ಇಂದು ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ ಸೋನಿಯಾ – ರಾಹುಲ್
Team Udayavani, Oct 3, 2022, 11:14 AM IST
ಬೆಂಗಳೂರು: ಇಂದು ಮಧ್ಯಾಹ್ನ 12.30ಕ್ಕೆ ಮೈಸೂರಿಗೆ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಆಗಮಿಸಲಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ತೆರಳಿ ರಾಹುಲ್ ಗಾಂಧಿ ಜತೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.
ಸೋನಿಯಾ ಆಗಮನ ಹಿನ್ನಲೆಯಲ್ಲಿ ಪಾದಯಾತ್ರೆ ಮುಗಿಸಿ ರಾಹುಲ್ ಗಾಂಧಿ ಕೊಡಗಿಗೆ ತೆರಳಲಿದ್ದಾರೆ.
ಅಕ್ಟೋಬರ್ 4 ಹಾಗೂ 5 ರಂದು ಪಾದಯಾತ್ರೆಗೆ ವಿರಾಮ ನೀಡಲಿದ್ದು, ಎರಡು ದಿನ ತಾಯಿ ಜೊತೆ ಕೊಡಗಿನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಾಲದ ಶಿಕ್ಷಕರ ಅಕ್ರಮ ನೇಮಕಕ್ಕೆ ಮರುಜೀವ ಕೊಟ್ಟ ಬಿಜೆಪಿ
ಅಕ್ಟೋಬರ್ 6 ರಂದು ಮಂಡ್ಯ ಜಿಲ್ಲೆಯ ಮಹದೇಶ್ವರಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದ್ದು, ಅಂದು ಮೇಲುಕೋಟೆಯಲ್ಲಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಕೆಲ ಹೊತ್ತು ಭಾಗಿಯಾಗುತ್ತಾರೆ. ಅಕ್ಟೋಬರ್ 7 ರಂದು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದು, ನಾಗಮಂಗಲದಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಆದಿ ಚುಂಚನಗಿರಿ ಮಠಕ್ಕೂ ಪ್ರಿಯಾಂಕಾ ಗಾಂಧಿ ಭೇಟಿ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲು