ಡಿಕೆಶಿ, ಸಿದ್ದರಾಮಯ್ಯ ಮಕ್ಕಳು ಬಿಜೆಪಿಗೆ: ನಳಿನ್‌ ಕುಮಾರ್‌ ಕಟೀಲ್‌


Team Udayavani, Jan 30, 2023, 8:52 PM IST

ಡಿಕೆಶಿ, ಸಿದ್ದರಾಮಯ್ಯ ಮಕ್ಕಳು ಬಿಜೆಪಿಗೆ: ನಳಿನ್‌ ಕುಮಾರ್‌ ಕಟೀಲ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶ ಯುವಕರನ್ನು ಸೆಳೆಯುತ್ತಿದ್ದು ಮುಂದಿನ ದಿನದಲ್ಲಿ ಸಿದ್ದರಾಮಯ್ಯ ಅವರ ಮಗ, ಡಿ.ಕೆ.ಶಿವಕುಮಾರ್‌ ಅವರ ಮಕ್ಕಳು, ಖರ್ಗೆ ಅವರ ಮಗ ಬಿಜೆಪಿಗೆ ಬರುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಮೈಸೂರಿನ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ವಾಸು ಅವರ ಪುತ್ರ ಕವೀಶ್‌ ಗೌಡ ವಾಸು ಸೇರಿ ಹಳೇ ಮೈಸೂರು ಭಾಗದ ಹಲವು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಕ್ಷ ಬದಲಾವಣೆ ಕೇವಲ ವಾಸು ಅವರ ಮನೆಯಲ್ಲಿ ಮಾತ್ರವಾಗಿಲ್ಲ. ಕಾಂಗ್ರೆಸ್‌ನ ಇನ್ನಿತರ ನಾಯಕರ ಮನೆಗಳಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿದೆ.

ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಬಸ್‌ ಹೋಗುತ್ತ ಹೋಗುತ್ತ ಬ್ರೇಕ್‌ ಫೇಲ್‌ ಆಗಿದೆ. ಜೆಡಿಎಸ್‌ ಪಂಚರತ್ನ ಯಾತ್ರೆ ವಿಜಯಪುರ ತಲುಪುವ ಹೊತ್ತಿಗೆ ಹಾಸನದಲ್ಲಿ ಪಂಕ್ಚರ್‌ ಆಗಿದೆ. ಈ ಎರಡೂ ಯಾತ್ರೆಗಳು ಮುಂದಿನ ಚುನಾವಣೆವರೆಗೆ ಪೂರ್ತಿ ಆಗುವುದಿಲ್ಲ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲಿದ್ದೇವೆ ಎಂದು ಹೇಳಿದರು.

ಸಚಿವ ಗೋಪಾಲಯ್ಯ ಮಾತನಾಡಿ, ಮೈಸೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ ಭಾಗದಿಂದ ಅನೇಕ ಮುಖಂಡರು ಬಿಜೆಪಿಗೆ ಸೇರಲಿದ್ದಾರೆ. ಬಿಜೆಪಿ ಸೇರಿದವರಿಗೆ ಉಜ್ವಲ ಭವಿಷ್ಯವಿದೆ. ಪಕ್ಷ ಸೇರ್ಪಡೆ ಆದವರು ತಮ್ಮ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಪಕ್ಷ ಸೇರ್ಪಡೆ ಆದವರ ಪರವಾಗಿ ಮಾತನಾಡಿದ ಕವೀಶ್‌ ಗೌಡ, ಬಿಜೆಪಿಯ ಸಿದ್ಧಾಂತ, ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದಾಗ ನಾನು ಬಿಜೆಪಿಯಲ್ಲಿ ಇರಬೇಕಿತ್ತು ಎಂದು ಅನಿಸಿತ್ತು. ಪ್ರಧಾನ ಮಂತ್ರಿಯವರ ಅಮೃತ ಕಾಲ ಪರಿಕಲ್ಪನೆ ಅತ್ಯುತ್ತಮವಾಗಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.

ಜೆಡಿಎಸ್‌ ಮುಖಂಡರಾದ ಸೋಮಶೇಖರ್‌, ಗಿರೀಶ್‌ ನಾಶಿ, ಕಾಂಗ್ರೆಸ್‌ನ ವೆಂಕಟೇಶ್‌, ದಿವಾಕರ್‌ ಗೌಡ, ಸಿ.ವಿ. ರಾಜಪ್ಪ ಹಾಗೂ ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ| ಪುಣ್ಯವತಿ ನಾಗರಾಜ್‌ ಅವರು ಬಿಜೆಪಿ ಸೇರಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

c-t-ravi

ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು: ಸಿ.ಟಿ.ರವಿ

ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…

ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…

ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ

ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ

d-k-shi

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ

goa marriage

ಗೋವಾ ಸಮುದ್ರ ತೀರದಲ್ಲಿ ಮದುವೆಯಾಗುವ ಕನಸು ಕಾಣುತ್ತಿದ್ದವರಿಗೆ ಇನ್ನು ಹೆಚ್ಚು ಖರ್ಚು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

d-k-shi

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ

1-sad-sadsad

ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ

basavaraj bommai ramesh jarkiholi

ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್

ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಬೆಂಗಳೂರಿನಲ್ಲಿ ಅತ್ಯಧಿಕ ತಾಪಮಾನ ದಾಖಲು

ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ…

ಕೋವಿಡ್‌ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ

ಕೋವಿಡ್‌ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ ಪತ್ತೆ

MUST WATCH

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

ಹೊಸ ಸೇರ್ಪಡೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

Komal film undenama movie trailer

ಟೀಸರ್‌ ನಲ್ಲಿ ‘ಉಂಡೆನಾಮ’; ಕೋಮಲ್‌ ಕಮಾಲ್‌ ಗ್ಯಾರಂಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.