ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು


Team Udayavani, Sep 21, 2021, 1:49 PM IST

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ವಾಡಿ (ಚಿತ್ತಾಪುರ): ಸೀತಾಫಲ ಹಣ್ಣಿನ ಹೆಸರು ಕೇಳಿದರೆ ಸಾಕು ನಾಲಿಗೆ ಒದ್ದೆಯಾಗಿ ತುಟಿಗಳು ರುಚಿಯೇರುತ್ತವೆ. ಮೈತುಂಬಾ ಕಣ್ಣು ಹೊದ್ದು ಹೃದಯದೊಳಗೆ ಸಿಹಿ ಬೆಣ್ಣೆ ಅಡಗಿಸಿಟ್ಟುಕೊಂಡ ಈ ಹಣ್ಣು ಮೂಲತಃ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಇದರ ಬೇರುಗಳು ಕಂಡು ಬರುತ್ತವೆ. ರಾಜ್ಯದ ಅರಣ್ಯ ಇಲಾಖೆಯೂ ಕೂಡ ಅದರ ಬೀಜಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಹರಡುವ ಮೂಲಕ ಸೀತಾಫಲದ ಕೃಷಿ ಕೈಗೊಂಡಿದ್ದರಿಂದ ನಮ್ಮಲ್ಲಿ ಕಡಿಮೆ ದರದಲ್ಲಿ ರುಚಿಯಾದ ಹಣ್ಣುಗಳು ನಮ್ಮ ಕೈಗೆಟಕುತ್ತಿವೆ.

ಚಿತ್ತಾಪುರ ತಾಲೂಕಿನ ಗುಡ್ಡಗಾಡು ಪ್ರದೇಶಗಳಲ್ಲೂ ಸೀತಾಫಲ ಹಣ್ಣಿನ ಕೃಷಿ ಸಾಗಿದ್ದು, ಯಾಗಾಪುರ, ಶಿವನಗರ ತಾಂಡಾ, ಬೆಳಗೇರಾ, ದಂಡಗುಂಡ, ಅಣ್ಣಿಕೇರಾ ಹಾಗೂ ಲಾಡ್ಲಾಪುರ ಗ್ರಾಮಗಳಲ್ಲಿ ಈ ಹಣ್ಣುಗಳು ಅರಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಗುಡ್ಡ ಬೆಟ್ಟಗಳಿಂದ ಕೂಡಿರುವ ಈ ಅರಣ್ಯ ಪರಿಸರದಲ್ಲಿ ಸೀತಾಫಲದ ಸಾವಿರಾರು ಗಿಡಗಳನ್ನು ಕಾಣಬಹುದಾಗಿದೆ. ಕಲ್ಲು ಬಂಡೆಗಳ ಕಾವಲಿನಲ್ಲಿ ಕಾಲು ದಾರಿ ಸೀಳಿ ಸಾಗಿದರೆ ಸಿಹಿಯಾದ ಹಣ್ಣುಗಳು ನಿಮ್ಮ ಕೈಗಳಿಗೆ ತಾಕುತ್ತವೆ. ಗುಡ್ಡಗಳೇ ಇಲ್ಲಿ ಸಿಹಿ ಹಂಚಲು ಸಾಲುಗಟ್ಟಿ ನಿಂತಿವೆಯಾ ಎಂಬ ಭಾವ ಮೂಡುತ್ತದೆ.

ಇದನ್ನೂ ಓದಿ : ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ಮಳೆಗಾಲದಲ್ಲಿ ಹಸಿರು ಹೊದ್ದು ನಿಂತ ಇಲ್ಲಿನ ಗುಡ್ಡಗಳು ಅಕ್ಷರಶಃ ಮಲೆನಾಡ ನೋಟ ಬೀರುತ್ತವೆ. ಗುಡ್ಡದೂರಿನ ಜನರೇ ವರ್ಷಕ್ಕೊಮ್ಮೆ ಹಣ್ಣಿನ ವ್ಯಾಪಾರಿಗಳಾಗಿ ಪರಿವರ್ತನೆಯಾಗುತ್ತಾರೆ. ಸೀತಾಫಲದ ಅರಣ್ಯ ಬನವನ್ನು ಆಸಕ್ತರು ಗುತ್ತಿಗೆ ಪಡೆದು ಗಿಡಗಳ ಹಕ್ಕು ತಮ್ಮದಾಗಿಸಿಕೊಳ್ಳುತ್ತಾರೆ. ಹಣ್ಣುಗಳನ್ನು ಕೊಯ್ದು ಪಟ್ಟಣ ಪ್ರದೇಶಗಳಿಗೆ ಸಾಗಿಸುತ್ತಾರೆ. ವಿವಿಧ ತಾಂಡಾಗಳ ಲಂಬಾಣಿ ಸಮುದಾಯದ ಮಹಿಳೆಯರೇ ಹೆಚ್ಚಾಗಿ ಸೀತಾಫಲ ಮಾರಾಟಕ್ಕೆ ಮುಂದಾಗುತ್ತಾರೆ. ಬೆಳ್ಳಂಬೆಳಗ್ಗೆ ಗುಡ್ಡದತ್ತ ನಡೆದು ಹಣ್ಣಾದ ಫಲಗಳನ್ನು ಬುಟ್ಟಿಗೆ ಹಾಕುತ್ತಾರೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಎರಡು ತಿಂಗಳು ಮಾತ್ರ ಮಾರುಕಟ್ಟೆಗಳಲ್ಲಿ ಸೀತಾಫಲದ ದರ್ಬಾರ್ ನಡೆಯುತ್ತದೆ.

