ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಸೆಪ್ಟೆಂಬರ್‌ ನಿಂದ ಉತ್ಪಾದನೆ ಪ್ರಾರಂಭ : RDIF, SII

Team Udayavani, Jul 13, 2021, 6:06 PM IST

Sputnik Vaccine in India Starts Production from September: RDIF, SII

ನವ ದೆಹಲಿ  :  ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ ಡಿ ಐ ಎಫ್), ರಷ್ಯಾದ ರಾಷ್ಟ್ರೀಯ ವಿತ್ತ ನಿಧಿ  ಮತ್ತು ಸೀರಮ್ ಇನ್‌ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ ಐ ಐ) ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸಲು  ಮುಂದಾಗಿದ್ದು,  ಎಸ್‌ ಐ ಐ ನ  ಸೌಲಭ್ಯಗಳಲ್ಲಿ ಮೊದಲ ಹಂತದ ಸ್ಪುಟ್ನಿಕ್ ಲಸಿಕೆಗಳನ್ನು ಸಪ್ಟೆಂಬರ್ ನಲ್ಲಿ ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಮತ್ತು ಸೀರಮ್ ಇನ್‌ ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ವರ್ಷಕ್ಕೆ 300 ಮಿಲಿಯನ್ ಗೂ ಹೆಚ್ಚಿನ ಪ್ರಮಾಣದ  ಸ್ಪುಟ್ನಿಕ್ ಲಸಿಕೆಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ಇದನ್ನೂ ಓದಿ : ದಿ. ಅಂಬರೀಷ ಅಂತಿಮ ಸಂಸ್ಕಾರ ವೆಚ್ಚದ ಮಾಹಿತಿ ಸರ್ಕಾರದ ಬಳಿ ಇಲ್ಲ: ಗಡಾದ ಆರೋಪ

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ನಂತರ  ತಂತ್ರಜ್ಞಾನ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ, ಎಸ್‌ ಐ ಐ ಈಗಾಗಲೇ ಗಮಲೇಯ ಕೇಂದ್ರದಿಂದ ಸೆಲ್ ಮತ್ತು ವೆಕ್ಟರ್ ಮಾದರಿಗಳನ್ನು ಸ್ವೀಕರಿಸಿದ್ದು, ಪ್ರಾಯೋಗಿಕ ಪ್ರಕ್ರಿಯೆ ಪ್ರಾರಂಭವಾಗಿದೆ  ಎಂದು ವರದಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ ಡಿ ಐ ಎಫ್ ನ ಕಾರ್ಯ ನಿರ್ವಹಣಾ ಅಧಿಕಾರಿ  ಕಿರಿಲ್ ಡಿಮಿಟ್ರಿವ್, ರಷ್ಯಾದ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗಾಗಿ ಆರ್‌ ಡಿ ಐ ಎಫ್ ಈ ಹಿಂದೆ ಭಾರತದ ಅನೇಕ  ಔಷಧೀಯ ಕಂಪನಿಗಳೊಂದಿಗೆ (ಗ್ಲ್ಯಾಂಡ್ ಫಾರ್ಮಾ, ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯಾ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ, ವಿರ್ಚೋ ಬಯೋಟೆಕ್ ಮತ್ತು ಮೊರೆಪೆನ್) ಒಪ್ಪಂದಗಳನ್ನು ಮಾಡಿಕೊಂಡಿತ್ತು.  ಈ ಕಾರ್ಯತಂತ್ರದ ಸಹಭಾಗಿತ್ವವು ನಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ. ಸದ್ಯ, ಲಸಿಕೆ ಉತ್ಪಾದನೆಗಾಗಿ ತಂತ್ರಜ್ಞಾನ ವರ್ಗಾವಣೆ ಕಾರ್ಯ ನಡೆಯುತ್ತಿದ್ದು, ಮೊದಲ ಹಂತದ ಲಸಿಕೆಗಳುನ್ನು ಮುಂಬರುವ ತಿಂಗಳುಗಳಲ್ಲಿ ಎಸ್‌ ಐ ಐ ಜೊತೆ ಜಂಟಿಯಾಗಿ ಉತ್ಪಾದಿಸಲಾಗುವುದು ಎಂದು ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.

