ಮನುಷ್ಯರ ನಡುವೆ 6 ಅಡಿ ಅಂತರವಿದ್ದರೂ ಸೋಂಕು ಹರಡಬಲ್ಲದು : ಅಮೆರಿಕ ತಜ್ಞರ ಎಚ್ಚರಿಕೆ
Team Udayavani, May 9, 2021, 8:00 PM IST
ವಾಷಿಂಗ್ಟನ್: ಕೊರೊನಾ ಗಾಳಿಯಿಂದ ಹರಡುವಂಥ ವೈರಾಣುವಾಗಿದ್ದು, ಮನುಷ್ಯರ ನಡುವೆ 6 ಅಡಿಯಷ್ಟು ಅಂತರವಿದ್ದರೂ ಅದು ಒಬ್ಬರಿಂದ ಮತ್ತೂಬ್ಬರಿಗೆ ಹರಡಬಲ್ಲದು ಎಂದು ಅಮೆರಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿ ದೊಡ್ಡ ಸರ್ಕಾರಿ ಸಂಸ್ಥೆಯೆನಿಸಿರುವ “ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರ’ (ಯುಎಸ್ಡಿಸಿಪಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಮೊದಲು ಮೂಗಿನಲ್ಲಿ ತೂರಿಕೊಂಡು ಬಾಯಿ – ಗಂಟಲು ನಡುವಿನ ಕಿರುನಾಲಗೆ ಹಾಗೂ ಅದರ ಮೇಲ್ಭಾಗದ ಮ್ಯೂಕಸ್ ಮೆಂಬ್ರೇನ್ನಲ್ಲಿ ಉಳಿದುಕೊಂಡು ಆನಂತರ ಶ್ವಾಸಕೋಶದೊಳಕ್ಕೆ ಇಳಿಯುತ್ತದೆ.
ನಿಜ ಹೇಳಬೇಕೆಂದರೆ ಆರು ಅಡಿಗಳ ಅಂತರ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಅಷ್ಟು ಅಂತರವಿದ್ದರೂ ಕೊರೊನಾ ವೈರಾಣುಗಳು ತ್ವರಿತವಾಗಿಯೇ ಒಬ್ಬರಿಂದ ಮತ್ತೂಬ್ಬರಿಗೆ ಹರಡಬಲ್ಲವು ಎಂದು ಯುಎಸ್ಡಿಸಿಪಿ ತಿಳಿಸಿದೆ. ಅಲ್ಲದೆ, ಗಾಳಿಯಲ್ಲಿ ಈ ವೈರಾಣುಗಳು ಕೆಲ ನಿಮಿಷಗಳಿಂದ ಗಂಟೆಗಟ್ಟಲೆ ಹಾರಾಡುತ್ತಾ ಇರಬಲ್ಲವು ಎಂದು ಅದು ಎಚ್ಚರಿಸಿದೆ.
ಇದನ್ನೂ ಓದಿ :ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