ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್
ರಾಜಕಾರಣಿಗಳ ಸ್ಥಿತಿ ಐಟಂ ಸಾಂಗ್ ರೀತಿ ಆಗಿದೆ..!
Team Udayavani, Jan 29, 2022, 12:38 PM IST
ಬೆಂಗಳೂರು :ಹೂ ಅಂಟಾವ ಮಾವ, ಉಹೂ ಅಂಟಾವ..! ರಾಜಕಾರಣಿಗಳ ಸ್ಥಿತಿ ಐಟಂ ಸಾಂಗ್ ನಂತಾಗಿದೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.
ಕಾಂಗ್ರೆಸ್-ಬಿಜೆಪಿ ಪಕ್ಷಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡು ಪಕ್ಷದ ಪಕ್ಷಾಂತರಿಗಳಿಗೆ ಟಾಂಗ್ ನೀಡಿದ್ದಾರೆ.
ರಾಜಕಾರಣಿಗಳ ಸ್ಥಿತಿ ಇವತ್ತು ಐಟಂ ಸಾಂಗ್ನಂತಾಗಿದೆ. ನಾವ್ ಯಾರ್ಗೂ ಫೋನೂ ಮಾಡಂಗಿಲ್ಲ, ಮಾತೂ ಆಡಂಗಿಲ್ಲ. ಮಾತಾಡಿದರೆ ಪಕ್ಷಾಂತರ ಎನ್ನುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಸಚಿವಸ್ಥಾನ ಆಕಾಂಕ್ಷಿಯಾಗಿರುವ ರಾಜುಗೌಡರಿಗೆ ಎರಡು ಬಾರಿ ಅವಕಾಶ ತಪ್ಪಿದೆ.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಅವರು ಪಕ್ಷಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹೇಳಿಕೆ ನೀಡಿದ್ದಾರೆ.