ಇನ್ನು, ಸೀರಮ್ ಇನ್‌ ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅದರ್ ಪೂನವಾಲ ಈ ಬಗ್ಗೆ ಪ್ರತಿಕ್ರಿಯಸಿ,  ಸ್ಪುಟ್ನಿಕ್ ಲಸಿಕೆ ತಯಾರಿಸಲು ಆರ್‌ ಡಿ ಐ ಎಫ್‌ ನೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ. ಪ್ರಾಯೋಗಿಕ ಲಸಿಕೆಗಳನ್ನು ಮುಂಬರುವ ತಿಂಗಳುಗಳಲ್ಲಿ ಲಭ್ಯವಾಗುವಂತೆ ನಿರೀಕ್ಷಿಸಲಾಗಿದೆ ಎಂದಿದ್ದಾರೆ

ದೇಶ ಹಾಗೂ ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಸ್ಪುಟ್ನಿಕ್ ಲಸಿಕೆ ಸಹಕರಿಸಲಿದೆ. ಉತ್ತಮ ಪರಿಣಾಮಕಾರಿತ್ವವನ್ನು ಈ ಲಸಿಕೆ ಹೊಂದಿದೆ. ಶೀಘ್ರದಲ್ಲೇ ಲಸಿಕೆಗಳು ಬಳಕೆಗೆ ಸಿಗುವಂತೆ ಮಾಡಲು ಸಂಸ್ಥೆ ಪ್ರಯತ್ನಿಸುತ್ತದೆ. ವರ್ಷಕ್ಕೆ 300 ಮಿಲಿಯನ್ ಗೂ ಹೆಚ್ಚಿನ ಪ್ರಮಾಣದ  ಸ್ಪುಟ್ನಿಕ್ ಲಸಿಕೆಗಳನ್ನು ಭಾರತದಲ್ಲಿ ಉತ್ಪಾದಿಸುವ ಗುರಿ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ದೇಶದ ಮೊದಲ ಕೋವಿಡ್ ಸೋಂಕಿತೆಗೆ ಈಗ ಮತ್ತೆ ಮಹಾಮಾರಿ ಅಟ್ಯಾಕ್..!

ಟಾಪ್ ನ್ಯೂಸ್

21nirani

ದಲಿತ ಯುವಕನ ಹತ್ಯೆ: ಆರೋಪಿಗಳಿಗೆ ಕಠಿಣ ಕಾನೂನು ಕ್ರಮ: ಸಚಿವ ನಿರಾಣಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

20death

ಕುಣಿಗಲ್‌: ಪ್ರತ್ಯೇಕ ಪ್ರಕರಣ ಇಬ್ಬರು ನೇಣುಬಿಗಿದು ಆತ್ಮಹತ್ಯೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಲಾಭ ಗಳಿಸಿದ ಷೇರು ಯಾವುದು…

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಮೇ.27ರಂದು ಲಾಭ ಗಳಿಸಿದ ಷೇರು ಯಾವುದು…

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

ತೆಲಂಗಾಣ: 17 ಮಹಿಳೆಯರ ಹತ್ಯೆ, ಸರಣಿ ಹಂತಕ ಶ್ರೀನಿಗೆ ಜೀವಾವಧಿ ಶಿಕ್ಷೆ

ತೆಲಂಗಾಣ: 17 ಮಹಿಳೆಯರ ಹತ್ಯೆ, ಸರಣಿ ಹಂತಕ ಶ್ರೀನಿಗೆ ಜೀವಾವಧಿ ಶಿಕ್ಷೆ

1-dsfsdfsd

ಅಕ್ರಮ ಆಸ್ತಿ ಗಳಿಕೆ: ಹರಿಯಾಣ ಮಾಜಿ ಸಿಎಂ ಚೌಟಾಲಾಗೆ 4 ವರ್ಷಗಳ ಜೈಲು

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

21nirani

ದಲಿತ ಯುವಕನ ಹತ್ಯೆ: ಆರೋಪಿಗಳಿಗೆ ಕಠಿಣ ಕಾನೂನು ಕ್ರಮ: ಸಚಿವ ನಿರಾಣಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್‌ ಭೇಟಿ: ತರಾಟೆ

ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್‌ ಭೇಟಿ: ತರಾಟೆ

50 ಸಾವಿರ ಪುಸ್ತಕ ಸಂಗ್ರಹಿಸುವ ಗುರಿ; ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌

50 ಸಾವಿರ ಪುಸ್ತಕ ಸಂಗ್ರಹಿಸುವ ಗುರಿ; ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.