಿಯೂ ಖರ್ಚು ಮಾಡಲ್ಲ. ನಾನು 33 ಸಾವಿರ ಕೋಟಿ ಬಜೆಟ್ ನಲ್ಲಿಟ್ಟಿದ್ದೆ, ಈ ಬಜೆಟ್ ಅಭಿವೃದ್ಧಿಗೆ ಮಾರಕ ಎಂದಿದ್ದಾರೆ.
ಕೇಂದ್ರ ಸರ್ಕಾರ ಸಾಲ ತೆಗೆದುಕೊಳ್ಳೋಕೆ ಹೇಳಿದೆ, ಅದಕ್ಕೆ ಸಾಲ ಮಾಡೋಕೆ ಹೊರಟಿದ್ದಾರೆ, ಸಾಲ ಸಿಗುತ್ತೆ ಅಂತ ಸಾಲ ತೆಗೆದುಕೊಳ್ಳುವುದಲ್ಲ, ತೀರಿಸೋಕೆ ಸಾಮರ್ಥ್ಯವಿರುವಷ್ಟು ಸಾಲ ಮಾಡಬೇಕು, ರಾಜ್ಯ ದಿವಾಳಿಯಾಗೋಕೆ ಇದೇ ಸಾಕ್ಷಿ ಎಂದಿದ್ದಾರೆ.
ಒಕ್ಕಲಿಗ ಮತ್ತು ವೀರಶೈವ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಹಣ ಇಟ್ಟಿದ್ದಾರೆ, ನಾನು ಇದನ್ನ ವಿರೋಧ ಮಾಡಲ್ಲ, ಆದ್ರೆ , ತಳ ಸಮುದಾಯಗಳಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ… ಮತ್ತೆ ಎಲ್ಲಿ ಸಾಮಾಜಿಕ ನ್ಯಾಯ..? ರಿಸರ್ವ್ ಇರೋರಿಗೆ ಅನ್ಯಾಯ ಮಾಡಿದ್ದೀರಿ, ಹಾಗಾಗಿ ನಿಮ್ಮಗೆ ಏನು ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್
ಮುಷ್ಕರ ನಿರತರಿಂದ 60 ಬಸ್ಸುಗಳಿಗೆ ಹಾನಿ,152 ಕೋಟಿ ರೂ.ಆದಾಯ ನಷ್ಟ : ಸಚಿವ ಲಕ್ಷ್ಮಣ ಸವದಿ
ಶಾಸಕ ರಾಜುಗೌಡಗೂ ಕೋವಿಡ್ ಪಾಸಿಟಿವ್ ;ಬೆಂಗಳೂರು ಆಸ್ಪತ್ರೆಗೆ ದಾಖಲು
ಕರ್ನಾಟಕದಲ್ಲಿಂದು 11,265 ಕೋವಿಡ್ ಹೊಸ ಪ್ರಕರಣಗಳು ಪತ್ತೆ
MUST WATCH
ಹೊಸ ಸೇರ್ಪಡೆ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು