ನಾನು ಸೈಡ್‌ಲೈನ್ ಆಗಿಲ್ಲ! ನನ್ನ ಜನಪ್ರೀಯತೆ ಕಸಿಯಲು ಯಾರಿಂದಲೂ ಸಾಧ್ಯವಿಲ್ಲ: ರಾಮುಲು
Team Udayavani, Jan 3, 2021, 7:11 PM IST
ಬಾಗಲಕೋಟೆ: ನಾನು ಇಂದು ಏಕಾಏಕಿ ನಾಯಕನಾಗಿ ಬೆಳೆದವನಲ್ಲ. ಕೆಳ ಮಟ್ಟದ ರಾಜಕಾರಣ ಮಾಡಿಕೊಂಡು ಬೆಳೆದಿದ್ದೇನೆ. ರಮೇಶ ಜಾರಕಿಹೊಳಿ ಬಿಜೆಪಿಗೆ ಬಂದ ಮೇಲೆ ನಾನು ಸೈಡ್‌ಲೈನ್ ಆಗಿಲ್ಲ. ನನ್ನ ಜನಪ್ರಿಯತೆ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾದಾಮಿಯಿಂದ ಮತ್ತೆ ಸ್ಪರ್ಧೆ ಮಾಡಬೇಕು ಎಂಬುದು ನಮ್ಮ ಕಾರ್ಯಕರ್ತರ ಒತ್ತಾಸೆ. ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಸಿದ್ಧನಿದ್ದೇನೆ. ಶ್ರೀರಾಮುಲು ಉಪ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ಆಶಯ. ನೋಡೋಣ, ನಮ್ಮ ನಾಯಕರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ: ಸಿದ್ದರಾಮಯ್ಯ ಅವರು ಬೆಳಗಾದರೆ ತಾವು ಮತ್ತೆ ಸಿಎಂ ಆಗಬೇಕು ಅಂತಿದ್ದಾರೆ. ಅತ್ತ ಡಿ.ಕೆ. ಶಿವಕುಮಾರ ಭವಿಷ್ಯ ಹೇಳಲು ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಕನಸು-ಮನಸ್ಸಿನಲ್ಲೂ ಮುಖ್ಯಮಂತ್ರಿಯಾಗಲ್ಲ. ಶಿವಕುಮಾರ ಅವರ ಭವಿಷ್ಯಗಳೆಲ್ಲ ಸುಳ್ಳಾಗುತ್ತಿವೆ. ಅವರು ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಂಡರೆ ಸಾಕು. ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ ಎಂದರು.
ಇದನ್ನೂ ಓದಿ:ಕರಾಚಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ 11 ಕಾರ್ಮಿಕರನ್ನು ಅಪಹರಿಸಿ ಭೀಕರ ಕೊಲೆ!
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಜಾತಿ ಗಣತಿ ವರದಿ ಎಲ್ಲಿ, ಯಾರಿಗೆ ಕೊಟ್ಟಿದ್ದಾರೆ ಗೊತ್ತಿಲ್ಲ. ಆಯೋಗದ ವರದಿ ಕೊಡುವ ವೇಳೆ ಅಧ್ಯಕ್ಷರ ಅವಧಿಯೇ ಮುಗಿದಿತ್ತು. ವರದಿ ನಮ್ಮ ಕೈ ಸೇರಿಲ್ಲ. ವರದಿ ತಲುಪಿದ ನಂತರ ಸಮೀಕ್ಷೆ ಪ್ರಕಾರ ತಕ್ಷಣವೇ ಘೋಷಣೆ ಮಾಡುತ್ತೇವೆ
– ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್
ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್
ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ
ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ
ಕೋವಿಡ್ ನಿಯಮ ಉಲ್ಲಂಘನೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸೇರಿ 29 ಮಂದಿಗೆ ಸಮನ್ಸ್