ಸೀತಫಲದಲ್ಲಿ ಔಷಧೀಯ ಗುಣ:
ಪ್ರತಿಯೊಂದು ಹಣ್ಣು ಮತ್ತು ಸಸ್ಯ ಪ್ರಬೇಧಗಳಲ್ಲಿ ಔಷಧೀಯ ಗುಣವಿರುತ್ತದೆ. ಅಂತೆಯೇ ಈ ಸೀತಫಲವೂ ವಿಶೇಷ ಔಷಧೀಯ ಗುಣ ಹೊಂದಿದೆ. ಇದರ ತೊಗಟೆ ಜಜ್ಜಿ ಬಿಸಿ ನೀರಿನಲ್ಲಿ ಬತ್ತಿಸಿ ಜೇನು ತುಪ್ಪದೊಂದಿಗೆ ಸೇವಿಸಿದರೆ ಜ್ವರ, ಕೆಮ್ಮು, ಉಬ್ಬಸ ಗುಣವಾಗುತ್ತದೆ ಎನ್ನಲಾಗಿದೆ. ಸಿತಾಫಲದ ಎಲೆಗಳನ್ನು ನುಣ್ಣಗೆ ಅರೆದು ಹುಣ್ಣು, ಗಾಯಗಳು, ಕುರು, ಗಡ್ಡೆ (ಗ್ರಂಥಿ)ಗಳಿಗೆ ಹಚ್ಚಿದರೆ ವಾಸಿಯಾಗುತ್ತವೆ. ಪಚನಕ್ರೀಯೆ ಹೆಚ್ಚಿಸಲು ಈ ಹಣ್ಣು ಉಪಕಾರಿಯಾಗಿದೆ. ಇದರ ಬೀಜ ಮತ್ತು ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿವೆ. ಅತ್ಯಂತ ರುಚಿಯಾದ ಮತ್ತು ಆರೋಗ್ಯಕರವಾದ ಈ ಹಣ್ಣು ಅಡಿಯಿಂದ ಮುಡಿಯವರೆಗೂ ಯಾವೂದೇ ಸಮಸ್ಯೆಯಿದ್ದರೂ ಸೀತಾಫಲ ಅದನ್ನು ಹೋಗಲಾಡಿಸುತ್ತದೆ. ಶೇ.70 ರಷ್ಟು ತೇವಾಂಶವನ್ನು ಹೊಂದಿರುವ ಹೈಡ್ರೇಟಿಂಗ್ ಹಣ್ಣುಗಳಾಗಿದ್ದು, 100 ಗ್ರಾಂ. ಸೀತಾಫಲದಲ್ಲಿ 80-100 ಕ್ಯಾಲೊರಿ ಪೌಷ್ಠಿಕಾಂಶ ಇರುತ್ತದೆ. ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚಿದೆ ಎಂಬುದು ಆಯೂರ್ವೇದ ವೈದ್ಯರ ಅಭಿಪ್ರಾಯವಾಗಿದೆ.

– ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

panchamasali

ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್‌ ದ್ವಾರಕಾನಾಥ್‌

cm

ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಪ್ರವಾಸಿ ಕ್ಷೇತ್ರಗಳ ವರ್ಚುವಲ್‌ 3ಡಿ ಸಿದ್ಧಪಡಿಸಿ: ಡಿಸಿ

ಪ್ರವಾಸಿ ಕ್ಷೇತ್ರಗಳ ವರ್ಚುವಲ್‌ 3ಡಿ ಸಿದ್ಧಪಡಿಸಿ: ಡಿಸಿ

ಕಾರ್ಕಳ: ಬೀದಿನಾಯಿ ನಿಯಂತ್ರಣಕ್ಕೆ ಆರ್ಥಿಕ ಕೊರತೆ!

ಕಾರ್ಕಳ: ಬೀದಿನಾಯಿ ನಿಯಂತ್ರಣಕ್ಕೆ ಆರ್ಥಿಕ ಕೊರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.