ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್ : ಕೊಹ್ಲಿ, ರೋಹಿತ್ ಶರ್ಮ ಪ್ರಗತಿ
Team Udayavani, Mar 25, 2021, 7:00 AM IST
ದುಬಾೖ: ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮ ಮೇಲೇರಿದ್ದಾರೆ. ಭಾರತ-ಇಂಗ್ಲೆಂಡ್ ಸರಣಿ ಬಳಿಕ ಬುಧವಾರ ಇದನ್ನು ಪರಿಷ್ಕರಿಸಲಾಯಿತು.
ಟಿ20 ದ್ವಿಪಕ್ಷೀಯ ಸರಣಿಯೊಂದ ರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಸ್ಥಾಪಿಸಿದ ವಿರಾಟ್ ಕೊಹ್ಲಿ ಒಂದು ಸ್ಥಾನ ನೆಗೆದು ನಾಲ್ಕಕ್ಕೆ ಏರಿದರು. ಅವರೀಗ ಟಾಪ್-10 ಯಾದಿಯಲ್ಲಿರುವ ಭಾರತದ ಅಗ್ರ ಬ್ಯಾಟ್ಸ್‌ಮನ್ ಆಗಿದ್ದಾರೆ. ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೆ.ಎಲ್. ರಾಹುಲ್ ಐದಕ್ಕೆ ಇಳಿದರು.
ಅಂತಿಮ ಪಂದ್ಯದಲ್ಲಿ 34 ಎಸೆತಗಳಿಂದ 64 ರನ್ ಬಾರಿಸಿದ ರೋಹಿತ್ ಶರ್ಮ 3 ಸ್ಥಾನಗಳ ನೆಗೆತ ಕಂಡಿದ್ದಾರೆ. ಅವರಿಗೀಗ 14ನೇ ಸ್ಥಾನ. ಶ್ರೇಯಸ್ ಅಯ್ಯರ್ ಜೀವನಶ್ರೇಷ್ಠ 26ನೇ, ರಿಷಭ್ ಪಂತ್ 69ನೇ ಸ್ಥಾನ ತಲುಪಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ 21 ಸ್ಥಾನ ಜಿಗಿದು 24ಕ್ಕೆ ಬಂದು ನಿಂತಿದ್ದಾರೆ.