
ಸುಶಾಂತ್ ಕೇಸ್ ಸಿಬಿಐಗೆ; ಬಿಹಾರ ಐಪಿಎಸ್ ಅಧಿಕಾರಿ ಕ್ವಾರಂಟೈನ್ ನಿಂದ ರಿಲೀಸ್!
ಮುಂಬೈ ಪೊಲೀಸರ ವಿರುದ್ಧ ಬಿಹಾರ ಪೊಲೀಸರು ಹಲವಾರು ಆರೋಪ ಹೊರಿಸಿದ್ದರು.
Team Udayavani, Aug 7, 2020, 10:42 AM IST

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಆಗಮಿಸಿದ್ದ ಬಿಹಾರ ಐಪಿಎಸ್ ಅಧಿಕಾರಿ ವಿನಯ್ ತಿವಾರಿಯನ್ನು ಬಿಎಂಸಿ(ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್) ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ ಮಾಡಿದ್ದರು. ಇದೀಗ ತಿವಾರಿ ಅವರನ್ನು ಶುಕ್ರವಾರ ಕ್ವಾರಂಟೈನ್ ನಿಂದ ಬಿಡುಗಡೆ ಮಾಡಿ ಆಗಸ್ಟ್ 8ಕ್ಕೆ ಪಾಟ್ನಾಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಎರಡು ದಿನದ ನಂತರ ಮುಂಬೈ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬೈ ಪೊಲೀಸರ ವಿರುದ್ಧ ಬಿಹಾರ ಪೊಲೀಸರು ಹಲವಾರು ಆರೋಪ ಹೊರಿಸಿದ್ದರು. ಐಪಿಎಸ್ ಅಧಿಕಾರಿ ತಿವಾರಿ ಅವರನ್ನು ಕ್ವಾರಂಟೈನ್ ಅಲ್ಲ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಬಿಹಾರ ಪೊಲೀಸರು ದೂರಿದ್ದರು.
ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಪ್ರಕಟಣೆ ಪ್ರಕಾರ, ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರಿಗೆ ಮುನ್ಸಿಪಲ್ ಕಮಿಷನರ್ ಅವರಿಗೆ ಹೋಮ್ ಕ್ವಾರಂಟೈನ್ ನಿಂದ ವಿನಾಯ್ತಿ ನೀಡಿದ್ದು, ಅವರಿಗೆ ಪಾಟ್ನಾಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದೆ.
माननीय सर्वोच्च न्यायालय की टिप्पणी के बाद बिहार के पुलिस मुख्यालय ने BMC के आयुक्त को दुबारा पत्र लिखकर अपने IPS अधिकारी विनय तिवारी को मुक्त करने के लिए कल अनुरोध किया था जिसे स्वीकार करते हुए विनय को मुक्त किया गया है.वे आज शाम को पटना लौट रहे हैं.BMC को धन्यवाद !
— IPS Gupteshwar Pandey (@ips_gupteshwar) August 7, 2020
ಈ ಪ್ರಕಟಣೆ ಬೆನ್ನಲ್ಲೇ ಬಿಹಾರ ಪೊಲೀಸ್ ಅಧಿಕಾರಿ ಗುಪ್ತೇಶ್ವರ್ ಪಾಂಡೆ ಟ್ವೀಟ್ ಮಾಡಿದ್ದು, ಗೌರವಾನ್ವಿತ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಬಿಹಾರ ಪೊಲೀಸ್ ಇಲಾಖೆ ನಿನ್ನೆ ಬಿಎಂಸಿ ಕಮಿಷನರ್ ಗೆ ಪತ್ರ ಬರೆದು, ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ನಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಇಂದು (ಆಗಸ್ಟ್ 07-2020) ಬಿಡುಗಡೆಯಾಗಿದ್ದು, ಸಂಜೆಯೊಳಗೆ ಪಾಟ್ನಾ ತಲುಪುವ ಸಾಧ್ಯತೆ ಇದೆ. ಧನ್ಯವಾದಗಳು ಬಿಎಂಸಿ” ಎಂದು ತಿಳಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Tragic: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನವ ವಿವಾಹಿತರು ಸೇರಿ ನಾಲ್ವರು ಸಜೀವ ದಹನ

Chennai: ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ; ಮಹಿಳೆಗೆ ಕಿರುಕುಳ ನೀಡಿದ ಟೆಕ್ಕಿ ಬಂಧನ

Yamuna; ಈಜಿ ದಾಖಲೆ- ಕೇವಲ 11 ನಿಮಿಷದಲ್ಲಿ ಯಮುನಾ ನದಿಯನ್ನು ದಾಟಿದ ಬಾಲಕಿ!

Pushpa 2 ಕಲಾವಿದರಿದ್ದ ಬಸ್ ಅಪಘಾತ: ಹಲವರಿಗೆ ಗಾಯ