ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 534 ಅಂಕ ಏರಿಕೆ, ನಿಫ್ಟಿ 17,691; ವಹಿವಾಟು ಅಂತ್ಯ
ಎಚ್ ಯುಎಲ್, ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್ ಹಾಗೂ ಟೈಟಾನ್ ಷೇರುಗಳು ನಷ್ಟ ಕಂಡಿವೆ.
Team Udayavani, Oct 4, 2021, 4:34 PM IST
ಮುಂಬಯಿ: ಸತತ ಎರಡು ದಿನಗಳ ಕಾಲ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆ ವಹಿವಾಟು ಸೋಮವಾರ(ಅಕ್ಟೋಬರ್ 04) ಸಂವೇದಿ ಸೂಚ್ಯಂಕ 534 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ದೇಶಾದ್ಯಂತ ಬಿಜೆಪಿ ಸರಕಾರ ಭಯದ ವಾತಾವರಣ ಸೃಷ್ಟಿಸಿದೆ:ಶಿವಾನಂದ ಕಡತೋಕ
ಬಾಂಬೆ ಷೇರು ಸಂವೇದಿ ಸೂಚ್ಯಂಕ 533.74 ಅಂಕಗಳಷ್ಟು ಏರಿಕೆಯಾಗಿದ್ದು, 59,299.32 ಅಂಕಗಳ ವಹಿವಾಟಿನೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 159.20 ಅಂಕ ಏರಿಕೆಯಾಗಿದ್ದು, 17,691.25 ಅಂಕಗಳ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯೊಂದಿಗೆ ಎನ್ ಟಿಪಿಸಿ, ಬಜಾಜ್ ಫಿನ್ ಸರ್ವ್, ಎಸ್ ಬಿಐ, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಡಾ.ರೆಡ್ಡೀಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಆಟೋ, ಎಚ್ ಯುಎಲ್, ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್ ಹಾಗೂ ಟೈಟಾನ್ ಷೇರುಗಳು ನಷ್ಟ ಕಂಡಿವೆ.
ಇಂದು ಬೆಳಗ್ಗೆಯೂ ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ(ಅಕ್ಟೋಬರ್ 4) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 350 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್