Supreme court ಯೂಟ್ಯೂಬ್ ಲೈವ್ ಸ್ಟ್ರೀಮ್ ಚಾನೆಲ್ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!
ಯೂಟ್ಯೂಬ್ ಚಾನೆಲ್ ಲಿಂಕ್ ಅನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಿ ನಿಷ್ಕ್ರಿಯಗೊಳಿಸಿದೆ.
Team Udayavani, Sep 20, 2024, 1:23 PM IST
ನವದೆಹಲಿ: ಸಂಭಾವ್ಯ ಭದ್ರತಾ ಉಲ್ಲಂಘನೆಯಲ್ಲಿ(Security Breach) ಸುಪ್ರೀಂಕೋರ್ಟ್ ನ ಅಧಿಕೃತ ಯೂಟ್ಯೂಬ್ (YouTube) ಚಾನೆಲ್ ಅನ್ನು ಶುಕ್ರವಾರ (ಸೆ.20) ಹ್ಯಾಕ್ ಮಾಡಿ, ಅಮೆರಿಕ ಮೂಲದ ರಿಪ್ಪಲ್ ಲ್ಯಾಬ್ಸ್ ಡೆವಲಪ್ ಮಾಡಿರುವ ಕ್ರಿಪ್ಟೋಕರೆನ್ಸಿ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಘಟನೆ ನಡೆದಿದೆ.
ಸುಪ್ರೀಂಕೋರ್ಟ್ ಯೂಟ್ಯೂಬ್ ನಲ್ಲಿ ಕಲಾಪದ ನೇರಪ್ರಸಾರದ ಬದಲು XRP ವಿಡಿಯೋಗಳನ್ನು ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದೆ. ಯೂಟ್ಯೂಬ್ ಚಾನೆಲ್ ನಲ್ಲಿ ಬ್ರಾಡ್ ಗಾರ್ಲಿಂಗ್ ಹೌಸ್ ಹೆಸರಿನಲ್ಲಿ ಖಾಲಿ ವಿಡಿಯೋವನ್ನು ಪ್ರದರ್ಶಿಸಿ, Ripple Responds To The SEC’s $ 2 Billion Fine! XRP price Prediction” ಎಂದು ನಮೂದಿಸಿದೆ.
ಯೂಟ್ಯೂಬ್ ಚಾನೆಲ್ ಹ್ಯಾಕ್ ಆದ ಘಟನೆ ಕುರಿತು ಸುಪ್ರೀಂಕೋರ್ಟ್ ಅಡ್ಮಿನಿಸ್ಟ್ರೇಶನ್ ತನಿಖೆ ನಡೆಸುತ್ತಿದೆ ಎಂದು Bar and Bench ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಏತನ್ಮಧ್ಯೆ ಯೂಟ್ಯೂಬ್ ಚಾನೆಲ್ ಲಿಂಕ್ ಅನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಿ ನಿಷ್ಕ್ರಿಯಗೊಳಿಸಿದೆ.
2018ರಲ್ಲಿ ಎಲ್ಲಾ ಸಾಂವಿಧಾನಿಕ ಪೀಠದಲ್ಲಿನ ವಿಚಾರಣೆಯನ್ನು ಲೈವ್ ಸ್ಟ್ರೀಮ್ ಮಾಡಲು ಸುಪ್ರೀಂಕೋರ್ಟ್ ನಿರ್ಧರಿಸಿದ್ದ ನಂತರ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಿರುವ ಘಟನೆ ನಡೆದಿದೆ.
ಹ್ಯಾಕರ್ಸ್ ಗಳು ಬ್ರಾಡ್ ಗಾರ್ಲಿಂಗ್ ಹೌಸ್ ಸಿಇಒ ರೀತಿ ಸೋಗು ಹಾಕುವುದನ್ನು ತಡೆಯಲು ವಿಫಲವಾಗಿದ್ದಕ್ಕೆ ರಿಪ್ಪಲ್ ಸಂಸ್ಥೆ ಯೂಟ್ಯೂಬ್ ಮೇಲೆ ಮೊಕದ್ದಮೆ ಹೂಡಿತ್ತು. ಅಮೆರಿಕ ಮೂಲದ ಈ ಸಂಸ್ಥೆ ಕ್ರಿಪ್ಟೋಕರೆನ್ಸಿ ಎಕ್ಸ್ ಆರ್ ಪಿ ವಿನಿಮಯ ಜಾಲವನ್ನು ಹೊಂದಿದ್ದು, ಅಂತಾರಾಷ್ಟ್ರೀಯವಾಗಿ ಜನರು ಹಣ ಕಳುಹಿಸಲು ಈ ಕ್ರಿಪ್ಟೋಕರೆನ್ಸಿ ಬಳಸುವುದು ಸಂಸ್ಥೆಯ ಮುಖ್ಯ ಗುರಿಯಾಗಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್
EVM ಬಗ್ಗೆ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಚುನಾವಣ ಆಯೋಗ ಸ್ಪಷ್ಟನೆ ನೀಡಲೇಬೇಕು: ಸಿಬಲ್
Salman Khan ವಿರುದ್ದದ ಸೇಡು? ..; ಎಲ್ಲಾ ಕೋನಗಳಲ್ಲಿ ತನಿಖೆ ಎಂದ ಮುಂಬಯಿ ಪೊಲೀಸರು
Agra; 3 ದಿನ ಒತ್ತೆಯಾಳಾಗಿಟ್ಟು ಡ್ಯಾನ್ಸರ್ ಮೇಲೆ ಅತ್ಯಾ*ಚಾರಗೈದ ಇವೆಂಟ್ ಮ್ಯಾನೇಜರ್
Miracle: 15 ಅಡಿ ಆಳದ ಬಾವಿಗೆ ಬಿತ್ತು ನವದಂಪತಿಯ ಕಾರು; ಬದುಕಿ ಬಂದಿದ್ದೇ ಪವಾಡ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.