ಟಿ20 ನಂ.3: ಆತ್ಮವಿಶ್ವಾಸದಲ್ಲಿ ಟೀಮ್‌ ಇಂಡಿಯಾ : ಇಂದು ತೃತೀಯ ಮುಖಾಮುಖೀ

Team Udayavani, Mar 16, 2021, 6:40 AM IST

ಟಿ20 ನಂ.3: ಆತ್ಮವಿಶ್ವಾಸದಲ್ಲಿ ಟೀಮ್‌ ಇಂಡಿಯಾ : ಇಂದು ತೃತೀಯ ಮುಖಾಮುಖೀ

ಅಹ್ಮದಾ ಬಾದ್: ಟೀಮ್‌ ಇಂಡಿಯಾ ತುಂಬು ಆತ್ಮ ವಿಶ್ವಾಸದಲ್ಲಿದೆ. ಇಂಗ್ಲೆಂಡ್‌ ಎದುರಿನ ದ್ವಿತೀಯ ಟಿ20 ಪಂದ್ಯದಲ್ಲಿ ಆಚರಿಸಿದ ವಿಜಯೋತ್ಸವವೇ ಇದಕ್ಕೆ ಕಾರಣ. ಇದರಿಂದ ತಂಡದ ಉತ್ಸಾಹ ನೂತನ ಎತ್ತರ ತಲುಪಿದೆ. ಇದೇ ಹುರುಪಿನಲ್ಲಿ ಮಂಗಳವಾರ ಮೂರನೇ ಮುಖಾಮುಖೀಗೆ ಅಣಿಯಾಗಿದ್ದು, ಗೆಲುವಿನ ಲಯದಲ್ಲಿ ಸಾಗುವ ಸೂಚನೆಯನ್ನು ರವಾನಿಸಿದೆ. ಇನ್ನೊಂದೆಡೆ ಮಾರ್ಗನ್‌ ಬಳಗ ಗೆಲುವಿನ ಮಾರ್ಗಕ್ಕೆ ಮರಳಲು ಸ್ಕೆಚ್‌ ಹಾಕುತ್ತಿದೆ. ಸಮಬಲರ ಕಾದಾಟ ಸಹಜವಾಗಿಯೇ ಟಿ20 ರೋಮಾಂಚನವನ್ನು ಹೆಚ್ಚಿಸಿದೆ.

ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗ ಗಳಲ್ಲೂ ವೈಫ‌ಲ್ಯ ಅನುಭವಿಸಿ 8 ವಿಕೆಟ್‌ ಸೋಲಿಗೆ ತುತ್ತಾಗಿದ್ದ ಭಾರತ ಮರು ಪಂದ್ಯದಲ್ಲೇ ಗೆಲುವಿನ ಹಾದಿ ಕಂಡುಕೊಂಡದ್ದು ಧನಾತ್ಮಕ ಬೆಳವಣಿಗೆ. ಇಶಾನ್‌ ಕಿಶನ್‌ ಮೊದಲ ಪಂದ್ಯದಲ್ಲೇ ನಿರ್ಭೀತ ಬ್ಯಾಟಿಂಗ್‌ ನಡೆಸಿದ್ದು, ಸೊನ್ನೆ ಸುತ್ತಿದ ಬಳಿಕ ಕೊಹ್ಲಿ ನೈಜ ಆಟಕ್ಕೆ ಕುದುರಿದ್ದು, ಬೌಲಿಂಗ್‌ನಲ್ಲಿ ನಿಯಂತ್ರಣ ಸಾಧಿಸಿದ್ದೆಲ್ಲ ಭಾರತದ ಗೆಲುವಿನ ಪ್ರಮುಖ ಅಂಶಗಳಾಗಿದ್ದವು.

ರೋಹಿತ್‌ ಬರುವರೇ?
ಟೀಮ್‌ ಇಂಡಿಯಾದ ಸದ್ಯದ ಚಿಂತೆಯೆಂದರೆ ಕೆ.ಎಲ್‌. ರಾಹುಲ್‌ ಅವರ ಸತತ ವೈಫ‌ಲ್ಯ (1 ಮತ್ತು 0). ಇದರಿಂದ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್‌ನ ಸ್ಟಾರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ತಮ್ಮ ಸ್ಥಾನವನ್ನು ಭದ್ರಪಡಿಸುವ ಸೂಚನೆ ನೀಡಿರುವುದರಿಂದ ಹಾಗೂ ರೋಹಿತ್‌ ಹನ್ನೊಂದರ ಬಳಗವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ರಾಹುಲ್‌ ಸ್ಥಾನ ಅಲುಗಾಡುತ್ತಿರುವುದು ಸುಳ್ಳಲ್ಲ.

ನಾಯಕ ಕೊಹ್ಲಿ ನೀಡಿದ ಹೇಳಿಕೆ ಪ್ರಕಾರ ರೋಹಿತ್‌ಗೆ ಮೊದಲೆರಡು ಪಂದ್ಯಗಳಲ್ಲಷ್ಟೇ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಸೋಮವಾರ ಕಠಿನ ಅಭ್ಯಾಸ ನಡೆಸಿದ್ದನ್ನು ಕಂಡಾಗ 3ನೇ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ ಎಂದೇ ಭಾವಿಸಬೇಕಾಗುತ್ತದೆ. ಅಕಸ್ಮಾತ್‌ ರೋಹಿತ್‌ ವಿಶ್ರಾಂತಿ ಮುಂದುವರಿದರಷ್ಟೇ ರಾಹುಲ್‌ ಸ್ಥಾನ ಉಳಿಸಿಕೊಳ್ಳಬಹುದು ಎಂಬುದು ಸದ್ಯದ ಲೆಕ್ಕಾಚಾರ. ಅಂದಮಾತ್ರಕ್ಕೆ ರಾಹುಲ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇರಲಿಕ್ಕಿಲ್ಲ. ಇಲ್ಲಿ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರನ್ನು ಗಟ್ಟಿಗೊಳಿಸುವುದು ತಂಡದ ಯೋಜನೆ ಆಗಿರಲಿದೆ.

ರವಿವಾರ ಸೂರ್ಯಕುಮಾರ್‌ ಟೀಮ್‌ ಇಂಡಿಯಾ ಪ್ರವೇಶಿಸಿದರೂ ಅವರಿಗೆ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ. ಬ್ಯಾಟಿಂಗ್‌ ಸಾಮರ್ಥ್ಯ ನೋಡದೆ ಅವರನ್ನು ತಂಡದಿಂದ ಕೈಬಿಡುವುದು ಕೂಡ ಸೂಕ್ತವಲ್ಲ.

ಬೌಲಿಂಗ್‌ ಬದಲಾವಣೆ ಅಸಂಭವ
ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್‌ ಸಾಮರ್ಥ್ಯ ಹೊಂದಿರುವ ಇಂಗ್ಲೆಂಡನ್ನು 164ಕ್ಕೆ ನಿಯಂತ್ರಿಸಿದ್ದು ಭಾರತದ ಬೌಲರ್‌ಗಳ ಹೆಚ್ಚುಗಾರಿಕೆ. ಭುವನೇಶ್ವರ್‌, ಸುಂದರ್‌ ಮತ್ತು ಠಾಕೂರ್‌ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಫಿಟ್‌ನೆಸ್‌ಗೆ ಮರಳಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ 4 ಓವರ್‌ ಎಸೆಯುವ ಸಾಮರ್ಥ್ಯ ತೋರಿರುವುದು ಕೂಡ ಉತ್ತಮ ಬೆಳವಣಿಗೆ. ರವಿವಾರದ ಡೆತ್‌ ಓವರ್‌ಗಳಲ್ಲಿ ಭಾರತ ಉತ್ತಮ ಹಿಡಿತ ಸಾಧಿಸಿತ್ತು.

ಹೀಗಾಗಿ ಆತಿಥೇಯರ ಬೌಲಿಂಗ್‌ ಸರದಿಯಲ್ಲಿ ಬದಲಾವಣೆ ಗೋಚರಿಸುವ ಸಾಧ್ಯತೆ ಕಡಿಮೆ. ಸೈನಿ, ಚಹರ್‌ ಅವರೆಲ್ಲ ಸದ್ಯ ಕಾಯಬೇಕಾದುದು ಅನಿವಾರ್ಯ. ಸರಣಿಯಲ್ಲಿ ಮೇಲುಗೈ ಸಾಧಿಸಿದರೆ ಇವರಿಗೆ ಹಂತ ಹಂತವಾಗಿ ಅವಕಾಶ ಸಿಗಬಹುದು.

ಇಂಗ್ಲೆಂಡ್‌ ಗಾಯಗೊಂಡ ಹುಲಿ
ದ್ವಿತೀಯ ಪಂದ್ಯದಲ್ಲಿ ಎಡವಿದರೂ ನಂ.1 ಖ್ಯಾತಿಯ ಇಂಗ್ಲೆಂಡ್‌ ಅಪಾ ಯಕಾರಿ ತಂಡ ಎಂಬುದಲ್ಲಿ ಎರಡು ಮಾತಿಲ್ಲ. ಅದೀಗ ಗಾಯಗೊಂಡ ಹುಲಿ. ರಾಯ್‌ ಅವರಂತೂ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಜತೆಗೆ ಮಾಲನ್‌, ಮಾರ್ಗನ್‌, ಸ್ಟೋಕ್ಸ್‌, ಬಟ್ಲರ್‌… ಎಲ್ಲರೂ ಬಿಗ್‌ ಹಿಟ್ಟರ್. ಆಂಗ್ಲರಲ್ಲಿ ತಿರುಗಿ ಬೀಳುವ ತಾಕತ್ತು ಇದ್ದೇ ಇದೆ.

ದ್ವಿತೀಯ ಪಂದ್ಯದಲ್ಲಿ ಮಾರ್ಕ್‌ ವುಡ್‌ ಗಾಯಾಳಾಗಿ ಹೊರಗುಳಿದದ್ದು ಇಂಗ್ಲೆಂಡಿಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ವುಡ್‌ ಮಂಗಳವಾರ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಮೊಯಿನ್‌ ಅಲಿ ಕೂಡ ಕಾಯುತ್ತಿದ್ದಾರೆ.

ಟಾಪ್ ನ್ಯೂಸ್

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್​​ ಅಭಿಷೇಕ ಮಾಡಿ ಯುವಕರು!

ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್​​ ಅಭಿಷೇಕ ಮಾಡಿ ಯುವಕರು!

ಪಾಕ್‌ನ ಎಲ್ಲೆಲ್ಲೂ ಪೇಪರ್‌ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ

ಪಾಕ್‌ನ ಎಲ್ಲೆಲ್ಲೂ ಪೇಪರ್‌ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ

ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ

ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ

ಬ್ರಿಟನ್‌ ಪ್ರಧಾನಿ ಬೋರಿಸ್‌ಗೆ ಮತ್ತೆ ಹಿನ್ನಡೆ: ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಸೋಲು

ಬ್ರಿಟನ್‌ ಪ್ರಧಾನಿ ಬೋರಿಸ್‌ಗೆ ಮತ್ತೆ ಹಿನ್ನಡೆ: ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಸೋಲು

ವಾಷಿಂಗ್ಟನ್‌: ಸ್ಪೇಸ್‌ ಲಾಂಚ್‌ ಸಿಸ್ಟಂ ಯಶಸ್ವಿ ಪರೀಕ್ಷೆ

ವಾಷಿಂಗ್ಟನ್‌: ಸ್ಪೇಸ್‌ ಲಾಂಚ್‌ ಸಿಸ್ಟಂ ಯಶಸ್ವಿ ಪರೀಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ

ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ

ವಿಶ್ವಕಪ್‌ ಗೆಲುವಿಗೆ 39ರ ಸಂಭ್ರಮ

ಕಪಿಲ್‌ದೇವ್‌ ಸಾರಥ್ಯದ ವಿಶ್ವಕಪ್‌ ಗೆಲುವಿಗೆ 39ರ ಸಂಭ್ರಮ

ರಣಜಿ ಟ್ರೋಫಿ ಫೈನಲ್‌: ಇನ್ನಿಂಗ್ಸ್‌ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ

ರಣಜಿ ಟ್ರೋಫಿ ಫೈನಲ್‌: ಇನ್ನಿಂಗ್ಸ್‌ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ

ಅಭ್ಯಾಸ ಪಂದ್ಯ: ಚೇತೇಶ್ವರ್‌ ಪೂಜಾರ ವಿಫ‌ಲ, ರಿಷಭ್‌ ಪಂತ್‌ ಯಶಸ್ವಿ

ಅಭ್ಯಾಸ ಪಂದ್ಯ: ಚೇತೇಶ್ವರ್‌ ಪೂಜಾರ ವಿಫ‌ಲ, ರಿಷಭ್‌ ಪಂತ್‌ ಯಶಸ್ವಿ

ವಿಂಬಲ್ಡನ್‌-2022: ಸೆರೆನಾ ವಿಲಿಯಮ್ಸ್‌ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್‌

ವಿಂಬಲ್ಡನ್‌-2022: ಸೆರೆನಾ ವಿಲಿಯಮ್ಸ್‌ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್‌

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್​​ ಅಭಿಷೇಕ ಮಾಡಿ ಯುವಕರು!

ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್​​ ಅಭಿಷೇಕ ಮಾಡಿ ಯುವಕರು!

ಪಾಕ್‌ನ ಎಲ್ಲೆಲ್ಲೂ ಪೇಪರ್‌ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ

ಪಾಕ್‌ನ ಎಲ್ಲೆಲ್ಲೂ ಪೇಪರ್‌ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ

ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ

ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.